
ಕೋಟ: ರೋಟರಿ ಕ್ಲಬ್ ಕೋಟ ಸಾಲಿಗ್ರಾಮ, ರೋಟರಿ ಗ್ರಾಮೀಣದಳ ಮೂಡುಗಿಳಿಯಾರು, ಸಮುದಾಯ ಆರೋಗ್ಯ ಕೇಂದ್ರ ಕೋಟ ಹಾಗೂ ನೇತ್ರಜ್ಯೋತಿ ಚಾರಿಟೇಬಲ್ ಟ್ರಸ್ಟ್ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಮೂಡುಗಿಳಿಯಾರು ಸರಕಾರಿ ಪ್ರೌಢ ಶಾಲೆಯ ವಠಾರದಲ್ಲಿ ಉಚಿತ ನೇತ್ರ ತಪಾಸಣೆ ಹಾಗೂ ಕಣ್ಣಿನ ಪೋರೆ ಶಸ್ತ್ರಚಿಕಿತ್ಸಾ ಶಿಬಿರವನ್ನು ನಡೆಸಲಾಯಿತು. ಈ ಶಿಬಿರದಲ್ಲಿ 140 ಜನರು ಭಾಗವಹಿಸಿ ಪ್ರಯೋಜನವನ್ನು ಪಡೆದುಕೊಂಡರು.
ಕಾರ್ಯಕ್ರಮವನ್ನು ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್ ಅವರು ಉದ್ಘಾಟಿಸಿದರು. ಕೋಟ ಸಾಲಿಗ್ರಾಮ ರೋಟರಿ ಕ್ಲಬ್‍ನ ಅಧ್ಯಕ್ಷ ದೇವಪ್ಪ ಪಟಗಾರ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಲಯ ಎರಡರ ಅಸಿಸ್ಟೆಂಟ್ ಗವರ್ನರ್ ನರಸಿಂಹ ಪ್ರಭು ಅವರು ಭಾಗವಹಿಸಿ ರೋಟರಿ ಕ್ಲಬ್‍ಗಳ ಸೇವೆಗಳ ಕುರಿತು ವಿವರಿಸಿ ರೋಟರಿ ಸೇವೆಯು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಿಗುವಂತಾಗಿ ಅವರಲ್ಲಿ ಆಶಾಕಿರಣ ಮೂಡುವಂತಿರಬೇಕು ಎಂದು ತಿಳಿಸಿದರು.
ಕೋಟ ಗ್ರಾಮ ಪಂಚಾಯತ್‍ನ ನೂತನ ಅಧ್ಯಕ್ಷೆ ಜ್ಯೋತಿ ಭರತ್ ಕುಮಾರ ಶೆಟ್ಟಿ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ರೋಟರಿ ಗ್ರಾಮೀಣದಳದ ಅಧ್ಯಕ್ಷ ಶರಣಯ್ಯ ಹಿರೇಮಠ, ಸಭಾಪತಿ ಶ್ರೀಕಾಂತ ಶಣೈ,ಕ್ಲಬ್‍ನ ಆರ್‍ಸಿಸಿ.ಕಾರ್ಯದರ್ಶಿ ಗೋಪಾಲ, ರಾಜೇಂದ್ರ ಸುವರ್ಣ ಇದ್ದರು. ರೋಟರಿ ಕಾರ್ಯದರ್ಶಿ ತಿಮ್ಮ ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು, ನಿವೃತ್ತ ಶಿಕ್ಷಕ ಸೋಮಶೇಖರ ಶೆಟ್ಟಿ ಸ್ವಾಗತಿಸಿದರು, ಗುರುರಾಜ ಆಚಾರ್ ಕಾರ್ಯಕ್ರಮವನ್ನು ನಿರೂಪಿಸಿದರು, ಶಿವರಾಮ ಶೆಟ್ಟಿ ವಂದನಾರ್ಪಣೆಗೈದರು.
ಮೂಡುಗಿಳಿಯಾರು ಸರಕಾರಿ ಪ್ರೌಢ ಶಾಲೆಯ ವಠಾರದಲ್ಲಿ ಉಚಿತ ನೇತ್ರ ತಪಾಸಣೆ ಹಾಗೂ ಕಣ್ಣಿನ ಪೆÇರೆ ಶಸ್ತ್ರಚಿಕಿತ್ಸಾ ಶಿಬಿರವನ್ನು ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್ ಅವರು ಉದ್ಘಾಟಿಸಿದರು. ಕೋಟ ಗ್ರಾಮ ಪಂಚಾಯತ್‍ನ ನೂತನ ಅಧ್ಯಕ್ಷೆ ಜ್ಯೋತಿ ಭರತ್ ಕುಮಾರ ಶೆಟ್ಟಿ, ರೋಟರಿ ಗ್ರಾಮೀಣದಳದ ಅಧ್ಯಕ್ಷ ಶರಣಯ್ಯ ಹಿರೇಮಠ, ಸಭಾಪತಿ ಶ್ರೀಕಾಂತ ಶಣೈ ಇದ್ದರು.













Leave a Reply