
ಕೋಟ: ರೋಟರಿ ಕ್ಲಬ್ ಹಂಗಾರಕಟ್ಟ ಸಾಸ್ತಾನ ವತಿಯಿಂದ ಸರಕಾರಿ ಪದವಿಪೂರ್ವ ಕಾಲೇಜು ಕೋಡಿಕನ್ಯಾನ ಇಲ್ಲಿನ ವಿದ್ಯಾರ್ಥಿಗಳಿಗೆ ಜು.20ರಂದು ಉಚಿತ ನೋಟು ಪುಸ್ತಕಗಳ ವಿತರಣಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಹಂಗಾರಕಟ್ಟ ಸಾಸ್ತಾನ ಕ್ಲಬ್ನ ಅಧ್ಯಕ್ಷ ಅರವಿಂದ ಶರ್ಮ ನೋಟ್ ಬುಕ್ಗಳನ್ನು ಕಾಲೇಜಿನ ವಿದ್ಯಾರ್ಥಿನಿಗೆ ನೀಡಿದರು. ರೋಟರಿ ವಲಯ ಸೇನಾನಿ ರಾಜಾರಾಮ್ ಐತಾಳ್ , ಕಾರ್ಯದರ್ಶಿ ಕರುಣಾಕರ ಶೆಟ್ಟಿ , ಕೋಶಾಧಿಕಾರಿ ವಿಘ್ನೇಶ್ವರ ಅಡಿಗ, ಉಪಾಧ್ಯಕ್ಷ ಬಾಲಕೃಷ್ಣ ಪೂಜಾರಿ , ಸದಸ್ಯರುಗಳಾದ ಚಂದ್ರಶೇಖರಹೊಳ್ಳ , ರತ್ನರಾಜ್ , ಕೃಷ್ಣ ಆಚಾರ್, ಲೀಲಾವತಿ ಪೂಜಾರಿ, ಜ್ಯೋತಿ ಪೂಜಾರಿ ಹಾಗೂ ಪ್ರಾಂಶುಪಾಲರಾದ ರಾಘವೇಂದ್ರ ಅಡಿಗ ಉಪಸ್ಥಿತರಿದ್ದರು.
ರೋಟರಿ ಕ್ಲಬ್ ಹಂಗಾರಕಟ್ಟ ಸಾಸ್ತಾನ ವತಿಯಿಂದ ಸರಕಾರಿ ಪದವಿಪೂರ್ವ ಕಾಲೇಜು ಕೋಡಿಕನ್ಯಾನ ಇಲ್ಲಿನ ವಿದ್ಯಾರ್ಥಿಗಳಿಗೆ ಜು.20ರಂದು ಉಚಿತ ನೋಟು ಪುಸ್ತಕಗಳನ್ನು ಹಂಗಾರಕಟ್ಟ ಸಾಸ್ತಾನ ಕ್ಲಬ್ನ ಅಧ್ಯಕ್ಷ ಅರವಿಂದ ಶರ್ಮ ನೋಟ್ ಬುಕ್ಗಳನ್ನು ಕಾಲೇಜಿನ ವಿದ್ಯಾರ್ಥಿಗಳಿಗೆ ನೀಡಿದರು. ರೋಟರಿ ವಲಯ ಸೇನಾನಿ ರಾಜಾರಾಮ್ ಐತಾಳ್ ,ಕಾರ್ಯದರ್ಶಿ ಕರುಣಾಕರ ಶೆಟ್ಟಿ , ಕೋಶಾಧಿಕಾರಿ ವಿಘ್ನೇಶ್ವರ ಅಡಿಗ, ಉಪಾಧ್ಯಕ್ಷ ಬಾಲಕೃಷ್ಣ ಪೂಜಾರಿ ಮತ್ತಿತರರು ಇದ್ದರು.
Leave a Reply