
ಕೋಟ: ಇದೇ ಬರುವ ಜ.17ರಂದು ಸಾಲಿಗ್ರಾಮದ ಶ್ರೀ ಗುರು ನರಸಿಂಹ ದೇವರ ಬ್ರಹ್ಮ ರಥೋತ್ಸವದ ಹಿನ್ನಲ್ಲೆಯಲ್ಲಿ ರಥವನ್ನು ವಿಧ್ಯುಕ್ತವಾಗಿ ರಾಜಗೋಪುರದ ಎದುರು ತಂದು ನಿಲ್ಲಿಸಲಾಯಿತು.
ಶ್ರೀ ನಾಗದೇವರಿಗೆ ಸುರೇಶ ಭಟ್ಟರಿಂದ ಪವಮಾನ ಕಲಶಾಭಿಷೇಕವಾದ ನಂತರ ರಥಕ್ಕೆ ಪೂಜೆಯನ್ನು ದೇಗುಲದ ಅಧ್ಯಕ್ಷ ಡಾ.ಕೆ.ಎಸ್.ಕಾರಂತರ ಸಮಕ್ಷಮ ಅರ್ಚಕ ಜನಾರ್ದನ ಅಡಿಗರು ಮಂಗಳ ವಾದ್ಯದೊಂದಿಗೆ ನೆರವೇರಿಸಿ ಆರತಿ ಬೆಳಗಿದರು. ರಥದ ಮೇಲುಸ್ತುವಾರಿ ಚಿತ್ರಪಾಡಿ ಬಾಬುರಾಯ ಆಚಾರ್ಯರ ನಿರ್ದೇಶನದಲ್ಲಿ ಭಕ್ತ ಸಮೂಹದವರು ರಥವನ್ನು ಹೊರಗೆಳೆಯಲಾಯಿತು.
ಆಡಳಿತ ಮಂಡಳಿಯ ಕೋಶಾಧಿಕಾರಿ ಪರಶುರಾಮ ಭಟ್ಟ, ಮಾಜಿ ಕೋಶಾಧಿಕಾರಿ ಸುಬ್ರಹ್ಮಣ್ಯ ಹೇರ್ಳೆ, ಕಾರ್ಯದರ್ಶಿ ಲಕ್ಷ್ಮಿನಾರಾಯಣ ತುಂಗ, ಕೂಟ ಮಹಾ ಜಗತ್ತಿನ ಕೇಂದ್ರ ಸಂಸ್ಥೆಯ ಮಾಜಿ ಉಪಾಧ್ಯಕ್ಷ ತಾರಾನಾಥ ಹೊಳ್ಳ, ದೇವಳದ ವ್ಯವಸ್ಥಾಪಕ ನಾಗರಾಜ ಹಂದೆ, ಸಿಬ್ಬಂದಿ ವರ್ಗದ ಕೇಶವ ಹೊಳ್ಳ, ಗಣೇಶ ಭಟ್ಟ,ಚೇತನ ಐತಾಳ,ಅಖಿಲೇಶ ಐತಾಳ,ನಾಗಭೂಷಣ ಹೆಬ್ಬಾರ, ನರಸಿಂಹ ಉಪಾಧ್ಯ, ಸನಾತನ ರಾವ್, ಮಹೇಶ ಬಾಯರಿ,ದೇವಕಾರಿ ರಘುರಾಮ ಹೆಬ್ಬಾರ, ನಿಗಮಾಗಮ ವೇದ ಪಾಠಶಾಲೆಯ ವಿದ್ಯಾರ್ಥಿಗಳು, ಊರ ಹತ್ತು ಸಮಸ್ತರು ಶ್ರದ್ಧಾ ಭಕ್ತಿಯಿಂದ ರಥಾರಂಭ ಪ್ರಕ್ರಿಯೆಯಲ್ಲಿ ಭಾಗವಹಿಸಿ ಶ್ರೀ ದೇವರ ಅನುಗ್ರಹಕ್ಕೆ ಪಾತ್ರರಾದರು.
ಸಾಲಿಗ್ರಾಮದ ಶ್ರೀ ಗುರು ನರಸಿಂಹ ದೇವರ ಬ್ರಹ್ಮ ರಥೋತ್ಸವದ ಹಿನ್ನಲ್ಲೆಯಲ್ಲಿ ರಥವನ್ನು ವಿಧ್ಯುಕ್ತವಾಗಿ ರಾಜಗೋಪುರದ ಎದುರು ತಂದು ನಿಲ್ಲಿಸಲಾಯಿತು. ದೇಗುಲದ ಅಧ್ಯಕ್ಷ ಡಾ.ಕೆ.ಎಸ್.ಕಾರಂತ, ಚಿತ್ರಪಾಡಿ ಬಾಬುರಾಯ ಆಚಾರ್ಯ,ಆಡಳಿತ ಮಂಡಳಿಯ ಕೋಶಾಧಿಕಾರಿ ಪರಶುರಾಮ ಭಟ್ಟ, ಮಾಜಿ ಕೋಶಾಧಿಕಾರಿ ಸುಬ್ರಹ್ಮಣ್ಯ ಹೇರ್ಳೆ ಮತ್ತಿತರರು ಇದ್ದರು.
Leave a Reply