
ಕೋಟ: ಉತ್ಥಾನ ದ್ವಾದಶಿಯ ಪರ್ವ ದಿನದಂದು ಸಾಲಿಗ್ರಾಮದ ಶ್ರೀ ಗುರುನರಸಿಂಹ ದೇವಸ್ಥಾನದಲ್ಲಿ ತುಳಸೀ ಪೂಜೆಯನ್ನು ಕ್ಷೀರಾಬ್ಧಿಯೊಂದಿಗೆ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ದೇಗುದ ಅಧ್ಯಕ್ಷ ಡಾ.ಕೆ.ಎಸ್.ಕಾರಂತ ಮತ್ತು ಕಾರ್ಯದರ್ಶಿ ಲಕ್ಷ್ಮೀನಾರಾಯಣ ತುಂಗ ಉಪಸ್ಥಿತಿಯಲ್ಲಿ ಅರ್ಚಕ ಜನಾರ್ದನ ಅಡಿಗ ಪೂಜಾ ವಿಧಿಗಳನ್ನು ನೆರವೇರಿಸಿದರು. ಊರ ಪರವೂರ ಭಕ್ತ ವೃಂದದವರು,
ಆಗಮನಿಗಮಾಗಮ ವೇದ ಪಾಠಶಾಲೆಯ ವಿದ್ಯಾರ್ಥಿಗಳು, ದೇವಕಾರಿ ಮತ್ತು ಸಿಬ್ಬಂದಿ ವರ್ಗದವರು ಹಣತೆಗಳನ್ನು ಬೆಳಗಿ ,ಪೂಜಾ ಕೈಂಕರ್ಯದಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡು ಲೋಕ ಕಲ್ಯಾಣಾರ್ಥ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಿದರು. ಸಾಲಿಗ್ರಾಮದ ಶ್ರೀ ಗುರುನರಸಿಂಹ ದೇವಸ್ಥಾನದಲ್ಲಿ ತುಳಸೀ ಪೂಜೆಯನ್ನು ಕ್ಷೀರಾಬ್ಧಿಯೊಂದಿಗೆ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ದೇಗುದ ಅಧ್ಯಕ್ಷ ಡಾ.ಕೆ.ಎಸ್.ಕಾರಂತ , ಕಾರ್ಯದರ್ಶಿ ಲಕ್ಷಿ÷್ಮÃನಾರಾಯಣ ತುಂಗ ಉಪಸ್ಥಿತಿಯಲ್ಲಿ ಅರ್ಚಕ ಜನಾರ್ದನ ಅಡಿಗ ಮತ್ತಿತರರು ಇದ್ದರು.
Leave a Reply