
ಕೋಟ: ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇವಸ್ಥಾನದ ವಠಾರದಲ್ಲಿ ಜು. 9ರಂದು ಚರ್ಮ ರೋಗ ತಪಾಸಣೆ ಶಿಬಿರವನ್ನು ಪ್ರಸಿದ್ದ ತಜ್ಞರಾದ ಡಾ. ಕೆ. ಎಸ್. ಉಪಾಧ್ಯ ಯಶಸ್ವಿಯಾಗಿ ನಡೆಸಿಕೊಟ್ಟರಲ್ಲದೆ ಲಭ್ಯವಿರುವ ಔಷಧಗಳನ್ನು ಉಚಿತವಾಗಿ ವಿತರಿಸಿದರು. ಸಾಲಿಗ್ರಾಮ ಶ್ರೀಗುರುನರಸಿಂಹ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಡಾ ಕೆ. ಎಸ್ ಕಾರಂತರು ಶಿಬಿರವನ್ನು ದೀಪ ಬೆಳಗಿಸಿ ಚಾಲನೆ ನೀಡಿದರು.

70ಕ್ಕೂ ಮಿಕ್ಕಿ ಸ್ಥಳೀಯ ಫಲಾನುಭವಿಗಳು ಈ ಶಿಬಿರದ ಪ್ರಯೋಜನವನ್ನು ಪಡೆದರು. ಈ ಸಂದರ್ಭದಲ್ಲಿ ದೇವಸ್ಥಾನದ ವತಿಯಿಂದ ಗೌರವಿಸಲಾಯಿತು. ದೇವಸ್ಥಾನದ ಕೋಶಾಧಿಕಾರಿ ಪರುಶರಾಮ್ ಭಟ್ , ಮ್ಯಾನೇಜರ್ ನಾಗರಾಜ್ ಹಂದೆ ಮತ್ತಿತರರು ಉಪಸ್ಥಿತರಿದ್ದರು.
Leave a Reply