
ಕೋಟ: ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇವಸ್ಥಾನದಲ್ಲಿ ಡಿ. 31 ರವಿವಾರದಿಂದ ಆರಂಭಗೊAಡ ಶಾಕಲ ಋಕ್ಸಂಹಿತಾ ಯಾಗವು ಜ.7ರ ರವಿವಾರದಂದು ವಿಧ್ಯುಕ್ತವಾಗಿ ಸಂಪನ್ನಗೊಂಡಿತು.
ದೇವಳದ ತಂತ್ರಿ ಕೃಷ್ಣ ಸೋಮಯಾಜಿ ಯವರ ನೇತೃತ್ವದಲ್ಲಿ ಋತ್ವಿಜ ಪ್ರಮುಖರಾದ ವೇ.ಮೂ.ದೇವಳಿ ಮುರಳೀಧರ ಐತಾಳ, ಚಿದಾನಂದ ಐತಾಳ,ವಾದಿರಾಜ ಐತಾಳ, ರಾಮಚಂದ್ರ ಐತಾಳ, ಮಧುಕರ ಹೊಳ್ಳ ಕುಂದಾಪುರ ಮತ್ತಿತರರ ವೃಂದದಿಂದ ವೇದೋಕ್ತ ಮಂತ್ರಾಕ್ಷತೆಯ ಕಾರ್ಯಕ್ರಮವು ಗುರು ಸನ್ನಿಧಿಯಲ್ಲಿ ನಡೆಯಿತು. ದೇವಳದ ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಕೆ.ಎಸ್.ಕಾರಂತ ದಂಪತಿ, ಕೋಶಾಧಿಕಾರಿ ವೇ.ಮೂ.ಪರಶುರಾಮ ಭಟ್ಟ, ಸದಸ್ಯರಾದ ಮಂಗಳೂರು -ಸುರತ್ಕಲ್ ಪಿ.ಸದಾಶಿವ ಐತಾಳ, ಕೇರಳ ಮೀಯಪದವು ಶ್ರೀಧರ ರಾವ್ ,ಪೂರ್ವ ಅಧ್ಯಕ್ಷ ಎ.ಜಗದೀಶ ಕಾರಂತ, ಕಾರ್ಯದರ್ಶಿ ಆನಂದರಾಮ ಮಧ್ಯಸ್ಥ, ಕೋಶಾಧಿಕಾರಿ ಎ.ಕೃಷ್ಣ ಹೆಬ್ಬಾರ, ಕೂಟ ಮಹಾ ಜಗತ್ತಿನ ಸಾಲಿಗ್ರಾಮ ಅಂಗಸಂಸ್ಥೆಯ ಅಧ್ಯಕ್ಷ ಶ್ರೀಪತಿ ಅಧಿಕಾರಿ, ಕೇಂದ್ರ ಸಂಸ್ಥೆಯ ಪೂರ್ವ ಉಪಾಧ್ಯಕ್ಷ ತಾರಾನಾಥ ಹೊಳ್ಳ, ಸಂಘಟನಾ ಕಾರ್ಯದರ್ಶಿಕಾಸರಗೋಡು ಕೃಷ್ಣ ಪ್ರಸಾದ ಅಡಿಗ,ಮಂಗಳೂರು, ಕುಂದಾಪುರ, ಉಡುಪಿ , ಕಾಸರಗೋಡು ಮುಂತಾದೆಡೆಗಳ ಅಂಗಸAಸ್ಥೆಯ ಪದಾಧಿಕಾರಿಗಳು, ಸದಸ್ಯರು, ಮಹಿಳಾ ವೇದಿಕೆಯ ಅಧ್ಯಕ್ಷೆ ಯಶೋದಾ ಹೊಳ್ಳ ಮತ್ತು ಸದಸ್ಯೆಯರು, ಗ್ರಾಮ ಮೊಕ್ತೇಸರ ವೃಂದದ ಮಹಾಬಲ ಹೇರ್ಳೆ, ಚಿದಾನಂದ ತುಂಗ ,ಊರ ಪರವೂರ ಅಸಂಖ್ಯಾತ ಭಕ್ತ ಬಾಂಧವರು ಶ್ರದ್ಧೆಯಿಂದ ಭಾಗವಹಿಸಿದ್ದರು. ಯಾಗದ ಎಂಟೂ ದಿನಗಳಲ್ಲಿ ಸಾಲಿಗ್ರಾಮ ಅಂಗಸAಸ್ಥೆಯ ಮಹಿಳಾ ವೇದಿಕೆಯ ಸದಸ್ಯೆಯರಿಂದ ವಿಷ್ಣು ಸಹಸ್ರನಾಮ ಪಠನವು ನಡೆದಿದ್ದು ಕೊನೆಯ ದಿನದಲ್ಲಿ ಕಾಸರಗೋಡು ಅಂಗಸAಸ್ಥೆಯ 60 ಸದಸ್ಯರ ತಂಡದಿAದ ವಿಶೇಷ ಪಠನವು ನೆರವೇರಿದ್ದು ಸಂಘ ಶಕ್ತಿ ಮತ್ತು ಸಮೂಹ ಭಕ್ತಿಯ ಅಭಿವ್ಯಕ್ತಿಯಾಗಿತ್ತು. ಸಾವಿರದೈನೂರಕ್ಕು ಮಿಕ್ಕಿದ ಸಂಖ್ಯೆಯ ಭಕ್ತರು ಭೋಜನ ಪ್ರಸಾದವನ್ನು ಸ್ವೀಕರಿಸಿದರು.
ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇವಸ್ಥಾನದಲ್ಲಿ ಡಿ. 31 ರವಿವಾರದಿಂದ ಆರಂಭಗೊAಡ ಶಾಕಲ ಋಕ್ಸಂಹಿತಾ ಯಾಗವು ಜ.7ರ ರವಿವಾರದಂದು ವಿಧ್ಯುಕ್ತವಾಗಿ ಸಂಪನ್ನಗೊಂಡಿತು. ದೇವಳದ ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಕೆ.ಎಸ್.ಕಾರಂತ ದಂಪತಿ, ಕೋಶಾಧಿಕಾರಿ ವೇ.ಮೂ.ಪರಶುರಾಮ ಭಟ್ಟ,ಸದಸ್ಯರಾದ ಮಂಗಳೂರು -ಸುರತ್ಕಲ್ ಪಿ.ಸದಾಶಿವ ಐತಾಳ್ ಮತ್ತಿತರರು ಇದ್ದರು.
Leave a Reply