
ಅಂಬಲಪಾಡಿ ಗ್ರಾಮ ಪಂಚಾಯತ್ ನ 1ನೇ ವಾರ್ಡ್ ಬೂತ್ 177ರಲ್ಲಿ.. ರಾಷ್ಟ್ರವಾದಿ, ಲೇಖಕ..ಪಂಡಿತ್ ಶ್ರೀ ದೀನ್ ದಯಾಳ್ ಉಪಾಧ್ಯಾಯ ಅವರ ಜನ್ಮ ದಿನಾಚರಣೆಯನ್ನು ಅವರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಆಚರಿಸಲಾಯಿತು.

ರಾಜಕೀಯದಲ್ಲಿ ಸಂಸ್ಕೃತಿಯ ರಾಯಭಾರಿ ಆಗಿದ್ದ, ಸ್ವದೇಶಿ, ಸ್ವಾಭಿಮಾನ, ಜನಪದ, ಭಾಷಾ ನೀತಿ, ಶಿಕ್ಷಣ ನೀತಿ, ಇವುಗಳಲ್ಲಿ ಚಿಂತನೆ ವೈಚಾರಿಕ ನಿಲುವು ಹೊಂದಿದ್ದ ಭಾರತೀಯ ಜನ ಸಂಘದ ನೇತಾರರು ಏಕಾತ್ಮ ಮಾನವ ವಾದದ ಪ್ರವರ್ತಕರಾದ ಪಂಡಿತ್ ಶ್ರೀ ದೀನ್ ದಯಾಳ್ ಉಪಾಧ್ಯಾಯ ಅವರ ಜಯಂತಿಯಂದು ಶತ ಶತ ನಮನಗಳು.
ಬೂತ್ ಅಧ್ಯಕ್ಷರು & ಗ್ರಾಮ ಪಂಚಾಯತ್ ಸದಸ್ಯರಾದ ರಾಜೇಶ್ ಸುವರ್ಣ ಅವರ ನೇತೃತ್ವದಲ್ಲಿ 1ನೇ ವಾರ್ಡ್ ಬೂತ್ 177ರಲ್ಲಿ ಇಂದು ಪಂಡಿತ್ ಶ್ರೀ ದೀನ್ ದಯಾಳ್ ಉಪಾಧ್ಯಾಯ ಅವರ ಜಯಂತಿಯನ್ನು ಆಚರಿಸಲಾಯಿತು. ಈ ಸಂಧರ್ಭದಲ್ಲಿ ಮಾಜಿ ಪಂಚಾಯತ್ ಉಪಾಧ್ಯಕ್ಷರು ವಾರ್ಡ್ ನ ಪಂಚಾಯತ್ ಸದಸ್ಯರಾದ ಸೋಮನಾಥ ಬಿ.ಕೆ., ಪಂಚಾಯತ್ ಸದಸ್ಯರಾದ ಭಾರತಿ ಭಾಸ್ಕರ್, ಹಿರಿಯರಾದ ಬೇಬಿ ಪೂಜಾರ್ತಿ, ವಿಠಲ ಪೂಜಾರಿ, ಪದ್ಮಾ ವಿಠಲ & ಭಾರತೀಯ ಜನತಾ ಪಕ್ಷದ ಕಾರ್ಯಕರ್ತರಾದ ಸುಜಾತಾ ಶಶಿಕಾಂತ್, ಶಶಿಕಲಾ ರಾಧಾಕೃಷ್ಣ, ವೀಣಾ ರಾಜೇಶ್, ರಂಜಿತಾ ಗುರುರಾಜ್, ಗಣೇಶ್ ಪೂಜಾರಿ, ಗಿರೀಶ್ ಅಮೀನ್, ಸಾವಿತ್ರಿ ಗಣೇಶ್, ಗಾಯತ್ರಿ ಸುಧೀರ್, ರಾಧಾಕೃಷ್ಣ, ಕೀರ್ತನಾ ಅಶ್ವಿತ್, ಸೀಯಾ, ಯಶಸ್, ತ್ರಿಶಾ, ನಿಹಾಲ್, ಯಶ್, ನಿಷಾ, ಸಮರ್ಥ್ ಉಪಸ್ಥಿತರಿದ್ದರು.














Leave a Reply