
ಆಂಧ್ರಪ್ರದೇಶದ ವಿಶಾಖಪಟ್ಟಣ (ರಾಜಂ)ನಲ್ಲಿ ನಡೆದ ಆಲ್ ಇಂಡಿಯಾ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಕರ್ನಾಟಕದ ಪ್ರತಿನಿಧಿಯಾಗಿ M-1 66 ಕೆ.ಜಿ ವಿಭಾಗದಲ್ಲಿ ಚಿನ್ನ ಹಾಗೂ ಬೆಳ್ಳಿ ಪದಕ ಪಡೆಯುವುದರೊಂದಿಗೆ 4ನೇ ಬಾರಿ ಆಲ್ ಇಂಡಿಯಾ ಚಾಂಪಿಯನ್ ಹಾಗೂ ಆಲ್ ಇಂಡಿಯಾ ಡೆಡ್ ಲಿಫ್ಟ್ ನಲ್ಲಿ 3ನೇ ಬಾರಿಗೆ ತನ್ನ ದಾಖಲೆ ಯನ್ನು ತಾವೇ ಮುರಿದ ಹೆಗ್ಗಳಿಕೆ ಅಂತರಾಷ್ಟ್ರೀಯ ಕ್ರೀಡಾಪಟು ಸತೀಶ್ ಖಾರ್ವಿಯವರದಾಗಿದೆ.
ದಾಖಲೆ ವಿವರ :
1) 2019ರಲ್ಲಿ 210 ಕೆಜಿ ಆಲ್ ಇಂಡಿಯಾ ದಾಖಲೆ ಕೇರಳ
2) 2021ರಲ್ಲಿ 217.5 ಕೆಜಿ ಆಲ್ ಇಂಡಿಯಾ ದಾಖಲೆ ಕೇರಳ
3) 2022ರಲ್ಲಿ 220 ಕೆಜಿ ಆಲ್ ಇಂಡಿಯಾ ದಾಖಲೆ ಮಹಾರಾಷ್ಟ್ರ
4) 2023ರಲ್ಲಿ 221 ಕೆಜಿ ಆಲ್ ಇಂಡಿಯಾ ನೂತನ ದಾಖಲೆ ಆಂಧ್ರ ಪ್ರದೇಶ್
Leave a Reply