Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕುಂದಾಪುರದ ಆನಗಳ್ಳಿ ಗ್ರಾ.ಪಂ ಹೇರಿಕುದ್ರು ವಾರ್ಡ್‌ನಲ್ಲಿ ಕೂಲಿ ಹಣದಲ್ಲಿ ಗ್ರಾ.ಪಂ ಸದಸ್ಯೆಯಿಂದ ಸ್ವಚ್ಚತಾ ಕಾರ್ಯ

ಕುಂದಾಪುರ: ಭಾರತೀಯ ಜನತಾ ಪಾರ್ಟಿ ಹೇರಿಕುದ್ರು ಘಟಕದಿಂದ ಗಾಂಧಿ ಜಯಂತಿ ಅಂಗವಾಗಿ ಸ್ವಚ್ಚತಾ ಭಾರತ ಅಭಿಯಾನ ಕಾರ್ಯಕ್ರಮ‌ ಅ.2 ಹೆರಿಕುದ್ರು ಭಾಗದಲ್ಲಿ ನಡೆಯಿತು. ಆನಗಳ್ಳಿ ಗ್ರಾಮಪಂಚಾಯತ್ ವಾರ್ಡ್ ಸದಸ್ಯೆ ನಿರ್ಮಲಾ ತಾನು ಕೂಲಿ ಮಾಡಿದ ಹಣದಿಂದ ಸ್ವಚ್ಚತಾ ಕೆಲಸ ನಿರ್ವಹಿಸುವ ಮೂಲಕ ಮಾದರಿಯಾದರು.

ತಾ.ಪಂ ಮಾಜಿ ಅಧ್ಯಕ್ಷ ಭಾಸ್ಕರ ಬಿಲ್ಲವ ಹೇರಿಕುದ್ರು ಮಾತನಾಡಿ, ಸಂಬಂಧಪಟ್ಟ ಗ್ರಾ.ಪಂ ಇಲ್ಲಿನ ರಸ್ತೆ ಸಮೀಪದ ಗಿಡಗಂಟಿ-ಪೊದೆ ಕಟಾವು ಮಾಡದೆ ನಾಗರಿಕರು ಸಮಸ್ಯೆಗೀಡಾಗಿದ್ದರು. ತಾನು ಕಷ್ಟಪಟ್ಟು‌ ಸಂಪಾದಿಸಿದ ಹಣದಲ್ಲಿ ವಾರ್ಡ್ ಸ್ವಚ್ಚತೆಗೆ ಒತ್ತು ನೀಡಿದ ಗ್ರಾ.ಪಂ ಸದಸ್ಯೆ ನಿರ್ಮಲಾ ಅವರ ಸಮಾಜಮುಖಿ ಕೆಲಸ ಅಭಿನಂದನಾರ್ಹಎಂದರು.

ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಗೋಪಾಲ ಕಳಿಂಜೆ, ಜಿಲ್ಲಾ ವೃತ್ತಿಪರ ಪ್ರಕೊಷ್ಟದ ರಾಘವೇಂದ್ರ ಗಾಣಿಗ, ಬಿಜೆಪಿ ಆನಗಳ್ಳಿ ಶಕ್ತಿಕೇಂದ್ರದ ಅಧ್ಯಕ್ಷ ಸುನೀಲ್ ಶೆಟ್ಟಿ, ಮುಖಂಡರಾದ ಮಹಾಬಲ ಪೂಜಾರಿ, ನಾರಾಯಣ ಬಿಲ್ಲವ, ಮಹೇಂದ್ರ ಹೆಗ್ಡೆ, ಲಕ್ಷ್ಮಣ ಶೆಟ್ಟಿ, ಸಚಿನ್, ಸುಜಯ್ ಪೂಜಾರಿ ಮೊದಲಾದವರಿದ್ದರು.

Leave a Reply

Your email address will not be published. Required fields are marked *