Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಪಂಚವರ್ಣ ಸಂಸ್ಥೆಯ 174ನೇ ವಾರದ ಪರಿಸರಸ್ನೇಹಿ ಅಭಿಯಾನ
ಪಂಚವರ್ಣ ಸಂಸ್ಥೆಯ ಪರಿಸರ ಕಾಳಜಿ ಇತರರಿಗೆ ಮಾದರಿ – ಜಯರಾಮ ಶೆಟ್ಟಿ

ಕೋಟ: ಪಂಚವರ್ಣ ಸಂಸ್ಥೆಯ ಪರಿಸರ ಕಾಳಜಿ ಇತರ ಸಂಸ್ಥೆಗಳಿಗೆ ಮಾದರಿ ಎಂದು ಕೋಟದ ರೈತಧ್ವನಿ ಸಂಘ ಅಧ್ಯಕ್ಷ ಎಂಜಯರಾಮ ಶೆಟ್ಟಿ ಹೇಳಿದರು.

ಕೋಟದ ಪಂಚವರ್ಣ ಯುವಕ ಮಂಡಲ ಅಧೀನಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ಇದರ ನೇತ್ರತ್ವದಲ್ಲಿ ಮಣೂರು ಫ್ರೆಂಡ್ಸ್,ಮಹಿಳಾ ಬಳಗ ಹಂದಟ್ಟು, ವಿಪ್ರ ಮಹಿಳಾ ಬಳಗ ಸಾಲಿಗ್ರಾಮ, ಗೀತಾನಂದ ಫೌಂಡೇಶನ್ ಮಣೂರು, ಉರಾಳಸ್ ಶ್ರೀಂಗೇರಿ ವತಿಯಿಂದ  174ನೇ ವಾರದ ಪರಿಸರಸ್ನೇಹಿ ಅಭಿಯಾನದ ಪ್ರಯುಕ್ತ ಅಶ್ವಥ ಗಿಡ ನಡುವ ಸಂಕಲ್ಪ ಕಾರ್ಯಕ್ರಮದಲ್ಲಿ ಮಾತನಾಡಿ ಆಧುನಿಕ ಕಾಲಘಟ್ಟದಲ್ಲಿ ಸುಖವನ್ನುಸಂಭ್ರಮಿಸುವ ನೆಪದಲ್ಲಿ ನಮ್ಮ ಹಿರಿಯರು ಬಳುವಳಿಯಾಗಿ ನೀಡಿದ ಕಾಡುಗಳನ್ನು ಕಡಿದು ವಾತಾವರಣವನ್ನು ಹಾಳುಗೆಡುವುತ್ತಿದ್ದೇವೆ ಇದರ ಉತ್ತರ ನಾವುಗಳು ಇತ್ತೀಚಿಗಿನ ವರ್ಷಗಳಲ್ಲಿ ಅನಯಭವಿಸುತ್ತಿದ್ದೇವೆ.

ಇದಾಗದಂತೆ ತಡಯಬೇಕು ನಾವು ಪ್ರತಿಯೊಬ್ಬ ನಮ್ಮ ಪರಿಸರವನ್ನು ಹಸಿರಾಗಿಸಲು ಪಣತೊಡಬೇಕು ಈ ದಿಸೆಯಲ್ಲಾದರೂ ಪರಿಸರವನ್ನು ಉಳಿಸುವಂತ್ತಾಗಬೇಕು ಎಂದು ಕರೆ ನೀಡಿ ಅಶ್ಚಥ ಗಿಡ ನಡುವುದರಿಂದ ಪರಿಸರದಲ್ಲಿ ಆಕ್ಸಿಜನ್ ಪ್ರಮಾಣ ಸಮತೋಲನ ತರಲು ಸಾಧ್ಯ ಇದರ ಅಭಿಯಾನ ನಿಜಕ್ಕೂ ಪ್ರಶಂಸನೀಯ ಎಂದು ಅಭಿಪ್ರಾಯಪಟ್ಟರು.

ಕೋಟ ಮಣೂರು ರಾಷ್ಟ್ರೀಯ ಹೆದ್ದಾರಿ, ಕೋಟ ಹಿರೇಮಹಾಲಿಂಗೇಶ್ವರ,ಕೋಟ ಪಡುಕರೆ,ಕೋಟ ಗಾಂಧಿ ಮೈದಾನ ಪರಿಸರದಲ್ಲಿ ಅಶ್ವಥ ಗಿಡ ನೆಟ್ಟು ಸಂಭ್ರಮಿಸಲಾಯಿತು. ಮಣೂರು ಫ್ರೆಂಡ್ಸ್ ಅಧ್ಯಕ್ಷ ದಿನೇಶ್ ಆಚಾರ್, ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್, ಕಾರ್ಯದರ್ಶಿ ಸುಧೀಂದ್ರ ಜೋಗಿ, ಸಂಘಟನಾ ಕಾರ್ಯದರ್ಶಿ ಕೆ.ಆರ್ ಗಿರೀಶ್ ಆಚಾರ್, ಸದಸ್ಯ ಭಾಸ್ಕರ್ ದೇವಾಡಿಗ, ಸಂದೇಶ್ ಆಚಾರ್, ಕೃಷ್ಣ ಕಾಂಚನ್, ಕಾರ್ತಿಕ್ ಆಚಾರ್, ಪಂಚವರ್ಣ ಮಹಿಳಾ ಮಂಡಲದ ಕಾರ್ಯದರ್ಶಿ ಲಲಿತಾ ಪೂಜಾರಿ, ಪರಿಸರದ ಹಿರಿಯಜ್ಜಿ ಮಿಣ್ಕು ಮತ್ತಿತರರು ಉಪಸ್ಥಿತರಿದ್ದರು. ಪಂಚವರ್ಣದ ಕಾರ್ಯಧ್ಯಕ್ಷ ರವೀಂದ್ರ ಕೋಟ ಕಾರ್ಯಕ್ರಮ ಸಂಯೋಜಿಸಿದರು.

ಕೋಟದ ಪಂಚವರ್ಣ ಯುವಕ ಮಂಡಲ ಅಧೀನಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ಇದರ ನೇತ್ರತ್ವದಲ್ಲಿ ಮಣೂರು ಫ್ರೆಂಡ್ಸ್,ಮಹಿಳಾ ಬಳಗ ಹಂದಟ್ಟು, ವಿಪ್ರ ಮಹಿಳಾ ಬಳಗ ಸಾಲಿಗ್ರಾಮ, ಗೀತಾನಂದ ಫೌಂಡೇಶನ್ ಮಣೂರು, ಉರಾಳಸ್ ಶ್ರೀಂಗೇರಿ ವತಿಯಿಂದ  174ನೇ ವಾರದ ಪರಿಸರಸ್ನೇಹಿ ಅಭಿಯಾನದ ಪ್ರಯುಕ್ತ ಅಶ್ವಥ ಗಿಡ ನಡುವ ಸಂಕಲ್ಪ ಕಾರ್ಯಕ್ರಮ ಕೋಟ ಭಾಗದಲ್ಲಿ ನಡೆಯಿತು. ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್,ಕಾರ್ಯದರ್ಶಿ ಸುಧೀಂದ್ರ ಜೋಗಿ, ಸಂಘಟನಾಕಾರ್ಯದರ್ಶಿ ಕೆ.ಆರ್ ಗಿರೀಶ್ ಆಚಾರ್ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *