
ಕೋಟ: ಸರಕಾರಿ ಕನ್ನಡ ಮಾಧ್ಯಮ ಶಾಲೆಗಳ ಉಳಿವಿಗೆ ದಾನಿಗಳ ಕೊಡುಗೆ ಅನನ್ಯವಾದ್ದು ಎಂದು ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಕಿರಣ್ ಕುಮಾರ್ ಕೊಡ್ಗಿ ನುಡಿದರು.
ಶುಕ್ರವಾರ ಕೋಟತಟ್ಟು ಪಡುಕರೆ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ನೂತನ ಕಟ್ಟಡ ಲೋಕಾರ್ಪಣೆ ಶಾಲಾ ಹಬ್ಬ 2023 ಕಾರ್ಯಕ್ರವನ್ನು ಉದ್ಘಾಟಿಸಿ ಮಾತನಾಡಿ ಪ್ರಸ್ತುತ ಆಂಗ್ಲ ಮಾಧ್ಯಮಗಳ ಪೈಪೋಟಿ ನಡುವೆ ಸರಕಾರಿ ಶಾಲೆಗಳು ಶೈಕ್ಷಣಿಕವಾಗಿವಾಗಿ ಅಭಿವೃದ್ಧಿ ಹೊಂದುತ್ತಿವೆ, ಸರಕಾರಿ ಶಾಲೆಗಳಿಗೆ ಅನುದಾನ ಕುಂಠಿತಗೊಂಡರೂ ಸ್ಥಳೀಯ ದಾನಿಗಳ ನೆರವು ಮಹತ್ತರವಾದ ಪಾತ್ರ ವಹಿಸುತ್ತಿದೆ.ಅದೇ ರೀತಿ ಶಿಕ್ಷಣ ಗುಣಮಟ್ಟ ಕಾಯ್ದುಕೊಂಡರೆ ಕನ್ನಡ ಮಾಧ್ಯಮ ಶಾಲೆಗಳು ಉಳಿಯುವುದರಲ್ಲಿ ಅನುಮಾನವೇ ವಿಲ್ಲ ಎಂದರಲ್ಲದೆ ಶಾಲಾ ವಾರ್ಷಿಕೋತ್ಸವಗಳು ಹಬ್ಬದ ವಾತಾವರಣದ ರೀತಿಯಲ್ಲಿ ರೂಪುಗೊಳ್ಳುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಶಾಲೆಯ ನೂತನ ರಂಗಮಂದಿರವನ್ನು ದಾನಿಗಳಾದ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರು ಉದ್ಘಾಟಿಸಿದರು. ತರಗತಿ ಕೋಣೆಯನ್ನು ಕರ್ಣಾಟಕ ಬ್ಯಾಂಕ್ ನಿರ್ದೇಶಕ ಬಾಲಕೃಷ್ಣ ಅಲ್ಸೆ ಉದ್ಘಾಟಿಸಿದರು. ಇದೇ ವೇಳೆ ಶಾಲೆಯ ವತಿಯಿಂದ ದಾನಿ ಕೃಷ್ಣಮೂರ್ತಿ ಮಂಜರ,ಕರ್ಣಾಟಕ ಬ್ಯಾಂಕ್ ನಿರ್ದೇಶಕ ಬಾಲಕೃಷ್ಣ ಅಲ್ಸೆ,ಸ್ಥಳ ದಾನಿ ಸೂರ್ಯನಾರಾಯಣ ಉಪಾಧ್ಯ,ಶ್ರೀ ಧರ್ಮಸ್ಥಳ ಗಗ್ರಾ.ಯೋಜನೆ ಯೋಜನಾಧಿಕಾರಿ ರಮೇಶ್ ಪಿ.ಕೆ, ಕೋಟ ಜನತ ಫಿಶ್ಮಿಲ್ ಮ್ಯಾನೇಜರ್ ಶ್ರೀನಿವಾಸ್ ಕುಂದರ್ ಇವರುಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೋಟತಟ್ಟು ಗ್ರಾಮಪಂಚಾಯತ್ ಅಧ್ಯಕ್ಷ ಸತೀಶ್ ಕುಂದರ್ ವಹಿಸಿದ್ದರು.
ಮುಖ್ಯ ಅಭ್ಯಾಗತರಾಗಿ ಕರ್ಣಾಟಕ ಬ್ಯಾಂಕ್ ಎಜಿಎಂ ರಾಜಗೋಪಾಲ್, ಕ್ಲಸ್ಟರ್ ಮುಖ್ಯಸ್ಥ ವಿಷ್ಣುಮೂರ್ತಿ ಉಪಾಧ್ಯ,ಬ್ರಹ್ಮಾವರ ಕ್ಷೇತ್ರ ಶಿಕ್ಷಣಾಧಿಕಾರಿ ಶಬನಾ ಅಜುಮ್,ಶಾಲಾ ಎಸಡಿಎಂಸಿ ಅಧ್ಯಕ್ಷ ಸುಲೇಮಾನ್ ಸಾಹೇಬ್ ,ಗುತ್ತಿಗೆದಾರ ದಾವುದ್ ಬಿ.ಕೆ, ಕೋಟತಟ್ಟು ಗ್ರಾ.ಪಂ ಕಾರ್ಯದರ್ಶಿ ಸುಮತಿ ಅಂಚನ್,ಅಭಿವೃದ್ಧಿ ಅಧಿಕಾರಿ ರವೀಂದ್ರ ರಾವ್,ಪಂಚಾಯತ್ ಸದಸ್ಯರಾದ ರವೀಂದ್ರ ತಿಂಗಳಾಯ,ಪ್ರಮೋದ್ ಹಂದೆ,ವಿದ್ಯಾ ಸಾಲಿಯಾನ,ಪ್ರಕಾಶ್ ಹಂದಟ್ಟು, ಸೀತಾ,ವಾಸು ಪೂಜಾರಿ,ಅಶ್ವಿನಿ ದಿನೇಶ್, ಶಾಲಾ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಾಗರಾಜ್ ಹಂದೆ, ವಿದ್ಯಾರ್ಥಿ ಮುಖಂಡ ಪ್ರಪುಲ್ ಕುಮಾರ್ ಉಪಸ್ಥಿತರಿದ್ದರು. ಶಾಲಾ ಕಟ್ಟಡ ಸಮಿತಿ ಅಧ್ಯಕ್ಷ ರವೀಂದ್ರನಾಥ್ ಹಂದೆ ಸ್ವಾಗತಿಸಿದರು. ಕಾರ್ಯಕ್ರಮವನ್ನು ಶಿಕ್ಷಕರಾದ ಸಂಗೀತ ಎಸ್ ಕೋಟ್ಯಾನ್ ಮತ್ತು ಗಣೇಶ್ ಆಚಾರಿ ನಿರೂಪಿಸಿದರು. , ಶಾಲಾ ಮುಖ್ಯ ಶಿಕ್ಷಕಿ ಜಾನಕಿ ವರದಿ ವಾಚಿಸಿದರು. ಕಟ್ಟಡ ಸಮಿತಿಯ ಉಪಾಧ್ಯಕ್ಷ ಕೆ. ಶಿವಮೂರ್ತಿ ಉಪಾಧ್ಯ ವಂದಿಸಿದರು.
ಕೋಟತಟ್ಟು ಪಡುಕರೆ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ನೂತನ ಕಟ್ಟಡ ಲೋಕಾರ್ಪಣೆ ಶಾಲಾ ಹಬ್ಬ 2023 ಕಾರ್ಯಕ್ರವನ್ನು ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಕಿರಣ್ ಕುಮಾರ್ ಕೊಡ್ಗಿ ಉದ್ಘಾಟಿಸಿದರು. ಕೋಟತಟ್ಟು ಗ್ರಾಮಪಂಚಾಯತ್ ಅಧ್ಯಕ್ಷ ಸತೀಶ್ ಕುಂದರ್, ಕರ್ಣಾಟಕ ಬ್ಯಾಂಕ್ ಎಜಿಎಂ ರಾಜಗೋಪಾಲ್, ಕ್ಲಸ್ಟರ್ ಮುಖ್ಯಸ್ಥ ವಿಷ್ಣುಮೂರ್ತಿ ಉಪಾಧ್ಯ,ಶಾಲಾ ಎಸಡಿಎಂಸಿ ಅಧ್ಯಕ್ಷ ಸುಲೇಮಾನ್ ಸಾಹೇಬ್ ಮತ್ತಿತರರು ಉಪಸ್ಥಿತರಿದ್ದರು.
Leave a Reply