Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಬ್ರಹ್ಮಾವರ-ಜನ್ನಾಡಿ ರಸ್ತೆ; ಲೋಕೋಪಯೋಗಿ ಅಧಿಕಾರಿಗಳ ವಿರುದ್ದ ನ್ಯಾಯಾಂಗ ನಿಂದನೆ ದೂರು ದಾಖಲು

ಬ್ರಹ್ಮಾವರ-ಜನ್ನಾಡಿ ರಸ್ತೆ; ಲೋಕೋಪಯೋಗಿ ಅಧಿಕಾರಿಗಳ ವಿರುದ್ದ ನ್ಯಾಯಾಂಗ ನಿಂದನೆ ದೂರು ದಾಖಲು

ಬ್ರಹ್ಮಾವರ ಜನ್ನಾಡಿ ಸೌಡ ಸಿದ್ದಾಪುರ ಜಿಲ್ಲಾ ಮುಖ್ಯ ರಸ್ತೆಯನ್ನು ಹಿಂದಿನ ಸರಕಾರ ರಾಜ್ಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಿ ನಂತರ ಕೆಲವೇ ತಿಂಗಳಲ್ಲಿ ಪುನಃ ಜಿಲ್ಲಾ ಮುಖ್ಯ ರಸ್ತೆಯನ್ನಾಗಿ ಕೆಳದರ್ಜೆಗಿಳಿಸಲಾಗಿತ್ತು. ಈ ವಿವಾದಿತ ರಸ್ತೆಮೇಲ್ದರ್ಜೆಗೆರಿಸುವಂತೆ ಹಿಂದೆ ಹಲವು ಸಮಾಜಮುಖಿ ಹೋರಾಟಗಾರರು ಕಳೆದ 30 ವರ್ಷದಿಂದ ಜಿಲ್ಲಾ ಮುಖ್ಯರಸ್ತೆಯ ಅಗಲ ಬಾರೀ ಕಿರಿದಾಗಿದ್ದು, ವಾಹನ ದಟ್ಟಣೆಯಿಂದ ಆಗಾಗ ರೋಡ್ ಬ್ಲಾಕ್ ಆಗುತ್ತಿದೆ, ಅಪಘಾತದ ಪ್ರಮಾಣ ಜಾಸ್ತಿ ಆಗಿದೆ ಎಂದು ರಸ್ತೆ ಅಭಿವೃದ್ಧಿ ಪಡಿಸುವಂತೆ ಹೋರಾಟ ಮಾಡಿ ಹಲವು ಅರ್ಜಿ ಲೋಕೋಪಯೋಗಿ ಇಲಾಖೆಗೆ ಹಾಗೂ ಸರಕಾರಕ್ಕೆ ಸಲ್ಲಿಸಿದ್ದರು.

ಅದರ ಫಲವಾಗಿ ಜನರ ಬಹುಕಾಲದ ಬೇಡಿಕೆಯಂತೆ ಸದ್ರಿ ರಸ್ತೆಯನ್ನು ಲೋಕೋಪಯೋಗಿ ಇಲಾಖೆ ಉನ್ನತ ಅಧಿಕಾರಿಗಳೂ ಸಹ ಬಾಗಿಯಾಗಿದ್ದ ಸಂಪುಟ ಸಭೆಯಲ್ಲಿ ಹಿಂದಿನ ಸರಕಾರದ ಮಾನ್ಯ ಮುಖ್ಯ ಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ರಾಜ್ಯ ಹೆದ್ದಾರಿಯಾಗಿ ಮೇಲ್ದರ್ಜೆಗೆರಿಸಿದ್ದರು. ನಂತರ ರೋಡ್ ಮಾರ್ಜಿನ್ ಅತಿಕ್ರಮಣದಾರರ ಲಾಬಿಗೆ ಮಣಿದು ರಾಜಕೀಯ ಪ್ರೇರಿತವಾಗಿ ರಾಜ್ಯ ಹೆದ್ದಾರಿಯಾಗಿ ಘೋಷಣೆ ಆಗಿದ್ದ ಸದ್ರಿ ರಸ್ತೆ ಪುನಹ ಜಿಲ್ಲಾ ಮುಖ್ಯ ರಸ್ತೆಯಾಗಿ ಹಿಂಬಡ್ತಿಯಾಗಿತ್ತು.

ಸರಕಾರದ ಈ ನಡೆ ಸಾರ್ವಜನಿಕ ಹಿತಾಸಕ್ತಿ ಹಾಗೂ ಅಭಿವೃದ್ಧಿಗೆ ಮಾರಕವಾಗಿದ್ದು ಸರಕಾರದ ಈ ನಡೆ ಸರಿಯಲ್ಲ ಎಂದು ಬಾರಕೂರಿನ ಆರ್ಟಿಐ ಕಾರ್ಯಕರ್ತ ಹಾಗೂ ಸಾಮಾಜಿಕ ಹೋರಾಟಗಾರ ಶಂಕರ್ ಶಾಂತಿ ಮಾನ್ಯ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ WP no 6898/2022 LB RES PIL ಸಲ್ಲಿಸಿ ಪ್ರಶ್ನೆ ಮಾಡಿದ್ದು ಆ ಅರ್ಜಿ ದಿನಾಂಕ 16/08/2022 ರಂದು ಮಾನ್ಯ ಮುಖ್ಯ ನ್ಯಾಯ ಮೂರ್ತಿಯವರ ನೇತೃತ್ವದ ದ್ವಿಸದಸ್ಯ ಪೀಠದಲ್ಲಿ ವಿಚಾರಣೆಗೆ ಬಂದು, ಅರ್ಜಿದಾರರು ಪುನಃ ಸದ್ರಿ ರಸ್ತೆಯ ಕುಂದುಕೊರತೆ ಬಗ್ಗೆ ಪ್ರೆಸ್ ಅರ್ಜಿ ಚೀಪ್ ಇಂಜಿನಿಯರ್ ಲೋಕೋಪಯೋಗಿ ಇಲಾಖೆ ಉಡುಪಿ ಇವರಿಗೆ ಸಲ್ಲಿಸಲು ನ್ಯಾಯ ಪೀಠ ಸೂಚಿಸಿತ್ತು ಅದನ್ನು ಚೀಪ್ ಇಂಜಿನಿಯರ್ ಪರಿಶೀಲನೆ ಮಾಡಿ ಕಾನೂನಿನಂತೆ ನಿಯಾಮಾನುಸಾರ ಪರಿಗಣಿಸಿ ಕ್ರಮ ಕೈಗೊಳ್ಳಬೇಕು ಎಂದು ಆದೇಶ ಮಾಡಲಾಗಿತ್ತು.

ಆದರೆ ರಸ್ತೆ ಅಭಿವೃದ್ಧಿ ವಿಷಯದಲ್ಲಿ ಕೆಲವೇ ಆಯ್ದ ಸ್ಥಳದಲ್ಲಿ 3ಅಡಿ ಅಗಲ ಮಾತ್ರ ಮಾಡಿದ್ದು, ಕೋರ್ಟ್ ಆದೇಶ ಪಾಲನೆ ಮಾಡದ ಹಿನ್ನಲೆಯಲ್ಲಿ ಸಮಗ್ರ ದಾಖಲೆ ಸಹಿತ ಪುನಃ ಸಾರ್ವಜನಿಕ ಹಿತಾಸಕ್ತಿಅರ್ಜಿ WP no 1737/2023 GM RES PIL ನಲ್ಲಿ ಮಾನ್ಯ ಉಚ್ಚ ನ್ಯಾಯಾಲಯದ ಮುಖ್ಯನ್ಯಾಯ ಮೂರ್ತಿಯವರ ನೇತೃತ್ವದ ದ್ವಿಸದಸ್ಯ ಪೀಠದಲ್ಲಿ ಪ್ರಕರಣ ದಾಖಲಿಸಿ ಮಾನ್ಯ ನ್ಯಾಯಾಲಯದ ಗಮನಕ್ಕೆ ತರಲಾಗಿತ್ತು.

ದಿನಾಂಕ 28/06/2023 ರಂದು ವಿಚಾರಣೆಗೆ ಈ ಪ್ರಕರಣ ಬಂದು ವಾದ- ವಿವಾದ ಆಲಿಸಿ ದಾಖಲೆ ಪರಿಶೀಲನೆ ಮಾಡಿದ ನ್ಯಾಯಾದೀಶರು ಒಂದೇ ವಿಷಯದಲ್ಲಿ ಎರಡು ಬಾರಿ ಪಿಐಎಲ್ ಹಾಕುವುದು ಅಪ್ರಸ್ತುತ, ಹಿಂದಿನ ಆದೇಶ ಪಾಲನೆ ಮಾಡದ ಬಗ್ಗೆ ಸಂಬಂಧ ಪಟ್ಟವರ ವಿರುದ್ಧ ಅರ್ಜಿದಾರರು ನ್ಯಾಯಾoಗ ನಿಂದನೆ (ಸಿವಿಲ್ ) ಪ್ರಕರಣ ದಾಖಲಿಸ ಬಹುದು ಎಂದು ಮೌಖಿಕವಾಗಿ ಸೂಚಿಸಿದ ಹಿನ್ನಲೆಯಲ್ಲಿ ಅದಕ್ಕೆ ಒಪ್ಪಿ, ಶಂಕರ್ ಶಾಂತಿಯವರ ವಕೀಲರು ಮೆಮೊ ಹಾಕಿ ಪಿಐಎಲ್ ಹಿಂಪಡೆದು, WP no 6898/2022 LB RES PIL ನ ಆದೇಶಪಾಲನೆ ಮಾಡದ ಲೋಕೋಪಯೋಗಿ ಇಲಾಖೆ ಉಡುಪಿಯ ಹಿರಿಯ ಅಧಿಕಾರಿಗಳ ವಿರುದ್ಧ ನ್ಯಾಯಾoಗ ನಿoದನೆ (ಸಿವಿಲ್ ) ಪ್ರಕರಣ ದಾಖಲಿಸಲಾಗಿದೆ.

ಅರ್ಜಿದಾರರ ಪರವಾಗಿ ವಕೀಲರಾದ ದಿಲ್ರಾಜ್ ಜೂಡ್ ರೋಹಿತ್ ಸಿಕ್ವೆರಾ ವಾದ ಮಂಡಿಸಿದ್ದಾರೆ.

Leave a Reply

Your email address will not be published. Required fields are marked *