
ಸಾಲಿಗ್ರಾಮ : ಮಹಿಳಾ ವೇದಿಕೆ ಸಾಲಿಗ್ರಾಮ ಅಂಗ ಸಂಸ್ಥೆಯ ವಾರ್ಷಿಕ ಮಹಾಸಭೆ ಮತ್ತು ಸನ್ಮಾನ ಕಾರ್ಯಕ್ರಮ ಜು. 16.ರಂದು ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನದ ಜ್ಞಾನ ಮಂದಿರದಲ್ಲಿ ನಡೆಯಿತು. ಮಹಾಸಭೆಯಲ್ಲಿ ಬಿಎಸ್‍ಎನ್‍ಎಲ್ ನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಸಬ್ ಡಿವಿಷನಲ್ ಇಂಜಿನಿಯರ್ ವಾಗ್ದೇವಿ ಮಂಜುನಾಥ ಉಪಾಧ್ಯ ಹಾಗೂ ಪ್ರೋಲೇಕ್ ಟೆಕ್ನಾಲಜಿಸ್ ಪ್ರೈವೇಟ್ ಲಿ , ಸಾಸ್ತಾನ . ಇದರ ಸಿಇಓ ಸುಮಂಗಲ ತುಂಗ , ಬಿ.ಇ . ಇವರುಗಳನ್ನು ಸನ್ಮಾನಿಸಲಾಯಿತು .
ಅಲ್ಲದೆ ಇತ್ತೀಚೆಗೆ ಮಾಹೆ ಮಣಿಪಾಲ ಇಲ್ಲಿ ಪಿಎಚ್‍ಡಿ ಪದವಿ ಪಡೆದ ಸಾಧನೆಗಾಗಿ ಕು. ದಿವ್ಯಾ ಅಡಿಗ ಕಾರ್ಕಡ ಇವರನ್ನು ವಿಶೇಷ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.
ಮಹಿಳಾ ವೇದಿಕೆ ಅಧ್ಯಕ್ಷೆ ಯಶೋದ. ಸಿ. ಹೊಳ್ಳ ಅಧ್ಯಕ್ಷತೆ ವಹಿಸಿದ್ದರು. ಮಹಾಸಭೆಗೆ ಪೂರ್ವಭಾವಿಯಾಗಿ ನಡೆಸಿದ ಆಷಾಢ ಹಿಗ್ಗು ಕಾರ್ಯಕ್ರಮದಂದು ಸ್ಪರ್ಧೆಗಳಲ್ಲಿ ಒಟ್ಟು 47 ಜನ ವಿಜೇತರಾಗಿದ್ದು ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿನಿಯರಿಗೆ ಸ್ಕಾಲರ್ ಶಿಪ್, ಅಶಕ್ತರಿಗೆ ನೆರವು ನೀಡಲಾಯಿತು.
ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಕೆಎಸ್ ಕಾರಂತ್ ಕೂಟ ಮಹಾ ಜಗತ್ತಿನ ಕೇಂದ್ರ ಸಂಸ್ಥೆಯ ಅಧ್ಯಕ್ಷ ಎಚ್. ಸತೀಶ್ ಹಂದೆ, ಸಾಲಿಗ್ರಾಮ ಅಂಗ ಸಂಸ್ಥೆಯ ಅಧ್ಯಕ್ಷ ಶ್ರೀಪತಿ ಅಧಿಕಾರಿ ಮತ್ತು ಕೇಂದ್ರ ಸಂಸ್ಥೆಯ ಜೊತೆ ಕಾರ್ಯದರ್ಶಿ ಸುಮತಿ ಕೋರ್ಯ ಮುಖ್ಯ ಅಭ್ಯಾಗತರಾಗಿ ಉಪಸ್ಥಿತರಿದ್ದರು.
ಮಹಿಳಾ ವೇದಿಕೆ ಉಪಾಧ್ಯಕ್ಷೆ ರೇವತಿ ಐತಾಳ ಸ್ವಾಗತಿಸಿದರು. ಕಾರ್ಯದರ್ಶಿ ಶಿವಪ್ರಭ ಅಲ್ಸೆ ವರದಿ ವಾಚಿಸಿದರು. ಕೋಶಾಧಿಕಾರಿ ಪೂರ್ಣಿಮಾ ಅಧಿಕಾರಿಯಿಂದ ಲೆಕ್ಕಪತ್ರ ಮಂಡನೆ, ಮಹಿಳಾ ವೇದಿಕೆ ಸದಸ್ಯರಾದ ಗೀತಾ ಅಧಿಕಾರಿ ,nಮಾಲತಿ ಎಸ್ ರಾವ್ , ಲತಾ ಹೊಳ್ಳ , ವನಿತಾ ಉಪಾಧ್ಯ , ಸನ್ಮಾನ ಪತ್ರ ಮತ್ತು ಪರಿಚಯ ವಾಚಿಸಿದರು. ಭಾರತಿ ಹೇರ್ಳೆ, ಶಿವಪ್ರಭ ಆಲ್ಸೆ ಸಹಕರಿಸಿದರು ಅಮೃತ ಉಪಾಧ್ಯ ತಂಡ ಮತ್ತು ಮಹಿಳಾ ವೇದಿಕೆ ಸದಸ್ಯರಿಂದ ನೃತ್ಯ ಕಾರ್ಯಕ್ರಮ ನಡೆಯಿತು. ಸುಜಾತ ಬಾಯರಿ ಕಾರ್ಯಕ್ರಮ ನಿರೂಪಿಸಿದರು. ವೇದಿಕೆಯ ಉಪಾಧ್ಯಕ್ಷೆ ವಿಜಯಲಕ್ಷ್ಮಿ ತುಂಗ ವಂದನಾರ್ಪಣೆಗೈದರು.
ಮಹಿಳಾ ವೇದಿಕೆ ಸಾಲಿಗ್ರಾಮ ಅಂಗ ಸಂಸ್ಥೆಯ ವಾರ್ಷಿಕ ಮಹಾಸಭೆಯಲ್ಲಿ ಬಿಎಸ್‍ಎನ್‍ಎಲ್ ನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಸಬ್ ಡಿವಿಷನಲ್ ಇಂಜಿನಿಯರ್ ವಾಗ್ದೇವಿ ಮಂಜುನಾಥ ಉಪಾಧ್ಯ ಹಾಗೂ ಪ್ರೋಲೇಕ್ ಟೆಕ್ನಾಲಜಿಸ್ ಪ್ರೈವೇಟ್ ಲಿ, ಸಾಸ್ತಾನ . ಇದರ ಸಿಇಓ ಸುಮಂಗಲ ತುಂಗ , ಬಿ.ಇ .ಇವರುಗಳನ್ನು ಸನ್ಮಾನಿಸಲಾಯಿತು. ಮಹಿಳಾ ವೇದಿಕೆ ಅಧ್ಯಕ್ಷೆ ಯಶೋದ. ಸಿ. ಹೊಳ್ಳ, ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಕೆಎಸ್ ಕಾರಂತ್ ಕೂಟ ಮಹಾ ಜಗತ್ತಿನ ಕೇಂದ್ರ ಸಂಸ್ಥೆಯ ಅಧ್ಯಕ್ಷ ಎಚ್. ಸತೀಶ್ ಹಂದೆ ಇದ್ದರು.
Leave a Reply