Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಅಂಬಲಪಾಡಿ ಗ್ರಾಮ ಪಂಚಾಯತ್ ನ ಉಜ್ವಲ ಸಂಜೀವಿನಿ ಒಕ್ಕೂಟದ ಸದಸ್ಯರಿಂದ ನೂತನ ಆಧ್ಯಕ್ಷ ಉಪಾಧ್ಯಕ್ಷರಿಗೆ ಅಭಿನಂದನೆ

ಅಂಬಲಪಾಡಿ ಗ್ರಾಮ ಪಂಚಾಯತ್ ನ ನೂತನ ಅಧ್ಯಕ್ಷರಾದ ಸುಜಾತ ಯೋಗೀಶ್ ಶೆಟ್ಟಿ ಮತ್ತು ಉಪಾಧ್ಯಕ್ಷರಾದ ಸುಜಾತ ಸುಧಾಕರ್ ಇವರನ್ನು ಅಂಬಲಪಾಡಿ ಗ್ರಾಮ ಪಂಚಾಯತ್ ಉಜ್ವಲ ಸಂಜೀವಿನಿ ಒಕ್ಕೂಟದ ವತಿಯಿಂದ ಇಂದು ಅಭಿನಂದಿಸಲಾಯಿತು.

ಈ ಸಂಧರ್ಭದಲ್ಲಿ ಅಂಬಲಪಾಡಿ ಗ್ರಾಮ‌ ಪಂಚಾಯತ್ ನ ನಿಕಟ ಪೂರ್ವ ಅಧ್ಯಕ್ಷರಾದ ರೋಹಿಣಿ ಎಸ್ ಪೂಜಾರಿ, ನಿಕಟ ಪೂರ್ವ ಉಪಾಧ್ಯಕ್ಷರಾದ ಸೋಮನಾಥ‌ ಬಿ.ಕೆ., ಪಿಡಿಒ ವಸಂತಿ, ಗ್ರಾಮ ಪಂಚಾಯತ್ ನ ಎಲ್ಲಾ ಸದಸ್ಯರು, ಉಜ್ವಲ ಸಂಜೀವಿನಿ ಅಧ್ಯಕ್ಷರಾದ ಸವಿತಾ ಸಂತೋಷ್, MBK ಪ್ರಮೀಳಾ ಶಶಿಕಾಂತ್, LCRP ಇಂದಿರಾ ಪಾಂಡು, ಪಶು ಸಖಿ ಸುಪ್ರೀತಾ ಮನೋಜ್, ಪುಷ್ಪಲತಾ ಹರೀಶ್, ಶಮಿತಾ ಅಮರನಾಥ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *