
ಕೋಟ: ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇವಸ್ಥಾನದ ಜ್ಞಾನ ಮಂದಿರದಲ್ಲಿ ಮುಂಬರುವ ಸಾಲಿಗ್ರಾಮ ಹಬ್ಬವೆಂದೇ ಖ್ಯಾತಿ ಗಳಿಸಿರುವ ಶ್ರೀ ದೇವರ ವಾರ್ಷಿಕ ಬ್ರಹ್ಮ ರಥೋತ್ಸವದ ಹಿನ್ನೆಲೆಯಲ್ಲಿ ಪೂರ್ವ ತಯಾರಿಯ ಸಮಾಲೋಚನಾ ಸಭೆ ರವಿವಾರ ನಡೆಸಲಾಯಿತು.
ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಕೆ.ಎಸ್.ಕಾರಂತ ಅಧ್ಯಕ್ಷತೆಯನ್ನು ವಹಿಸಿದ್ದರು.
ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಮಾಜಿ ಸದಸ್ಯ ವೇ.ಮೂ.ಹಲಸಿನಕಟ್ಟೆ ಅನಂತಪದ್ಮನಾಭ ಐತಾಳ , ಸುಬ್ರಹ್ಮಣ್ಯ ಹೇರ್ಳೆ, ಗ್ರಾಮಮೊಕ್ತಸೇರರಾದ ಚಿದಾನಂದ ತುಂಗ, ರಾಜೇಂದ್ರ ಉರಾಳ, ಲಕ್ಷ್ಮಣ ನಕ್ಷತ್ರಿ, ಕೃಷ್ಣ ಮೂರ್ತಿ ಐತಾಳ, ಆನಂದರಾಮ ಹೇರ್ಳೆ, ಕೂಟ ಮಹಾ ಜಗತ್ತಿನ ಕೇಂದ್ರ ಸಂಸ್ಥೆಯ ಮಾಜಿ ಉಪಾಧ್ಯಕ್ಷ ತಾರಾನಾಥ ಹೊಳ್ಳ, ಸಾಲಿಗ್ರಾಮ ಅಂಗಸಂಸ್ಥೆಯ ಕಾರ್ಯದರ್ಶಿ ಮಹಾಬಲ ಹೇರ್ಳೆ,ಯುವ ವೇದಿಕೆಯ ಅಧ್ಯಕ್ಷ ಗಿರಿಶ ಮಯ್ಯ, ಸ್ಥಳೀಯ ಜನಪ್ರತಿನಿಧಿಗಳಾದ ಅನಸೂಯಾ ಹೇರ್ಳೆ, ಸುಲತಾ ಹೆಗ್ಡೆ, ಪಟ್ಟಣ ಪಂಚಾಯತಿನ ಅಧಿಕಾರಿ ಚಂದ್ರಶೇಖರ ಸೋಮಯಾಜಿ, ಪ್ರಮುಖರಾದ ನಾಗರಾಜ ಗಾಣಿಗ, ಶಿವರಾಮ ಉಡುಪ,ರಾಜಾರಾಮ ಐತಾಳ, ಪಟ್ಟಾಭಿರಾಮ ಸೋಮಯಾಜಿ , ಅಚ್ಯುತ ಪೂಜಾರಿ ಮತ್ತಿತರರು ಹಬ್ಬದ ಸುಸೂತ್ರ ಆಚರಣೆಗೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು. ಕೋಶಾಧಿಕಾರಿ ವೇ.ಮೂ.ಪರಶುರಾಮ ಭಟ್ಟ ವಂದನಾರ್ಪಣೆಯ ನಂತರ ಸಾಮೂಹಿಕ ಐಕ್ಯ ಮಂತ್ರ ಪಠಣದೊಂದಿಗೆ ಸಭೆಯು ಮುಕ್ತಾಯಗೊಂಡಿತು. ದೇಗುಲದ ವ್ಯವಸ್ಥಾಪಕ ನಾಗರಾಜ ಹಂದೆ ಸ್ವಾಗತಿಸಿದರು. ಕಾರ್ಯದರ್ಶಿ ಲಕ್ಷ್ಮಿನಾರಾಯಣ ತುಂಗರು ಕಳೆದ ಸಾರಿಯ ಹಬ್ಬದ ನಂತರ ನಡೆದ ಅವಲೋಕನಾ ಸಭೆಯ ವಿವರವನ್ನು ಸಭೆಯ ಮುಂದಿಟ್ಟರು.
ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇವಸ್ಥಾನದ ವಾರ್ಷಿಕ ಬ್ರಹ್ಮ ರಥೋತ್ಸವದ ಹಿನ್ನೆಲೆಯಲ್ಲಿ ಪೂರ್ವ ತಯಾರಿಯ ಸಮಾಲೋಚನಾ ಸಭೆ ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಕೆ.ಎಸ್.ಕಾರಂತ ಅಧ್ಯಕ್ಷತೆಯಲ್ಲಿ ರವಿವಾರ ನಡೆಯಿತು. ಆಡಳಿತ ಮಂಡಳಿಯ ಮಾಜಿ ಸದಸ್ಯ ವೇ.ಮೂ. ಹಲಸಿನಕಟ್ಟೆ ಅನಂತಪದ್ಮನಾಭ ಐತಾಳ , ಸುಬ್ರಹ್ಮಣ್ಯ ಹೇರ್ಳೆ, ಗ್ರಾಮಮೊಕ್ತಸೇರರಾದ ಚಿದಾನಂದ ತುಂಗ, ರಾಜೇಂದ್ರ ಉರಾಳ ಮತ್ತಿತರರು ಇದ್ದರು.
Leave a Reply