
ಕೋಟ: ಸರಕಾರಿ ಪ್ರೌಢ ಶಾಲೆ ವಡ್ಡರ್ಸೆ ಸಂಸ್ಥೆಯು ಗ್ರಾಮೀಣ ಭಾಗಕ್ಕೆ ಶೈಕ್ಷಣಿಕ ಕ್ರಾಂತಿ ಪಸರಿಸಿದೆ. ಶಾಲಾ ಮಕ್ಕಳಿಗೆ ಮೌಲ್ಯದ ಶಿಕ್ಷಣದೊಂದಿಗೆ ಆರೋಗ್ಯದ ಅರಿವು ನಿರಂತರ ನೀಡುತ್ತಿರುವುದು ಸಾರ್ಥಕ್ಯ ಕಾರ್ಯವಾಗಿದೆ ಎಂದು ರೋಟರಿ ಕ್ಲಬ್ ಕೋಟ-ಸಾಲಿಗ್ರಾಮ ಮಾಜಿ ಅಧ್ಯಕ್ಷ ಸೀತಾರಾಮ ಆಚಾರ್ ಹೇಳಿದರು.
ಇತ್ತೀಚಿಗೆ ವಡ್ಡರ್ಸೆಯಲ್ಲಿ ರೋಟರಿ ಕ್ಲಬ್ ಕೋಟ-ಸಾಲಿಗ್ರಾಮ, ಪ್ರಾಥಮಿಕ ಆರೋಗ್ಯ ಕೇಂದ್ರ ಸಾಹೇಬರಕಟ್ಟೆ ಮತ್ತು ದಿ. ಪದ್ದು ಆಚಾರ್ ಸ್ಮರಣಾರ್ಥ ಆರೋಗ್ಯ ಕ್ಷೇಮ ಕೇಂದ್ರ ಬನ್ನಾಡಿ ಸಹಯೋಗದೊಂದಿಗೆ ಆರೋಗ್ಯ ಕ್ಷೇಮ ಕೇಂದ್ರಕ್ಕೆ ಮೂವತ್ತು ಸಾವಿರ ಮೊತ್ತದ ಐದನೇ ಕಂತು ಔಷದ ಹಸ್ತಾಂತರ ಮಾಡಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಮಲೇರಿಯ ಮತ್ತು ಡೆಂಗ್ಯೂ ನಿಯಂತ್ರಣ ಮಾಹಿತಿ ಕಾರ್ಯಗಾರ ಹಾಗೂ ಹದಿಹರೆಯದ ಸಮಸ್ಯೆಗಳ ಕುರಿತು ಉಪನ್ಯಾಸ , ಆರೋಗ್ಯ ಮಾಹಿತಿಗೆ ಸಂಬಂಧಿಸಿದಂತೆ ಬಿತ್ತಿ ಪತ್ರವನ್ನು ಅನಾವರಣಗೈಯಲಾಯಿತು. ರೋಟರಿ ಕ್ಲಬ್ ಕೋಟ-ಸಾಲಿಗ್ರಾಮದ ಅಧ್ಯಕ್ಷ ದೇವಪ್ಪ ಪಟಗಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ ವಡ್ಡರ್ಸೆ ಪ್ರೌಢ ಶಾಲೆಗೆ ರೋಟರಿ ಮ್ಯಾಚಿಂಗ್ ಗ್ರ್ಯಾಂಟ್ ಮೂಲಕ ಒಂದು ಉತ್ತಮ ಯೋಜನೆ ಸಿದ್ಧ ಪಡಿಸಿ, ಶಾಲೆಯ ಭೌತಿಕ ಅಗತ್ಯತೆಗಳನ್ನು ಮತ್ತಷ್ಟು ಉತ್ತಮ ಪಡಿಸುವ ಪ್ರಯತ್ನ ಮಾಡುವುದಾಗಿ ತಿಳಿಸಿದರು.
ಸಮಾರಂಭದಲ್ಲಿ ಗ್ರಾಮದ ಆರೋಗ್ಯ ಸಂಯೋಜಕರಾದ ಅರ್ಪಿತಾ ಇವರು ಶಾಲಾ ಮಕ್ಕಳಿಗೆ ಆರೋಗ್ಯಕರ ಸ್ಪರ್ಷ ಹಾಗೂ ಅನಾರೋಗ್ಯಕರ ಸ್ಪರ್ಷದ ಬಗ್ಗೆ ಮಾಹಿತಿ ನೀಡಿ ಅದರ ಬಗ್ಗೆ ಜಾಗುರೂಕರಾಗುವುದನ್ನು ತಿಳಿಸಿದರು.
ಆರೋಗ್ಯ ಕಾರ್ಯಕರ್ತೆ ಜ್ಯೋತಿ ಸಿ. ಹೆಚ್. ಓ. ಡೆಂಗ್ಯೂ ಮತ್ತು ಮಲೇರಿಯ ನಿಯಂತ್ರಣದ ಬಗ್ಗೆ ಉಪನ್ಯಾಸ ಮಾಡಿದರು. ಸುಮಿತ್ರ ಆರೋಗ್ಯ ಸಹಾಯಕರು ಸಹಕರಿಸಿದರು. ಗಾಯತ್ರಿದೇವಿ ಮುಖ್ಯ ಶಿಕ್ಷಕರು ಸ್ವಾಗತಿಸಿ, ಶಾಲೆಯ ಬೇಡಿಕೆಗಳನ್ನು ಪ್ರಕಟಿಸಿದರು.
ಹೆರಿಯ ಮಾಸ್ಟರ್ ಕಾರ್ಯಕ್ರಮ ನಿರೂಪಣೆಗೈದರು. ತಿಮ್ಮ ಪೂಜಾರಿ ಕಾರ್ಯದರ್ಶಿ ರೋಟರಿ ಕ್ಲಬ್ ಕೋಟ-ಸಾಲಿಗ್ರಾಮ ವಂದಿಸಿದರು. ತದನಂತರ ಆರೋಗ್ಯ ಮಾಹಿತಿಯ ಚರ್ಚೆಗಳು ನಡೆದವು. ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು, ರೋಟರಿ ಕ್ಲಬ್ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ವಡ್ಡರ್ಸೆಯಲ್ಲಿ ಆರೋಗ್ಯ ಮಾಹಿತಿ ಕಾರ್ಯಗಾರದಲ್ಲಿ ಮಲೇರಿಯ ನಿಯಂತ್ರಣ ನಮ್ಮೆಲ್ಲರ ಜವಾಬ್ದಾರಿ ಶೂನ್ಯ ಮಲೇರಿಯ ಮತ್ತು ಡೆಂಗ್ಯೂ ನನ್ನಿಂದಲೇ ಪ್ರಾರಂಭ ಬಿತ್ತಿ ಪತ್ರವನ್ನು ದಾನಿಗಳಾದ ಸೀತಾರಾಮ ಆಚಾರ್, ಕಾರ್ಯದರ್ಶಿ ತಿಮ್ಮ ಪೂಜಾರಿ, ಮುಖ್ಯ ಶಿಕ್ಷಕರಾದ ಗಾಯತ್ರಿದೇವಿ, ಆರೋಗ್ಯ ಸಹಾಯಕರಾದ ಅರ್ಪಿತಾ, ಜ್ಯೋತಿ ಇವರು ಸಭೆಗೆ ಅನಾವರಣ ಮಾಡಿದರು.
ವಡ್ಡರ್ಸೆಯಲ್ಲಿ ರೋಟರಿ ಕ್ಲಬ್ ಕೋಟ-ಸಾಲಿಗ್ರಾಮ, ಪ್ರಾಥಮಿಕ ಆರೋಗ್ಯ ಕೇಂದ್ರ ಸಾೈಬರಕಟ್ಟೆ ಮತ್ತು ದಿ. ಪದ್ದು ಆಚಾರ್ ಸ್ಮರಣಾರ್ಥ ಆರೋಗ್ಯ ಕ್ಷೇಮ ಕೇಂದ್ರ ಬನ್ನಾಡಿ ಸಹಯೋಗದೊಂದಿಗೆ ಆರೋಗ್ಯ ಕ್ಷೇಮ ಕೇಂದ್ರಕ್ಕೆ ಮೂವತ್ತು ಸಾವಿರ ಮೊತ್ತದ ಐದನೇ ಕಂತು ಔಷದ ಹಸ್ತಾಂತರ ಮಾಡಿದರು.














Leave a Reply