ಕೋಟ: ಸಾಮಾಜಿಕ, ಸಾಂಸ್ಕೃತಿಕ ಪರಿವರ್ತನೆ ಭಜನೆಗಳಿಂದ ಸಾಧ್ಯ ಎಂಬುವುದು ಪ್ರಸ್ತುತ ಭಜಕರ ಮೂಲಕ ತಿಳಿದುಕೊಳ್ಳಬೇಕಾಗಿದೆ ಎಂದು ಬಾಳೆಕುದ್ರು ಶ್ರೀ ಮಠದ ಶ್ರೀ ಶ್ರೀ ನೃಸಿಂಹಾಶ್ರಮ ಸ್ವಾಮೀಜಿ ಹೇಳಿದರು
ಶನಿವಾರ ಶ್ರೀ ಬ್ರಹ್ಮಸ್ಥಾನ ಪಾಂಡೇಶ್ವರದಲ್ಲಿ ಶ್ರೀ ಬಾಲಾಜಿ ಕಲಾ ಭಜನಾ ಮಂಡಳಿ ಮೂಡಹಡು ಪಾಂಡೇಶ್ವರ, ಸಾಸ್ತಾನ ಶ್ರೀ ಬಾಲಾಜಿ ಭಜನೋತ್ಸವದ 15ನೇ ವರ್ಷದ ಸಂಭ್ರಮಾಚರಣೆಯ ಪ್ರಯುಕ್ತ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಉಡುಪಿ ಜಿಲ್ಲಾ ಮಟ್ಟದ ಮಕ್ಕಳ ಕುಣಿತ ಭಜನಾ ಸ್ಪರ್ಧಾ ಕಾರ್ಯಕ್ರಮದಲ್ಲಿ ದೀಪ ಬೆಳಗಿಸಿ ಆಶ್ರೀವಚನ ನೀಡಿ ಮಾತನಾಡಿ ಮನೆಯಲ್ಲಿ ಅಥವಾ ಶಾಲೆಯಲ್ಲಿ ಸಿಗಬೇಕಾದ ಸಂಸ್ಕಾರ ಸಮರ್ಪಕವಾಗಿ ಸಿಗುತ್ತಿಲ್ಲ,ಪೋಷಕರು ಮಕ್ಕಳಿಗೆ ನೈಜ ಸಂಸ್ಕಾರ ತಿಳಿಹೇಳುತ್ತಿಲ್ಲ ಇತ್ತ ಮಕ್ಕಳನ್ನು ಸುಸಂಸ್ಕöÈತರನ್ನಾಗಿಸುವ ಶಿಕ್ಷಣ ಸಂಸ್ಥೆಗಳು ವ್ಯಾಪಾರಿಕರಣಗೊಳ್ಳುತ್ತಿದೆ ಹೀಗಾದರೆ ಮಕ್ಕಳ ಭವಿಷ್ಯ ಭದ್ರ ಬುನಾದಿ ಹಾಕುವರಾರು ಎಂದು ವಿಷಾದ ವ್ಯಕ್ತಪಡಿಸಿ,ಭಾರತೀಯ ಸಂಸ್ಕçತಿಯನ್ನು ವಿದೇಶಿಯರು ಅಳವಡಿಸಿಕೊಳ್ಳುತ್ತಿದ್ದಾರೆ ನಾವುಗಳು ವಿದೇಶಿ ಸಂಸ್ಕöÈತಿಗೆ ಮಾರುಹೋಗುತ್ತಿದ್ದೇವೆ ಹೀಗಾದರೆ ಮುಂದಿನ ದಿನಗಳು ಕ್ಲಿಷ್ಟಕರವಾಗುವುದರಲ್ಲಿ ಅನಯಮಾನವೇ ಇಲ್ಲ ಈ ದಿಸೆಯಲ್ಲಿ ಮನೆಯಲ್ಲಿ ಮಕ್ಕಳನ್ನು ಸುಸಂಸ್ಕöÈತರನ್ನಾಗಿಸಲು ಪೋಷಕರು ಮುಂದಡಿ ಇಡಬೇಕಾಗಿದೆ ಎಂದರು.
ಪಾಂಡೇಶ್ವರ ಅಷ್ಟಾಂಗ ಯೋಗಗುರುಕುಲದ ಮುಖ್ಯಸ್ಥ ವಿದ್ವಾನ್ ಡಾ.ವಿಜಯ್ ಮಂಜರ್ ಶುಭನುಡಿಗಳನ್ನಾಡಿ ಭಕ್ತಿಯನ್ನೆ ಕೇಂದ್ರವಾಗಿಸಿ ಸಂಘಸAಸ್ಥೆಗಳು ಹುಟ್ಟಿಕೊಳ್ಳಬೇಕು ಆ ಮೂಲಕ ಪ್ರತಿಯೊಬ್ಬರಲ್ಲೂ ಧಾರ್ಮಿಕ ಪ್ರಜ್ಞೆ ಬೆಳೆಯಬೇಕು, ತಾಳ ಹಿಡಿಯುವ ಕೈಗಳು ಮೊಬೈಲ್ ಹಿಡಿಯುವ ಸ್ಥಿತಿಗೆ ಬಂದು ತಲುಪಿದೆವು ಆದರೆ ಕೆಲವೊಂದು ಭಾಗಗಳಲ್ಲಿ ಪುಟಾಣಿಗಳ ಕೈಯಲ್ಲಿ ಭಜನಾಸಂಕಿರ್ತನಾ ಮನಸ್ಥಿತಿ ಆಶಾದಾಯಕ ಬೆಳವಣಿಗೆಯಾಗಿದೆ,ಭಕ್ತಿ ಎನ್ನುವುದು ಪ್ರೇಮದ ಸಂಕೇತವಾಗಿದೆ, ಆ ಮೂಲಕ ಭಗವಂತನನ್ನು ಸನಿಹದಲ್ಲಿನೋಡುವಂತರಾಗಿ ಪ್ರತಿ ಮನೆ ಮನದಲ್ಲೂ ಭಜನೆ ಸಂಸ್ಕಾರ ಬೆಳೆಯಲಿ ಆ ಮೂಲಕ ಮಾನಸಿಕ ನೆಮ್ಮದಿ ಭಕ್ತಿಯ ಪರಾಕಾಷ್ಠೆ ನೆಲೆಯೂರುವಂತ್ತಾಗಲಿ ಎಂದರು
ಈ ಸಂದರ್ಭದಲ್ಲಿ ಶ್ರೀ ರಾಘವೇಂದ್ರ ಭಜನಾ ಮಂಡಳಿ ಪಾಂಡೇಶ್ವರ ಇದರ ಹಿರಿಯ ಭಜಕ ಶಿವಣ್ಣ ಇವರನ್ನು ಸನ್ಮಾನಿಸಲಾಯಿತು. ಅಧ್ಯಕ್ಷತೆಯನ್ನು ಮಣೂರು ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್ ವಹಿಸಿದ್ದರು. ಮುಖ್ಯ ಅಭ್ಯಾಗತರಾಗಿ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಾಲಿಗ್ರಾಮ ಶ್ರೀ ಗುರುನರಸಿಂಹ ದೇಗುಲದ ಆಡಳಿತಮಂಡಳಿಯ ಅಧ್ಯಕ್ಷ ಡಾ.ಕೆ ಎಸ್ ಕಾರಂತ್,ಶ್ರೀ ಬ್ರಹ್ಮಶ್ರೀ ಬಿಲ್ಲವ ಸೇವಾ ಸಂಘ ಬ್ರಹ್ಮಬೈದರ್ಕಳ ಗೋಳಿಗರಡಿ ಇದರ ಅಧ್ಯಕ್ಷ ಎಂ.ಸಿ ಚಂದ್ರಶೇಖರ, ಐರೋಡಿ ಗ್ರಾಮಪಂಚಾಯತ್ ಮಾಜಿ ಅಧ್ಯಕ್ಷ ಐರೋಡಿ ವಿಠ್ಠಲ ಪೂಜಾರಿ,ಬ್ರಹ್ಮಾವರ ತಾ.ಪಂ ಮಾಜಿ ಅಧ್ಯಕ್ಷೆ ಜ್ಯೋತಿ ಉದಯ್ ಕುಮಾರ್,ಪಾಂಡೇಶ್ವರ ರಕ್ತೇಶ್ವರ ದೇಗುಲದ ಧರ್ಮದರ್ಶಿ ಕೆ.ವಿ ರಮೇಶ್ ರಾವ್,ಪಾಂಡೇಶ್ವರ ಗ್ರಾಮಪಂಚಾಯತ್ ಅಧ್ಯಕ್ಷೆ ಸುಶೀಲ ಸದಾನಂದ ಪೂಜಾರಿ,ಉದ್ಯಮಿ ಶೇಖರ್ ಪೂಜಾರಿ ಮೂಡಕಟ್ಟು,ಉದ್ಯಮಿಗಳಾದ ವಿಕ್ರಮ್ ಮಂಜರ್, ನಿಲೇಶ್ ಪೂಜಾರಿ ಉಪಸ್ಥಿತರಿದ್ದರು.
ಕುಣಿತ ಭಜನಾ ಸ್ಪರ್ಧೆಯಲ್ಲಿ ಮಿಂದೆದ್ದ ಬಾಲ ಭಜಕರು
ಭಾರತೀಯ ಸಂಸ್ಕೃತಿಯಲ್ಲಿ ಭಜನೆ ತನ್ನದೆ ಆದ ವೈಶಿಷ್ಟ್ಯತೆಯನ್ನು ಹೊಂದಿದೆ ಆದರೆ ಬದಲಾದ ಕಾಲಘಟ್ಟದಲ್ಲಿ ಭಜನೆ ಎಂಬುವುದು ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಾ ಬಂದಿತು.ಆದರೆ ದಾಸಶ್ರೇಷ್ಠರು ನೀಡಿದ ಭಜನೆಕ್ಕೆ ಅಂತ್ಯ ಎಂಬುವುದೇ ಇಲ್ಲ ಎನ್ನುವಂತೆ ಇಲ್ಲಿನ ಕರಾವಳಿ ಕಡಲ ತಟದಲ್ಲಿ ಹಿರಿಯ ಭಜಕರು ಭಜನೆಯನ್ನೆ ಜೀವಾಳವಾಗಿರಿಸಿಕೊಂಡು ಮೀನುಗಾರಿಗೆ ವೃತ್ತಿ ಸೇರಿದಂತೆ ಇನ್ನಿತರ ಕಾಯಕದಲ್ಲಿ ಮಗ್ನರಾಗುತ್ತಾ ಬಂದಿದ್ದಾರೆ.
ಅದರಲ್ಲಿ ವಿಶೇಷವಾಗಿ ಭಜನೆ ದಿನದಿಂದ ದಿನಕ್ಕೆ ವಿಶೇಷತೆ ಪಡೆದುಕೊಂಡಿತ್ತಲ್ಲದೆ.ಪ್ರಸ್ತುತ ವಿದ್ಯಮಾನದಲ್ಲಿ ಬಾಲಭಜಕರಿಗೆ ತನ್ನ ಭಜನೆಯನ್ನು ಬಳುವಳಿಯಾಗಿ ನೀಡಿದ್ದಾರೆ ಇದಕ್ಕೆ ಪುಷ್ಠಿ ನೀಡುವಂತೆ ಅವಿಭಜಿತ ಜಿಲ್ಲೆಗಳಲ್ಲಿ ಬಹು ಪ್ರಾಮುಖ್ಯತೆ ಪಡೆದುಕೊಂಡ ಕುಣಿತ ಭಜನೆ ವಿಶೇಷವಾಗಿ ಪುಟಾಣಿ ಆಕರ್ಷಿಸಿ ಪ್ರತಿ ಊರು ಕೇರಿಗಳಲ್ಲಿ ಕುಣಿತ ಅಥವಾ ಕುಳಿತು ಭಜನೆ ಪಾಡುವ ಕಾರ್ಯ ನಡೆಯುತ್ತಿದೆ.
ಪಾಂಡೇಶ್ವರದಲ್ಲಿ ಮಿಂದೆದ್ದ ಬಾಲ ಭಜಕರು
ಪಾಂಡೇಶ್ಚರದಲ್ಲಿ ಶ್ರೀ ಬಾಲಾಜಿ ಕಲಾ ಭಜನಾ ಮಂಡಳಿ ತನ್ನ 15ನೇ ವರ್ಷದ ವರ್ಷಾಚರಣೆ ಅಂಗವಾಗಿ ಶ್ರೀ ಬಾಲಾಜಿ ಭಜನೋತ್ಸವ ಮಕ್ಕಳ ಕುಣಿತ ಭಜನಾ ಸ್ಪರ್ಧಾ ಕಾರ್ಯಕ್ರಮದಲ್ಲಿ ಉಡಪಿ ಜಿಲ್ಲೆಗಳಿಂದ ಒಟ್ಟು 15 ಬಾಲಭಜಕರ ತಂಡಗಳು ಈ ಭಜನೋತ್ಸವದಲ್ಲಿ ಪಾಲ್ಗೊಂಡರಲ್ಲದೆ ನೋಡುಗರ ಕಣ್ಮನ ಸೆಳೆದರು, ಅಲ್ಲದೆ ವಿವಿಧ ರೀತಿಯ ದಾಸರ ಭಕ್ತಿಗೀತೆಗಳನ್ನು ತನ್ನ ವಿವಿಧ ಭಂಗಿಯ ಕುಣಿತದಲ್ಲಿ ಮೇಳೈಸಿದರು.
ಮಣೂರು ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್ ಮಾತನಾಡಿ ಕರಾವಳಿಯ ನೆಚ್ಚಿನ ಸಂಸ್ಕöತಿಯಲ್ಲಿ ಭಜನೆಯೂ ಒಂದು ಆ ಕಾಲಘಟ್ಟದಲ್ಲಿ ನಮ್ಮ ನಮ್ಮ ಮನೆಗಳಲ್ಲಿ ಭಜನೆ ಪಾಡಿದರೆ ಮಾತ್ರ ಊಟ ಹಾಕುತ್ತಿದ್ದರು ಆದರೆ ಇಂದು ವೈಭೋಗದ ಜೀವನದಲ್ಲಿ ಭಜನೆಯನ್ನೆ ಮರೆಯುವ ಕಾಲಕ್ಕೆ ಬಂದು ನಿಂತಿದ್ದೇವೆ,ಭಗವAತನನ್ನು ಹತ್ತಿರದಿಂದ ನೋಡುವ ಸಾಧನ ಇದ್ದರೆ ಅದು ಭಜನೆಯಿಂದ ಮಾತ್ರ ಸಾಧ್ಯ ಈ ದಿಸೆಯಲ್ಲಿ ಪ್ರತಿಯೊಂದು ಮನೆಯೂ ಭಜಕರ ಸಾನಿಧ್ಯವಾಗಲಿ ಆ ಮೂಲಕ ಭಕ್ತಿರ ರಸಧಾರೆ ವಿಶ್ವವ್ಯಾಪಿ ಪಸರಿಸಲಿ ಎಂದುಹಾರೈಸಿದರು.
ವಿಶೇಷತೆ
ಮಧ್ಯಾಹ್ನ 2.30ರಿಂದ ವಿವಿಧ ಭಜನಾ ತಂಡಗಳಿAದ ಭಜನಾ ಮೆರವಣಿಗೆ ಶ್ರೀ ಶಂಕರನಾರಾಯಣ ದೇವಸ್ಥಾನ ತೀರ್ಥಬೈಲುನಿಂದ ಶ್ರೀ ಬ್ರಹ್ಮಸ್ಥಾನ, ಪಾಂಡೇಶ್ವರ ತನಕ ನಂತರ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ ಕುಣಿತ ಭಜನಾ ಸ್ಪರ್ಧಾ ಕಾರ್ಯಕ್ರಮ,ರಾತ್ರಿ ಗಂಟೆ: 7.00ಕ್ಕೆ ಸಾರ್ವಜನಿಕ ಮಹಾಅನ್ನಸಂತರ್ಪಣೆ ಜರಗಿತು.
ಶ್ರೀ ಬ್ರಹ್ಮಸ್ಥಾನ ಪಾಂಡೇಶ್ವರದಲ್ಲಿ ಶ್ರೀ ಬಾಲಾಜಿ ಕಲಾ ಭಜನಾ ಮಂಡಳಿ ಮೂಡಹಡು ಪಾಂಡೇಶ್ವರ, ಸಾಸ್ತಾನ ಶ್ರೀ ಬಾಲಾಜಿ ಭಜನೋತ್ಸವದ 15ನೇ ವರ್ಷದ ಸಂಭ್ರಮಾಚರಣೆಯ ಪ್ರಯುಕ್ತ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಉಡುಪಿ ಜಿಲ್ಲಾ ಮಟ್ಟದ ಮಕ್ಕಳ ಕುಣಿತ ಭಜನಾ ಸ್ಪರ್ಧಾ ಕಾರ್ಯಕ್ರಮದಲ್ಲಿ ್ಲ ಶ್ರೀ ರಾಘವೇಂದ್ರ ಭಜನಾ ಮಂಡಳಿ ಪಾಂಡೇಶ್ವರ ಇದರ ಹಿರಿಯ ಭಜಕ ಶಿವಣ್ಣ ಇವರನ್ನು ಸನ್ಮಾನಿಸಲಾಯಿತು.















Leave a Reply