Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಅಗಸ್ಟ್ 16 ರಂದು ಮರವಂತೆ ಮಹಾರಾಜ ಶ್ರೀ ವರಾಹ ಸ್ವಾಮಿ ದೇವಸ್ಥಾನದ ಕರ್ಕಾಟಕ ಅಮಾವಾಸ್ಯೆ ಜಾತ್ರೆ – ಸತೀಶ್ ಎಂ. ನಾಯ್ಕ್

ಮರವಂತೆ : ಮಹಾರಾಜ ಶ್ರೀ ವರಾಹ ಸ್ವಾಮಿ  ದೇವಸ್ಥಾನದಲ್ಲಿ ವರ್ಷಂಪ್ರತಿ ಕರ್ಕಾಟಕ ಮಾಸದಲ್ಲಿ ಜರಗುವ ಕರ್ಕಾಟಕ ಅಮಾವಾಸ್ಯೆ  ಜಾತ್ರೆ ಬಹಳ ವಿಶೇಷ. ಪ್ರತಿ ವರ್ಷ ಅಷಾಢ ಮಾಸದಲ್ಲಿ ಕರ್ಕಾಟಕ ಅಮಾವಾಸ್ಯೆಯಂದು ಸಂಪನ್ನವಾಗುವ ಈ ಜಾತ್ರೆಯ ದಿನ ನವ ದಂಪತಿಗಳು ಹಾಗೂ ಭಕ್ತ ಸಮೂಹ ನಾನಾ ಮೂಲೆಗಳಿಂದ ದೇವರ ದರ್ಶನ ಪಡೆಯಲು ಭಾರೀ ಉತ್ಸಾಹದಿಂದ ಆಗಮಿಸಿ ತಮ್ಮ ಎಲ್ಲಾ ಕಷ್ಟಗಳನ್ನು ಮರೆತು ದೇವದರ್ಶನ ಪಡೆದು ಪೂಜೆ ಸಲ್ಲಿಸುವುದು ಇಲ್ಲಿನ ವಾಡಿಕೆ. ಈ ದಿನ ಸಮುದ್ರ ಸ್ನಾನ ಮಾಡಿದರೆ ರೋಗ, ರುಜಿನಾದಿಗಳನ್ನು ದೇವರು ಪರಿಹರಿಸುತ್ತಾನೆ, ಪ್ರಕೃತಿ ವಿಕೋಪವನ್ನು ಸಹ ತಡೆಯುವ ಶಕ್ತಿ ಈ ದೇವರದ್ದು ಎನ್ನುವ ನಂಬಿಕೆಯಿದೆ.

ಕರ್ಕಾಟಕ ಮಾಸದಲ್ಲಿ ಬರುವ ಅಮಾವಾಸ್ಯೆ ದಿನ ಶ್ರೀವರಾಹ ಸ್ವಾಮಿಯ ವಾರ್ಷಿಕ ಹಬ್ಬ ನಡೆಯುವುದು ದೇವಸ್ಥಾನದ ಪರಂಪರೆಯಾಗಿದೆ. ಆದರೆ ಕೆಲವು ಕ್ಯಾಲೆಂಡರ್ ಹಾಗೂ ಶ್ರೀ ಪಂಚಾಂಗದಲ್ಲಿ ಜು.17ಕ್ಕೆ ಕರ್ಕಾಟಕ ಅಮಾವಾಸ್ಯೆಯೆಂದು ತಪ್ಪಾಗಿ ಮುದ್ರಿತಗೊಂಡಿದೆ. ಆದರೆ ಮರವಂತೆಯಲ್ಲಿ ಈ ವರ್ಷದ ಕರ್ಕಾಟಕ ಅಮಾವಾಸ್ಯೆ ಜಾತ್ರೆಯು ಆ. 16ರಂದು ನಡೆಯಲಿದೆ. ಭಕ್ತರು ಗೊಂದಲ ಮಾಡಿಕೊಳ್ಳದೆ ಸಹಕರಿಸಬೇಕು ಎನ್ನುವುದಾಗಿ ಮರವಂತೆಯ ಶ್ರೀ ವರಾಹ ಸ್ವಾಮಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸತೀಶ್ ಎಂ. ನಾಯಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *