

ಉಡುಪಿ : ಅಂಬಲಪಾಡಿ ಗ್ರಾ. ಪಂ. ವ್ಯಾಪ್ತಿಯ ಬಂಕೇರಕಟ್ಟ ಆಚಾರಿಗುಂಡಿಯಲ್ಲಿ ಉಜ್ವಲ ಸಂಜೀವಿನಿ ಸದಸ್ಯರು ಕೃಷಿ ಭೂಮಿಗೆ ಹಾಲೆರೆಯುವ ಮೂಲಕ ಸುಮಾರು 3.5 ಎಕರೆ ಹಡಿಲು ಭೂಮಿ ಕೃಷಿ ಆಂದೋಲನ ನಾಟಿ ಕಾರ್ಯ ನಡೆಸಿದರು.
ಉಜ್ವಲ ಸಂಜೀವಿನಿ ಸದಸ್ಯರ ಉಪಸ್ಥಿತಿಯಲ್ಲಿ ಸಂಜೀವಿನಿ ಒಕ್ಕೂಟದ ಅಧ್ಯಕ್ಷರಾದ ಸವಿತಾ ಸಂತೋಷ್ ಅವರ ನೇತೃತ್ವದಲ್ಲಿ ಕೃಷಿ ಭೂಮಿಗೆ ಹಾಲೆರೆಯಿವ ಮೂಲಕ ಅಂಬಲಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಂಕೇರಕಟ್ಟ ಆಚಾರಿಗುಂಡಿ ಯಲ್ಲಿ ನಾಟಿ ಕಾರ್ಯ ರಿಕೇಶ್ ಪಾಲನ್ ಸಹಕಾರದಲ್ಲಿ ಆರಂಭ ಆಯಿತು. ಈ ಸಂಧರ್ಭದಲ್ಲಿ ಕೃಷಿ ಇಲಾಖಾ ಸಹಾಯಕ ಕೃಷಿ ನಿರ್ಧೇಶಕರಾದ ಮೋಹನ್ ರಾಜ್, ಉಡುಪಿ ತಾಲೂಕು ತಾಂತ್ರಿಕ ವ್ಯವಸ್ಥಾಪಕರಾದ ಸಂಜನಾ ಶೆಟ್ಟಿ, & ಅಂಬಲಪಾಡಿ ಗ್ರಾಮ ಪಂಚಾಯತ್ ಸದಸ್ಯರಾದ ರಾಜೇಶ್ ಸುವರ್ಣ, ಭಾರತಿ ಭಾಸ್ಕರ್, ಸಂಜೀವಿನಿ ಒಕ್ಕೂಟದ ಕಾರ್ಯದರ್ಶಿ ಗೀತಾ ಹರೀಶ್ ಪಾಲನ್, ಕೃಷಿ ಉಧ್ಯೋಗ ಸಖಿ ವಾಣಿಶ್ರೀ ಅರುಣ್ & ಸದಸ್ಯರಾದ ಮೋಹಿನಿ ಭಾಸ್ಕರ್, ಲತಾ ಆನಂದ್, ಪ್ರಮೀಳಾ ಶಶಿಕಾಂತ್, LCRP ಇಂದಿರಾ ಪಾಂಡು, BRP EP ಪ್ರಮೀಳಾ ಸುಧಾಕರ ಆಚಾರ್ಯ, LCRP ಶಮಿತಾ ಅಮರನಾಥ್, LCRP ಪುಶ್ಪಲತಾ ಹರೀಶ್ ಆಚಾರ್ಯ, ಪ್ರೇಮಾ, ವಾಣಿ ಪ್ರಭಾಕರ್, ಸುಗಂಧಿ ಸುಧಾಕರ್… & ಸ್ಥಳೀಯ ಕೃಷಿ ಉತ್ಸಾಹಿ ಯುವಕರಾದ ಹರೀಶ್ ಆಚಾರ್ಯ, ಮೋಹನ್ ಪೂಜಾರಿ, ವಿನೋದ್ ಪೂಜಾರಿ, ಚೇತನ್, ನವೀನ್, ಕೃಷ್ಣಮೂರ್ತಿ ಉಪಸ್ಥಿತರಿದ್ದರು.
Leave a Reply