Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಬ್ರಹ್ಮಾವರ ವಲಯ ಪ್ರೌಢ ಶಾಲಾ ಸಮಾಜ ವಿಜ್ಞಾನ ಶಿಕ್ಷಕರ ಕಾರ್ಯಾಗಾರ

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ , ಬ್ರಹ್ಮಾವರ ವಲಯ ಇವರ ಸಂಯೋಜನೆಯಲ್ಲಿ ಬ್ರಹ್ಮಾವರ ವಲಯದ ಪ್ರೌಢಶಾಲಾ ಸಮಾಜ ವಿಜ್ಞಾನ ವಿಷಯ ಶಿಕ್ಷಕರ ಕಾರ್ಯಗಾರವು ದಿನಾಂಕ 27/9/2023 ರಂದು ಶ್ರೀ ವಿಧ್ಯೇಶ ವಿದ್ಯಾಮಾನ್ಯ ನೇಷನಲ್ ಆಂಗ್ಲ ಮಾಧ್ಯಮ ಶಾಲೆ ಹೇರಾಡಿ ಬಾರಕೂರು ನಲ್ಲಿ ನಡೆಯಿತು.

ಕಾರ್ಯಾಗಾರವನ್ನು ಬಾರಕೂರು ವಿದ್ಯಾಭಿವರ್ದಿನಿ ಸಂಘ (ರಿ )ಬಾರಕೂರು ಇದರ ಕಾರ್ಯದರ್ಶಿ ಯಾಗಿರುವ ಶ್ರೀ.ಬಿ.ಸೀತಾರಾಮ್ ಶೆಟ್ಟಿ ರವರು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟನೆ ಮಾಡಿದ್ದರು.

ಈ ಉದ್ಘಾಟನಾ ಕಾರ್ಯಕ್ರಮ ದ ವೇದಿಕೆ ಯಲ್ಲಿ ಬಾರಕೂರು ವಿದ್ಯಾಭೀವರ್ದಿನಿ ಸಂಘ (ರಿ )ಬಾರಕೂರು ದ ಅಧ್ಯಕ್ಷ ರಾದ ಶ್ರೀ.ಬಿ.ಶಾಂತರಾಮ್ ಶೆಟ್ಟಿ, ಎಸ್. ಎಸ್. ಎಲ್. ಸಿ ನೋಡಲ್ ಅಧಿಕಾರಿ ಯಾಗಿರುವ ಶ್ರೀ ರಾಘವ ಶೆಟ್ಟಿ, ಬ್ರಹ್ಮಾವರ ವಲಯದ ಬಿ. ಆರ್. ಸಿ ಯ ಕೋಓರ್ಡಿನೆಟರ್ ಆಗಿರುವ ಶ್ರೀಮತಿ ಅರ್ಚನಾ ಹೆಗ್ಡೆ, ಸಮಾಜ ವಿಜ್ಞಾನ ವಿಷಯ ಸಂಪನ್ಮೂಲ ವ್ಯಕ್ತಿ ಯರಾದ ಶ್ರೀ ಪ್ರಶಾಂತ್ ಜತ್ತನ್ನ, ಶ್ರೀ ಹೆರಿಯಾ ಮಾಸ್ಟ್ರು, ಶ್ರೀಮತಿ ರೇವತಿ, ಶ್ರೀ ಅಮೃತ ರಾಜ್,ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಲಿಖಿತಾ ಕೊಠಾರಿ, ರವರು ಉಪಸ್ಥಿತರಿದ್ದರು.

ಈ ಕಾರ್ಯಕ್ರಮ ದಲ್ಲಿ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶ್ರೀ ನರೇಂದ್ರ ಕುಮಾರ್ ಕೋಟ ರವರನ್ನು ಸನ್ಮಾನಿಸಲಾಯಿತು. ಈ ಕಾರ್ಯಾಗಾರದಲ್ಲಿ “ಸಮಾಜ ವಿಜ್ಞಾನ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ರೂಪಿಸಬಹುದಾದ ವಿಶೇಷ ಯೋಜನೆಗಳು” – ಕುರಿತು ಶ್ರೀ ಅಮೃತ್ ರಾಜ್ , ಸರಕಾರಿ ಪ್ರೌಢಶಾಲೆ, ಶೆಟ್ಟಿ ಬೆಟ್ಟು,
“10ನೇ ತರಗತಿ ಸಮಾಜ ವಿಜ್ಞಾನ ಪುಸ್ತಕದಲ್ಲಿರುವ ಕಠಿಣ ಪರಿಕಲ್ಪನೆಗಳ ಬಗ್ಗೆ ವಿಚಾರ ವಿನಿಮಯ” – ಕುರಿತು ಶ್ರೀ ಹೆರಿಯ ಸರಕಾರಿ ಪ್ರೌಢಶಾಲೆ ವಡ್ದರ್ಸೆ, “ಅಂತಿಮ ಪರೀಕ್ಷೆಗೆ ಪ್ರಶ್ನೆ ಪತ್ರಿಕೆ ತಯಾರಿ” – ಕುರಿತು ಶ್ರೀ ಪ್ರಶಾಂತ್ ಜತ್ತನ್ನ ಸರಕಾರಿ ಪ್ರೌಢಶಾಲೆ ಕಾವಡಿ “ಸಮಾಜ ವಿಜ್ಞಾನ ವಿಷಯದಲ್ಲಿ ಪ್ರತಿಶತ 100 ಫಲಿತಾಂಶ ಗಳಿಸಲು ರೂಪಿಸಿಕೊಳ್ಳಬಹುದಾದ ತಂತ್ರಾಂಶಗಳು” – ಕುರಿತು ಶ್ರೀಮತಿ ರೇವತಿ ಚೆರ್ಕಾಡಿ ರವರು ಮಾಹಿತಿ ನೀಡಿದರು.

ಈ ಕಾರ್ಯಾಗಾರ ವು ಬ್ರಹ್ಮಾವರ ವಲಯದ ಎಸ್. ಎಸ್. ಎಲ್. ಸಿ ನೋಡಲ್ ಅಧಿಕಾರಿ ಯಾಗಿರುವ ಶ್ರೀ ರಾಘವ ಶೆಟ್ಟಿ ರವರ ಮೇಲ್ವಿಚಾರಣೆ ಯಲ್ಲಿ ನಡೆಯಿತು. ಈ ಕಾರ್ಯಾಗಾರದ ಉದ್ಘಾಟನಾ ಕಾರ್ಯಕ್ರಮ ವನ್ನು ಶಾಲೆಯ ಸಮಾಜ ವಿಜ್ಞಾನ ಶಿಕ್ಷಕಿ ಶ್ರೀಮತಿ ಜ್ಯೋತಿ ಶೆಟ್ಟಿ ನಿರೂಪಿಸಿ, ಶಿಕ್ಷಕಿ ಶ್ರೀಮತಿ ಅಪರ್ಣ ಪ್ರಾರ್ಥಿಸಿದರು. ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಲಿಖಿತಾ ಕೊಠಾರಿ ರವರು ಸ್ವಾಗತಿಸಿ,ಶಿಕ್ಷಕ ಶ್ರೀ ನಾಗೇಂದ್ರ ಆಚಾರ್ ವಂದಿಸಿದರು, ಶಾಲಾ ಶಿಕ್ಷಕಿಯರಾದ ಶ್ರೀಮತಿ ನಾಗರತ್ನ, ಶ್ರೀಮತಿ ಪಲ್ಲಶ್ರೀ, ಶಾಲಾ ಆಫೀಸ್ ಸಿಬ್ಬಂದಿ ಶ್ರೀ ನಾಗರಾಜ್, ಶ್ರೀಮತಿ ಸಭಿತಾ, ಮತ್ತು ಶ್ರೀ ವಿಜಯ ಪೂಜಾರಿ ಮತ್ತು ಶಿಕ್ಷಕ – ಶಿಕ್ಷಕೇತರರು ಸಹಕರಿಸಿದರು.

Leave a Reply

Your email address will not be published. Required fields are marked *