
ಕೋಟ : ಸಮಾಜದಲ್ಲಿತಾಯಿಯ ಋಣ ಸರ್ವ ಶ್ರೇಷ್ಠತೆಯನ್ನು ಹೊಂದಿದೆ ಎಂದು ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನ ಆಡಳಿತ ಮಂಡಳಿ ಟ್ರಸ್ಟಿ ಕೆ.ಅನಂತಪದ್ಮನಾಭ ಐತಾಳ್ ಹೇಳಿದರು
ಗುರುವಾರ ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನದ ಜ್ಞಾನಮಂದಿರದಲ್ಲಿ ವಿಪ್ರ ಮಹಿಳಾ ಬಳಗ ಸಾಲಿಗ್ರಾಮ ಇದರ 4ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿ ಒಂದು ಸಮುದಾಯದ ಸಂಸ್ಥೆಯಾಗಿ ಸಾಮಾಜಿಕ ಬದ್ಧತೆಯನ್ನು ಪ್ರದರ್ಶಿಸಿ ತನ್ನ ತಾಯ್ತನವನ್ನು ಇರಿಸಿಕೊಂಡು ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳುವ ಕಾರ್ಯ ನಿಜಕ್ಕೂ ಶ್ಲಾಘನೀಯ, ವಿಪ್ರ ಮಹಿಳಾ ಬಳಗ ಸಾಮಾಜಿಕ , ಸಾಂಸ್ಕೃತಿಕ , ಧಾರ್ಮಿಕ ಕ್ಷೇತದಲ್ಲಿ ತನ್ನದೆ ಆದ ಛಾಪನ್ನು ಮೂಡಿಸುತ್ತಿದೆ ಇದು ಪ್ರಶಂಸನೀಯ ಕಾರ್ಯ ಎಂದು ಅಭಿಪ್ರಾಯಪಟ್ಟರು. ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಕೆ.ಎಸ್ ಕಾರಂತ್ ಶುಭಾಶಂಸನೆಗೈದರು.
ಈ ಸಂದರ್ಭದಲ್ಲಿ ಲಲಿತಾ ಕಲಾ ಕ್ಷೇತ್ರದ ಸಾಧಕಿ ಶುಭ ಭಾಗವತ್ ಹಾಗೂ ಕೋಟದ ಸಾಮಾಜಿಕ ಸಂಸ್ಥೆ ಪಂಚವರ್ಣ ಯುವಕ ಮಂಡಲ ಅಧೀನ ಸಂಸ್ಥೆ ಮಹಿಳಾ ಘಟಕವನ್ನು ಗುರುತಿಸಿ ಸನ್ಮಾನಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ವಿಪ್ರ ಮಹಿಳಾ ಬಳಗ ಸಾಲಿಗ್ರಾಮ ಅಧ್ಯಕ್ಷೆ ಜ್ಞಾಹ್ನವಿ ಹೇರ್ಳೆ ವಹಿಸಿದ್ದರು. ಮುಖ್ಯ ಅಭ್ಯಾಗತರಾಗಿ ಸೇವಾ ಸಂಗಮ ಟ್ರಸ್ಟ್ ಕುಂದಾಪುರ ಇದರ ವಿಶ್ವಸ್ಥ ಮಂಡಳಿ ಕಾರ್ಯದರ್ಶಿ ಚಂದಿಕಾ ಧನ್ಯ, ಬ್ರಾಹ್ಮಣ ಪರಿಷತ್ ಸಾಲಿಗ್ರಾಮ ಅಧ್ಯಕ್ಷ ಶಿವರಾಮ ಉಡುಪ, ವಿಪ್ರ ಮಹಿಳಾ ಬಳಗದ ನೂತನ ಅಧ್ಯಕ್ಷೆ ಗಾಯಿತ್ರ ಹೊಳ್ಳ ಪಾಂಡೇಶ್ಚರ ಉಪಸ್ಥಿತರಿದ್ದರು. ವಿಪ್ರ ಮಹಿಳಾ ಬಳಗದ ಸುಜಾತ ಬಾಯರಿ ಪ್ರಾಸ್ತಾವನೆಗೈದರು ಸ್ವಾಗತಿಸಿದರು. ವಿಪ್ರ ಮಹಿಳಾ ಬಳಗದ ಸಂಚಾಲಕಿ ವನೀತಾ ಉಪಾಧ್ಯ ಸ್ವಾಗತಿಸಿದರು. ವಾರ್ಷಿಕ ವರದಿಯನ್ನು ಶುಭ ಶಿವಾನಂದ ಅಡಿಗ ವಾಚಿಸಿದರು.
ಕಾರ್ಯಕ್ರಮವನ್ನು ವಿಪ್ರ ಮಹಿಳಾ ಬಳಗದ ಮಹಾಲಕ್ಷ್ಮೀ ಸೋಮಯಾಜಿ ನಿರೂಪಿಸಿದರು. ಸದಸ್ಯೆ ಮೀನಾ ಕಾರಂತ್ ವಂದಿಸಿದರು. ಸ್ಮೀತಾರಾಣಿ, ಭಾರತಿ ಮಯ್ಯ ಸನ್ಮಾನ ಪತ್ರ ವಾಚಿಸಿದರು. ನರ್ಮದ ಹೇರ್ಳೆ, ಸುಕನ್ಯಾ ಸೋಮಯಾಜಿ ಬಹುಮಾನಿತರ ಪಟ್ಟಿ ವಾಚಿಸಿದರು. ಆಸಾಡಿ ಒಡ್ರ್ ಕಾರ್ಯಕ್ರಮದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಶಶಿಕಲಾ ಐತಾಳ್ ಸಹಕರಿಸಿದರು. ವಿಪ್ರ ಮಹಿಳಾ ಬಳಗ ಹಾಗೂ ಈಶ್ಯ ಲಾಸ್ಯ ತಂಡದಿಂದ ಸಾಂಸ್ಕ್ರತಿಕ ಕಾರ್ಯಕ್ರಮ ನೆರವೆರಿತು.
ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನದ ಜ್ಞಾನಮಂದಿರದಲ್ಲಿ ವಿಪ್ರ ಮಹಿಳಾ ಬಳಗ ಸಾಲಿಗ್ರಾಮ ಇದರ 4ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ಲಲಿತಾ ಕಲಾ ಕ್ಷೇತ್ರದ ಸಾಧಕಿ ಶುಭ ಭಾಗವತ್ ಸನ್ಮಾನಿಸಲಾಯಿತು.
Leave a Reply