Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಹಂಗಾರಕಟ್ಟೆ ಯಕ್ಷಗಾನ ಕಲಾಕೇಂದ್ರ- ನಮ್ಮ ಕಾಳಿಂಗ ನಾವಡ ಪ್ರಶಸ್ತಿ ಪ್ರದಾನ

ಕೋಟ: ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ ಐರೋಡಿ ಇದರ ಐವತ್ತರ ಸಂಭ್ರಮದ ಪ್ರಯುಕ್ತ ಸಾಲಿಗ್ರಾಮ ಗುಂಡ್ಮಿ ಸದಾನಂದ ರಂಗಮAಟಪದಲ್ಲಿ ನಡೆಯುತ್ತಿರುವ ಹಿರಿಯರ ನೆನಪು-ಯಕ್ಷ ಸಪ್ತೋತ್ಸವ ಕಾರ್ಯಕ್ರಮದಲ್ಲಿ ಜ. 5ರಂದು ಕಾಳಿಂಗ ನಾವಡ ಸಂಸ್ಮರಣೆ ಮತ್ತು ಪ್ರಶಸ್ತಿ ಪ್ರದಾನ ಜರಗಿತು.

ಉಪನ್ಯಾಸಕ ಡಾ.ರಾಘವೇಂದ್ರ ರಾವ್ ಮಾತನಾಡಿ, ಯಕ್ಷಗಾನ ಕಲೆ ಸರ್ವಶ್ರೇಷ್ಠವಾದದ್ದು. ಹಂಗಾರಕಟ್ಟೆ ಯಕ್ಷಗಾನ ಕಲಾಕೇಂದ್ರ ಈ ಕ್ಷೇತ್ರದ ಮಹತ್ವದ ಕೊಡುಗೆ ನೀಡಿದೆ ಎಂದರು.

ಈ ಸಂದರ್ಭ ಹಿರಿಯ ಯಕ್ಷಗಾನ ಭಾಗವತ ನಾರಾಯಣ ಶಬರಾಯ ಅವರಿಗೆ ಕಾಳಿಂಗ ನಾವಡರ ನೆನಪಲ್ಲಿ ನಮ್ಮ ಕಾಳಿಂಗ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕೃಷಿ ಕ್ಷೇತ್ರದ ಉನ್ನತ ಸಾಧನೆಗಾಗಿ ಪ್ರಗತಿಪರ ಕೃಷಿಕ ರಮೇಶ್ ನಾಯಕ್ ತೆಕ್ಕಟೆ ಅವರನ್ನು ಗೌರವಿಸಲಾಯಿತು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಶಬರಾಯ ಅವರು, ಕಾಳಿಂಗ ನಾವಡರು ಯಕ್ಷಗಾನ ಕ್ಷೇತ್ರದ ಧ್ರುವತಾರೆ, ಹೊಸ ಜನಾಂಗವನ್ನೇ ಕಲೆಯ ಕಡೆ ಆಕರ್ಷಿಸಿದ ವ್ಯಕ್ತಿತ್ವ ಅವರದ್ದು. ಹೀಗಾಗಿ ಅವರ ಹೆಸರಲ್ಲಿ ಪ್ರಶಸ್ತಿ ಪಡೆಯುತ್ತಿರುವುದು ನನ್ನ ಪಾಲಿನ ಭಾಗ್ಯ ಎಂದರು.
ಉದ್ಯಮಿ ಬೆಳ್ವೆ ಸತೀಶ್ ಕಿಣಿ, ಸಾಲಿಗ್ರಾಮ ಪ.ಪಂ. ಸದಸ್ಯ ಕಾರ್ಕಡ ರಾಜು ಪೂಜಾರಿ, ಕಾಳಿಂಗ ನಾವಡರ ಸಹೋದರ ಗಣಪಯ್ಯ ನಾವಡ ಇದ್ದರು.

ಕಲಾಕೇಂದ್ರದ ಕಾರ್ಯದರ್ಶಿ ರಾಜಶೇಖರ್ ಹೆಬ್ಬಾರ್ ಸ್ವಾಗತಿಸಿ, ಸುಮನಾ ಹೇರ್ಳೆ ಕಾರ್ಯಕ್ರಮ ನಿರೂಪಿಸಿ, ಕ.ಸಾ.ಪ. ತಾಲೂಕು ಅಧ್ಯಕ್ಷ ರಾಮಚಂದ್ರ ಐತಾಳ, ಭಾಗವತ ರಾಘವೇಂದ್ರ ಮಯ್ಯ ಸಮ್ಮಾನಿತರನ್ನು ಪರಿಚಯಿಸಿದರು. ಸೀತಾರಾಮ್ ಸೋಮಯಾಜಿ ವಂದಿಸಿದರು.

ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ ಐರೋಡಿ ಇದರ ಐವತ್ತರ ಸಂಭ್ರಮದ ಪ್ರಯುಕ್ತ ಸಂದರ್ಭದಲ್ಲಿ ಹಿರಿಯ ಯಕ್ಷಗಾನ ಭಾಗವತ ನಾರಾಯಣ ಶಬರಾಯ ಅವರಿಗೆ ಕಾಳಿಂಗ ನಾವಡರ ನೆನಪಲ್ಲಿ ನಮ್ಮ ಕಾಳಿಂಗ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಉಪನ್ಯಾಸಕ ಡಾ.ರಾಘವೇಂದ್ರ ರಾವ್, ಉದ್ಯಮಿ ಬೆಳ್ವೆ ಸತೀಶ್ ಕಿಣಿ, ಸಾಲಿಗ್ರಾಮ ಪ.ಪಂ. ಸದಸ್ಯ ಕಾರ್ಕಡ ರಾಜು ಪೂಜಾರಿ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *