
ಕೋಟ: ಕೋಟ ಸೇವಾಸಂಗಮ ಶಿಶುಮಂದಿರ ಇಲ್ಲಿ ಕಳೆದ ಏಳು ವರ್ಷಗಳಿಂದ ಕಾರ್ಯನಿರ್ವಹಿಸಿದ ಮಾತಾಜೀ ದೀಪಾ ಇವರಿಗೆ ಶಿಶುಮಂದಿರದ ವತಿಯಿಂದ ಬೀಳ್ಕೋಡುಗೆ ಸಭೆ ಏರ್ಪಡಿಸಲಾಯಿತು. ಕಾರ್ಯಕ್ರಮದಲ್ಲಿ ದೀಪ ಹಾಗೂ ಪತಿ ಸತ್ಯನಾರಾಯಣ ಆಚಾರ್ ಇವರಿಗೆ ಶಾಲು ಹೋದಿಸಿ ಪಲಪುಷ್ಭ ನೀಡಿ ಗೌರವಿಸಲಾಯಿತು. ಪುಟಾಣಿಗಳು ಹಾಗೂ ಪೋಷಕರು ಮಾತಾಜೀಗೆ ಪ್ರೀತಿಯ ಗೌರವ ಸಲ್ಲಿಸಿತು.
ಅಧ್ಯಕ್ಷತೆಯನ್ನು ಕೋಟ ಸೇವಾಸಂಗಮ ಶಿಶುಮಂದಿರದ ಅಧ್ಯಕ್ಷೆ ನಾಗಲಕ್ಷ್ಮೀ ಹೆಗ್ಡೆ ವಹಿಸಿದ್ದರು. ಈ ಸಂದರ್ಭದಲ್ಲಿ ಶಿಶುಮಂದಿರದ ವ್ಯವಸ್ಥಾಪಕಿ ಭಾಗ್ಯವಾದಿರಾಜ್, ಸಮಿತಿಯ ಉಪಾಧ್ಯಕ್ಷೆ ಗೀತಾ ಎ ಕುಂದರ್ ,ಸದಸ್ಯರಾದ ಸುಶೀಲ ಸೋಮಶೇಖರ್, ಪ್ರಮೀಳಾ, ಅಮೃತ್ ಜೋಗಿ, ರವೀಂದ್ರ ಕೋಟ, ರೇಣುಕಾ ಮಯ್ಯ,ಕೋಶಾಧಿಕಾರಿ ಲಕ್ಷ್ಮೀನಾರಾಯಣ ಮಯ್ಯ, ಮಾತಾಜೀ ಪ್ರಭಾವತಿ, ಸಹಾಯಕಿ ಜ್ಯೋತಿ, ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸಮಿತಿ ಕಾರ್ಯದರ್ಶಿ ಸುಷ್ಮಾ ದಯಾನಂದ ಹೊಳ್ಳ ನಿರೂಪಿಸಿದರು.

ಕೋಟ ಸೇವಾಸಂಗಮ ಶಿಶುಮಂದಿರ ಇಲ್ಲಿ ಕಳೆದ ಏಳು ವರ್ಷಗಳಿಂದ ಕಾರ್ಯನಿರ್ವಹಿಸಿದ ಮಾತಾಜೀ ದೀಪಾ ಇವರಿಗೆ ಶಿಶುಮಂದಿರದ ವತಿಯಿಂದ ಬೀಳ್ಕೋಡುಗೆ ಸಭೆ ಏರ್ಪಡಿಸಲಾಯಿತು.
Leave a Reply