
ಕೋಟ: ಇಲ್ಲಿನ ಕಾರಂತ ಥೀಂ ಪಾರ್ಕನಲ್ಲಿರುವ ಕೋಟತಟ್ಟು ಕಲ್ಮಾಡಿ ಅಂಗನವಾಡಿ ಪುಟಾಣಿಗಳು ಕನ್ನಡ ರಾಜ್ಯೋತ್ಸವವನ್ನು ವಿಶಿಷ್ಟವಾಗಿ ಆಚರಿಸಿದರು.
ಅಂಗನವಾಡಿ ಕಾರ್ಯಕರ್ತೆ ಜಯಲಕ್ಷ್ಮಿ ಹಾಗೂ ಶೈಲಜಾ ನೇತ್ರತ್ವದಲ್ಲಿ ಪುಟಾಣಿಗಳಿಂದ ಹಚ್ಚೆವು ಕನ್ನಡದ ದೀಪ ಎನ್ನುವ ಶೀರ್ಷಿಕೆಯ ಮೂಲಕ ಕೈಯಲ್ಲಿ ಕನ್ನಡದ ಹಣತೆಯನ್ನಿಟ್ಟುಕೊಂಡು ಜ್ಯೋತಿ ಬೆಳಗಿ ಕನ್ನಡಗೀತಗಾಯನ ಮೊಳಗಿಸಿದರು.

ಅಲ್ಲದೆ ಕನ್ನಡದ ಧ್ವಜವನ್ನು ರಂಗೋಲಿಯ ಮೂಲಕ ಪಸರಿಸಿ ಪುಟಾಣಿಗಳಿಗೆ ಕನ್ನಡದ ಸಂದೇಶ ಸಾರಿದರು. ಪುಟಾಣಿಗಳು ಬಿಳಿ ಬಣ್ಣದ ವಸ್ತ್ರಧರಿಸಿ ವಿಶಿಷ್ಠ ರೀತಿಯಲ್ಲಿ ಸಿಹಿ ಹಂಚಿ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮಿಸಿಕೊಂಡರು.
Leave a Reply