ಕುಂದಾಪುರ : ನೊಂದವರಿಗೆ ನೆರವಿನ ದಾರಿ ದೀಪ
” ಯುವ ಮನಸ್ಸುಗಳಿಗೆ ಸ್ಫೂರ್ತಿ “ಯಾದ ಈ ಸಂಸ್ಥೆಯು ತಾ.10 ರಂದು ರಂದು ಕೋಟದ ಹಲವು ಮಕ್ಕಳ ತಾಯಿ ಶ್ರೀ ಅಮೃತೇಶ್ವರಿ ದೇವಸ್ಥಾನದ ಹಾಲು ಹಬ್ಬ ಮತ್ತು ವಾರ್ಷಿಕ ಗೆಂಡ ಸೇವೆ ಹಬ್ಬದಲ್ಲಿ ಪುಟ್ಟ ಮಕ್ಕಳ ಚಿಕಿತ್ಸೆಯ ವೆಚ್ಚವಾಗಿ ಹಾಗೂ ಕಾಯಿಲೆಯಿಂದ ಬಳಲುತ್ತಿರುವವರಿಗೆ ಆರ್ಥಿಕವಾಗಿ ಸಹಾಯ ಹಸ್ತ ಚಾಚಲು ತಂಡದ ಸದಸ್ಯರು ವೇಷ ತೊಟ್ಟು ಹಬ್ಬದ ಜಾತ್ರೆಯ ಸಂದರ್ಭದಲ್ಲಿ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಲಾಯಿತು.
ಹಾಗೆಯೇ ಇದೇ ಸಂದರ್ಭದಲ್ಲಿ ಕೋಟದ ಟ್ರಾವೆಲ್ ಲಿಂಕ್ಸ್ ಪ್ರೆಂಡ್ಸ್ ಅರ್ಪಿಸುವ ಅಮೃತ ಮಹೋತ್ಸವ ಕಾರ್ಯಕ್ರಮದ ಸಭಾ ವೇದಿಕೆಯಲ್ಲಿ ಜೈ ಕುಂದಾಪ್ರ ಸೇವಾ ಟ್ರಸ್ಟ್ (ರಿ.) ಸಂಸ್ಥೆಯ ಸಮಾಜಮುಖಿ ಸೇವೆಯನ್ನು ಗುರುತಿಸಿ ನಿಸ್ವಾರ್ಥ ಸೇವಾ ಟ್ರಸ್ಟ್( ರಿ.) ಕೋಟ* ಇವರು ರೂ.5000/- ಚೆಕ್ ಅನ್ನು ಅಂಶು ಎಂಬ ಪುಟ್ಟ ಮಗುವಿನ ಚಿಕಿತ್ಸೆಗೆ ಸತೀಶ್ ಕುಂದರ್ ಅವರ ನೇತೃತ್ವದಲ್ಲಿ ನೀಡಲಾಯಿತು.
ಈ ಸಂದರ್ಭದಲ್ಲಿ ಜೈ ಕುಂದಾಪ್ರ ಸೇವಾ ಟ್ರಸ್ಟ್ ಸ್ಥಾಪಕಧ್ಯಕ್ಷರಾದ ಪುಂಡಲೀಕ್ ಮೊಗವೀರ ತೆಕ್ಕಟ್ಟೆ, ಕಾರ್ಯದರ್ಶಿ ದಿವ್ಯ ಕುಂದಾಪುರ, ಮನೀಶ್ ಕುಲಾಲ್, ಶಿವರಾಮ್ ಕೋಡಿ, ಸುಧೀರ್ ಕುಂದಾಪುರ, ಆಕಾಶ್ ಮೊಗವೀರ, ಪೂರ್ಣಿಮಾ ಕುಂದಾಪುರ, ಪವಿತ್ರ ಬೀಜಾಡಿ, ನಾಗರಾಜ್ ಮುದ್ದೇರೊಣಿ, ಆಶ್ಲೇಷ ಕೋಟೇಶ್ವರ ಸಹಕರಿಸಿದರು. ಧನಸಹಾಯ ಮಾಡಿರುವವರ ಎಲ್ಲಾ ಭಕ್ತಾದಿಗಳಿಗೆ ಮತ್ತು ದಾನಿಗಳಿಗೆ ಟೀಮ್ ಜೈ ಕುಂದಾಪ್ರ ಸೇವಾ ಸಂಸ್ಥೆಯವರು ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.















Leave a Reply