
ಕೋಟ: ಸಾಸ್ತಾನ ಸಹಕಾರಿ ವ್ಯವಸಾಯಕ ಸಂಘ ಸಾಸ್ತಾನ ಇದರ ವಾರ್ಷಿಕ ಮಹಾಸಭೆ ಸೆ.16 ರಂದು ಶಿವಕೃಪಾ ಕಲ್ಯಾಣ ಮಂಟಪ ಸಾಸ್ತಾನದಲ್ಲಿ ಸಂಘದ ಅಧ್ಯಕ್ಷ ಬಿ.ಸುರೇಶ ಅಡಿಗರ ಅಧ್ಯಕ್ಷತೆಯಲ್ಲಿ ಜರುಗಿತು.
ಸಂಘವು 2022-2023 ರ ಆರ್ಥಿಕ ವರ್ಷಾಂತ್ಯಕ್ಕೆ 69.82 ಕೋಟಿ ಠೇವಣಿ, 49.03 ಕೋಟಿ ಹೊರಬಾಕಿ ಸಾಲ, 3.79 ಕೋಟಿಯಷ್ಟು ವಿವಿಧ ನಿಧಿಗಳನ್ನು ಹೊಂದಿದ್ದು, ಶೇ 95.66 ರಷ್ಟು ಸಾಲ ವಸೂಲಾತಿ ಮಾಡಿ, ರೂ. 1.25 ಕೋಟಿಗೂ ಮಿಕ್ಕಿ ನಿವ್ವಳ ಲಾಭ ಗಳಿಸಿ ಸತತ 19 ವಷ9ಗಳಿಂದ ಎ ತರಗತಿಯ ಲೆಕ್ಕಪರಿಶೋಧನಾ ವರ್ಗೀಕರಣ ಹೊಂದಿದ್ದು, ಸದಸ್ಯರಿಗೆ ಶೇ 17 ಡಿವಿಡೆಂಡ್ ಘೋಷಿಸಲಾಯಿತು.
ಈ ಸಂಧರ್ಭದಲ್ಲಿ ಸಂಘದ ಕಾರ್ಯ ವ್ಯಾಪ್ತಿಯ ಹಿರಿಯ ಕೃಷಿಕರಾದ ಸುಬ್ರಹ್ಮಣ್ಯ ಉರಾಳ ಐರೋಡಿ, ಡೇನಿಸ್ ಪಿಕಾಡೋ9 ಪಾಂಡೇಶ್ವರ, ಶೇಖರ್ ಪೂಜಾರಿ ಮೂಡಹಡು, ಶಾರದ ಪೂಜಾತಿ9 ಬಾಳೆಕುದ್ರು ಇವರನ್ನು ಅಭಿನಂದಿಸಲಾಯಿತು ಹಾಗೂ ರಮಾನಂದ ಮರಕಾಲ ಮೂಡಹಡು ಇವರಿಗೆ ಆಧುನಿಕ ಕೃಷಿ ಪದ್ಧತಿಯ ಯುವ ರೈತ ಪ್ರಶಸ್ತಿ ನೀಡಿ ಗೌರವಿಸಲಾಯಿತು. 2023 ರ ದ್ವಿತೀಯ ಪಿ.ಯು.ಸಿ ಮತ್ತು ಹತ್ತನೇ ತರಗತಿಯಲ್ಲಿ ಶೇ.85ಕ್ಕಿಂತ ಹೆಚ್ಚು ಅಂಕ ಗಳಿಸಿದ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಈ ಸಂಧರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ಗೋವಿಂದ ಪೂಜಾರಿ, ನಿರ್ದೇಶಕರಾದ ಶ್ರೀಧರ ಪಿ. ಎಸ್, ಕಮಲ ಆಚಾರ್, ಲೀಲಾವತಿ ಗಂಗಾಧರ, ಶೇಖರ ಗದ್ದೆಮನೆ, ಚಂದ್ರಮೋಹನ, ಅರುಣ ಪೂಜಾರಿ, ವಿಜಯ ಪೂಜಾರಿ, ಕಿರಣ್ ಥೋಮಸ್ ಡಾಯಸ್, ಕು. ಪ್ರೀತಿ ಹಾಗೂ ಮುಖ್ಯ ಕಾಯ9ನಿವ9ಹಣಾಧಿಕಾರಿ ವಿಜಯಪೂಜಾರಿ ಉಪಸ್ಥಿತರಿದ್ದರು. ಸಂಘದ ನಿರ್ದೇಶಕರಾದ ರಮೇಶ ಕಾರಂತ ಸ್ವಾಗತಿಸಿ, ಆನಂದ ಗಾಣಿಗ ವಂದಿಸಿ, ಶಾಖಾ ವ್ಯವಸ್ಥಾಪಕ ಸುರೇಶ ಪೂಜಾರಿ ಪ್ರಾಥಿ9ಸಿ, ಸಹಾಯಕ ವ್ಯವಸ್ಥಾಪಕ ಕೇಶವ ಅಚಾರ್ ಕಾರ್ಯಕ್ರಮ ನಿರೂಪಿಸಿದರು.
ಸಾಸ್ತಾನ ಸಹಕಾರಿ ವ್ಯವಸಾಯಕ ಸಂಘ ಸಾಸ್ತಾನ ಇದರ ವಾರ್ಷಿಕ ಮಹಾಸಭೆಯಲ್ಲಿ ಸಂಘದ ಕಾರ್ಯ ವ್ಯಾಪ್ತಿಯ ಹಿರಿಯ ಕೃಷಿಕರಾದ ಸುಬ್ರಹ್ಮಣ್ಯ ಉರಾಳ ಐರೋಡಿ, ಡೇನಿಸ್ ಪಿಕಾಡೋ9 ಪಾಂಡೇಶ್ವರ, ಶೇಖರ್ ಪೂಜಾರಿ ಮೂಡಹಡು, ಶಾರದ ಪೂಜಾತಿ9 ಬಾಳೆಕುದ್ರು ಇವರನ್ನು ಅಭಿನಂದಿಸಲಾಯಿತು.













Leave a Reply