
ಜಯಲಕ್ಷ್ಮಿ ಬಟ್ಟೆ ಅಂಗಡಿ ಮಾಲಿಕರ ವಿರುದ್ಧ ರಿಕ್ಷಾ ಚಾಲಕರಿಂದ ಪ್ರತಿಭಟನೆ
ಉಡುಪಿ: ಜಯಲಕ್ಷ್ಮಿ ಬಟ್ಟೆ ಅಂಗಡಿ ಮಾಲಿಕ ಮತ್ತು ಸಿಬ್ಬಂದಿಗಳು ಸೇರಿ ರಿಕ್ಷಾ ಚಾಲಕನ ಮೇಕೆ ದಬ್ಬಾಳಿಕೆ ನಡೆಸಿದ್ದಾರೆಂದು ಆರೋಪಿಸಿ ಕ್ರಮ ಕೈಗೊಳ್ಳಲು ಆಗ್ರಹಿಸಿ ರಿಕ್ಷಾ ಚಾಲಕರ ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಜಯಲಕ್ಷ್ಮೀ ಮಾಲೀಕರು ಹಾಗೂ ಇನ್ನಿತರರು ಬನ್ನಂಜೆಯಲ್ಲಿರುವ ಜಯಲಕ್ಷ್ಮೀ ಸಿಲ್ಕ್ಸ್ ಎದುರುಗಡೆ ಶೇಖರ ಆಚಾರ್ಯ ಇವರ ರಿಕ್ಷಾದ ಕೀಯನ್ನು ಬಲವಂತವಾಗಿ ಕಿತ್ತುಕೊಂಡು ಶೇಖರ ಆಚಾರ್ಯರ ರಿಕ್ಷಾವನ್ನು ದಿಗ್ದಂಧನ ಮಾಡಿ, ಅವಾಚ್ಯ ಶಬ್ದಗಳಿಂದ
ನಿಂದಿಸಿ ಶೇಖರ ಆಚಾರ್ಯರ ವಾಹನ ತೆಗೆಯದ ಹಾಗೆ ದಬ್ಬಾಳಿಕೆ ಮಾಡಿ, ಜೀವ ಬೆದರಿಕೆ
ಹಾಕಿರುವ ಬಗ್ಗೆ ದೂರಿನಲ್ಲಿ ಉಲ್ಲೇಖಿಸಿ ಕ್ರಮ ಕೈಗೊಳ್ಳಲು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಯಶೋಧಾ ಆಟೋ ಚಾಲಕ ಸಂಘದ ಜಿಲ್ಲಾಧ್ಯಕ್ಷರಾದ ಕೃಷ್ಣಮೂರ್ತಿ ಆಚಾರ್ಯ, ಅಧ್ಯಕ್ಷರಾದ ದಿವಕರ ಪೂಜಾರಿ ಉಪಸ್ಥಿತರಿದ್ದರು.
Leave a Reply