
ಕೋಟ; ಇಲ್ಲಿನ ಕೋಟತಟ್ಟು ಗ್ರಾಮಪಂಚಾಯತ್ ವ್ಯಾಪ್ತಿಯ ಕೊರಗ ಕಾಲೋನಿಗೆ ವಿಧಾನಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಶ್ರೀರಾಮ ಮಂತ್ರಾಕ್ಷತೆ ಹಿಡಿದು ಅತಿ ಹಿಂದುಳಿದ ಸಮಾಜ ಕೊರಗ ಕುಟುಂಬಿಕರಲ್ಲಿ ಶ್ರೀರಾಮ ಜಪ ಮಾಡಿದರು.
ಇದೇ ಜನವರಿಯಲ್ಲಿ ಅಯೋಧ್ಯಾ ಪ್ರತಿಷ್ಠಾ ಮಹೋತ್ಸವದ ಹಿನ್ನಲೆಯಲ್ಲಿ ವಿವಿಧ ಭಾಗಗಳಲ್ಲಿ ಶ್ರೀರಾಮ ಸೇವಕರು ಮಂತ್ರಾಕ್ಷತೆ ಹಿಡಿದು ಸಂದರ್ಶಿಸುವ ಸಂದರ್ಭದಲ್ಲಿ ಇಲ್ಲಿನ ಕೊರಗ ಕಾಲೋನಿಯ ಮಹಿಳೆಯರು ಆರತಿ ಬೆಳಗಿ ಮಂತ್ರಾಕ್ಷತೆ ಭಕ್ತಿಯಿಂದ ಪಡೆದರು. ಅಲ್ಲದೆ ಶ್ರೀರಾಮ ಪ್ರತಿಷ್ಠೆ ದಿನದಂದು ತಾವುಗಳೆಲ್ಲ ಸ್ಥಳೀಯ ಕಾರ್ಯಕ್ರಮದಲ್ಲಿ ಭಾಗಿಯಾಗುವ ಆಶಾಭಾವನೆ ವ್ಯಕ್ತಪಡಿಸಿದರು.
ಕೊರಗ ಸಮುದಾಯದವರೊಡನೆ ಮುಕ್ತವಾಗಿ ಬೆರತ ಕೋಟ ಹಿಂದೂ ಧರ್ಮದಲ್ಲಿ ಅತಿ ಹಿಂದುಳಿದ ಸಮುದಾಯವಾದ ಕೊರಗ ಸಮುದಾಯದ ಕಾಲೋನಿಗೆ ಭೇಟಿ ನೀಡುವ ಅಪರೂಪದ ಸಂದರ್ಭಗಳಲ್ಲಿ ವಿಪಕ್ಷ ನಾಯಕ ಕೋಟ, ಸಮುದಾಯದ ನಡುವೆ ಮುಕ್ತವಾಗಿ ಬೆರೆತು ಅವರ ಸಮಸ್ಯೆಗಳನ್ನು ಆಲಿಸಿದರು . ಅಲ್ಲದೆ ಅದೇ ಸಂದರ್ಭದಲ್ಲಿ ಕೊರಗ ಸಮುದಾಯ ಟೀ ಸೇವಿಸಿ ತಮ್ಮ ಸರಳತೆಯನ್ನು ಮತ್ತೊಮ್ಮೆ ಸಾಕ್ಷೀಕರಿಸಿದರು.
ಹಕ್ಕು ಪತ್ರ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ
ಕೊರಗ ಸಮುದಾಯದ ಬಗ್ಗೆ ಸದಾ ಸ್ಪಂದಿಸು ಕೋಟತಟ್ಟು ಗ್ರಾಮಪಂಚಾಯತ್ ಹಾಗೂ ಅದರ ಅಧ್ಯಕ್ಷ ಸತೀಶ್ ಕುಂದರ್ ನೇತೃತ್ವದಲ್ಲಿ ಸ್ಥಳಕ್ಕೆ ಭೇಟಿ ನೀಡಿದ ವಿಪಕ್ಷ ನಾಯಕ ಕೋಟ ಕೊರಗ ಸಮುದಾಯದ ಬಹುಬೇಡಿಕೆಯ ಹಕ್ಕುಪತ್ರದ ಕುರಿತಂತೆ ಸಮಾಜ ಕಲ್ಯಾಣ ಇಲಾಖಾಧಿಕಾರಿಗಳಿಗೆ ದೂರವಾಣಿಯ ಮೂಲಕ ಸಂಭಾಷಣೆ ಮಾಡಿ ಹಕ್ಕುಪತ್ರದ ಕುರಿತು ಶೀಘ್ರದಲ್ಲೆ ಪರಿಹಾರ ಕಂಡುಕೊಳ್ಳಲು ಸೂಚಿಸಿದರು.
ಈ ಸಂದರ್ಭದಲ್ಲಿ ಪಂಚಾಯತ್ ಸದಸ್ಯರಾದ ಎಚ್ ಪ್ರಮೋದ್ ಹಂದೆ,ಪ್ರಕಾಶ್ ಹಂದಟ್ಟು,ಸೀತಾ ,ಬಿಜೆಪಿ ಮುಖಂಡ ಪ್ರಥ್ವೀರಾಜ್ ಶೆಟ್ಟಿ,ಕೋಟ ಸಿ ಎ ಬ್ಯಾಂಕ್ ನಿರ್ದೇಶಕ ರಂಜೀತ್ ಕುಮಾರ್,ಬಾರಿಕರೆ ಯುವಕ ಮಂಡಲದ ಅಧ್ಯಕ್ಷ ರವಿ ಕುಂದರ್ ಮತ್ತಿತರರು ಇದ್ದರು.
ಕೋಟತಟ್ಟು ಗ್ರಾಮಪಂಚಾಯತ್ ವ್ಯಾಪ್ತಿಯ ಕೊರಗ ಕಾಲೋನಿಗೆ ವಿಧಾನಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಶ್ರೀರಾಮ ಮಂತ್ರಾಕ್ಷತೆ ನೀಡಿದರು. ಪಂಚಾಯತ್ ಸದಸ್ಯರಾದ ಎಚ್ ಪ್ರಮೋದ್ ಹಂದೆ,ಪ್ರಕಾಶ್ ಹಂದಟ್ಟು,ಬಿಜೆಪಿ ಮುಖಂಡ ಪ್ರಥ್ವೀರಾಜ್ ಶೆಟ್ಟಿ ಮತ್ತಿತರರು ಇದ್ದರು.
Leave a Reply