ಕೋಟ: ಶ್ರೀ ಬಾಲಾಜಿ ಕಲಾ ಭಜನಾ ಮಂಡಳಿ ಮೂಡಹಡು ಪಾಂಡೇಶ್ವರ, ಸಾಸ್ತಾನ ಇದರ 15ನೇ ವರ್ಷದ ಸಂಭ್ರಮಾಚರಣೆಯ ಪ್ರಯುಕ್ತ ಶ್ರೀ ಬಾಲಾಜಿ ಭಜನೋತ್ಸವ 2024 ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಉಡುಪಿ ಜಿಲ್ಲಾ ಮಟ್ಟದ ಮಕ್ಕಳ ಕುಣಿತ ಭಜನಾ ಸ್ಪರ್ಧೆ ಜ.6ರಂದು ಶನಿವಾರದಂದು ಶ್ರೀ ಬ್ರಹ್ಮಸ್ಥಾನ ಪಾಂಡೇಶ್ವರದಲ್ಲಿ ಸಂಜೆ 4:00ಗ ಯಿಂದ ಜರಗಲಿಕ್ಕಿದೆ ಆ ಪ್ರಯುಕ್ತ ಮಧ್ಯಾಹ್ನ 2.30ಕ್ಕೆ ವಿವಿಧ ಭಜನಾ ತಂಡಗಳಿಂದ ಭಜನಾ ಮೆರವಣಿಗೆ ಶ್ರೀ ಶಂಕರನಾರಾಯಣ ದೇವಸ್ಥಾನ ತೀರ್ಥಬೈಲು ನಿಂದ ಶ್ರೀ ಬ್ರಹ್ಮಸ್ಥಾನ, ಪಾಂಡೇಶ್ವರ ತನಕ ,ಮಧ್ಯಾಹ್ನ ಗಂಟೆ 3.30ಕ್ಕೆ
ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮಧ್ಯಾಹ್ನ ಗಂಟೆ 4.00ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ,4.45ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ 5.00ಕ್ಕೆ
ಕುಣಿತ ಭಜನಾ ಸ್ಪರ್ಧಾ ಕಾರ್ಯಕ್ರಮ ರಾತ್ರಿ ಗಂಟೆ: 7.00ಕ್ಕೆ ಸಾರ್ವಜನಿಕ ಮಹಾಅನ್ನಸಂತರ್ಪಣೆ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.














Leave a Reply