
ಕೋಡಿ ಗ್ರಾಮಪಂಚಾಯತ್‍ನಿಂದ ತ್ಯಾಜ್ಯ ಎಸೆಯುವವರಿಗೆ ಖಡಕ್ ಎಚ್ಚರಿಕೆ
ಕೋಟ: ಕೋಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಪ್ರತಿ ಮನೆಗಳಿಂದ ಒಣ ಕಸ ಸಂಗ್ರಹಿಸಲಾಗುತ್ತಿದ್ದರೂ ಕೂಡಾ ಕೋಡಿ ಸೇತುವೆಯ ಬಳಿ ಸಾರ್ವಜನಿಕರು ತ್ಯಾಜ್ಯವನ್ನು ಎಸೆಯುತ್ತಿರುವುದು ಗ್ರಾಮ ಪಂಚಾಯತ್ ಗಮನಕ್ಕೆ ಬಂದಿರುತ್ತದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸೇತುವೆಯ ಬಳಿ ಹಾಗೂ ಇತರೆ ಸಾರ್ವಜನಿಕ ಪ್ರದೇಶಗಳಲ್ಲಿ ತ್ಯಾಜ್ಯ ಎಸೆಯುವವರಿಗೆ ಎಚ್ಚರಿಕೆ ಸೂಚನಾಫಲಕವನ್ನು ಅಳವಡಿಸಿದ್ದರೂ ಕೂಡಾ ಸೇತುವೆಯ ಬಳಿ ತ್ಯಾಜ್ಯವನ್ನು ಎಸೆಯುತ್ತಿರುವುದು ಕಂಡುಬಂದಿದೆ.
ಇದರ ಬಗ್ಗೆ ಸ್ಥಳ ಪರಿಶೀಲಿಸಲಾಗಿ ಆನ್ಲೈನ್ ವ್ಯವಹಾರದ ಬಾಕ್ಸ್‍ನಲ್ಲಿ ತ್ಯಾಜ್ಯ ಎಸೆದವರ ಹೆಸರು ಮತ್ತು ವಿಳಾಸ ಪತ್ತೆ ಆಗಿದ್ದು, ಆ ವಿಳಾಸದ ಆಧಾರದ ಮೇಲೆ ನೋಟೀಸು ನೀಡಲಾಗಿ, ಸದ್ರಿಯವರು ಗ್ರಾಮ ಪಂಚಾಯತ್‍ಗೆ ಬಂದು ಮುಚ್ಚಳಿಕೆ ಪತ್ರವನ್ನು ಬರೆದುಕೊಟ್ಟು ದಂಡನೆ ಶುಲ್ಕ ವಿಧಿಸಲಾಗಿದೆ.
ಇದು ಕೇವಲ ಇವರೊಬ್ಬರಿಗೆ ಅನ್ವಯಿಸದೇ ತ್ಯಾಜ್ಯವನ್ನು ಸಾರ್ವಜನಿಕ ಸ್ಥಳಗಳಲ್ಲಿ ಎಸೆಯುವ ಪ್ರತಿಯೊಬ್ಬರಿಗೂ ಅನ್ವಯಿಸುತ್ತದೆ. ಗ್ರಾಮಸ್ಥರು ತಮ್ಮ ಮನೆಯಲ್ಲಿ ಉತ್ಪತ್ತಿಯಾಗುವ ಒಣ ಕಸವನ್ನು ಗ್ರಾಮ ಪಂಚಾಯತ್ ಎಸ್ ಎಲ್ ಆರ್ ಎಮ್ ವಾಹನಕ್ಕೆ ನೀಡಬೇಕಾಗಿ ಈ ಮೂಲಕ ಪಂಚಾಯತ್ ಪ್ರಕಟಣೆಯಲ್ಲಿ ತಿಳಿಸಿದೆ.
Leave a Reply