
ಕೋಟ: ಕಲಾವಿದರಿಗೆ ಅಧ್ಯಯನ, ಲೋಕಾನುಭವ ಅನುಭವಿಸುವ ಮನೋಭಾವ ಅಗತ್ಯ. ಕಲಾವಿದರು ಯಕ್ಷಗಾನ ಮಾಧ್ಯಮದ ಮೂಲಕ ಪ್ರೇಕ್ಷಕರ ಸ್ಪಂದನೆಯನ್ನುಗಳಿಸಬೇಕು. ಹತ್ತು ವರ್ಷಗಳ ಹಿಂದೆ ಒಂದು ಯಕ್ಷಗಾನ ಪ್ರದರ್ಶನದ ಮಾತುಗಾರಿಕೆ ಹೇಗಿತ್ತೋ ಅಂತೆಯೇ ಇಂದು ಯಥಾವತ್ತಾಗಿ ಮುಂದುವರಿಯುತ್ತಿದೆ. ಹೊರತು ಅರ್ಧಗಾರಿಕೆಯಲ್ಲಿ ಅಧ್ಯಯನದ ಮೂಲಕ ವಿಸ್ತರಿಸಿಕೊಳ್ಳದೇ ಕಲಾವಿದರು ತಮ್ಮ ಅಧ್ಯಯನದ ಬಡತನವನ್ನು ಪ್ರದರ್ಶಿಸಿಕೊಳ್ಳುತ್ತಿದ್ದಾರೆ ಎಂದು ಹಿರಿಯ ವಿದ್ವಾಂಸ ರಾಧಾಕೃಷ್ಣ ಕಲ್ಬಾರ್ ಖೇದ ವ್ಯಕ್ತಪಡಿಸಿದರು.
ಸಾಲಿಗ್ರಾಮ ಗುಂಡ್ಮಿಯ ಸದಾನಂದ ರಂಗ ಮಂಟಪದಲ್ಲಿ ನಡೆದ ಕೇಂದ್ರದ ಸಂಸ್ಥಾಪಕ ಐರೋಡಿ ಸದಾನಂದ ಹೆಬ್ಬಾರರ ಸಂಸ್ಮರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ವೇಳೆ ನಿವೃತ್ತ ಮುಖ್ಯೋಪಾದ್ಯಾಯ ಗಿಳಿಯಾರು ಹರಿಕೃಷ್ಣ ಹೊಳ್ಳರಿಗೆ 2023ರಸದಾನಂದಪ್ರಶಸ್ತಿಯನ್ನು ನೀಡಿ ಪುರಸ್ಕರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಲಾಕೇಂದ್ರದ ಅಧ್ಯಕ್ಷರಾದ ಆನಂದ ಸಿ ಕುಂದರ್ ವಹಿಸಿದ್ದರು. ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ ಶೆಟ್ಟಿ, ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಸೊಸೈಟಿಯ ಅಧ್ಯಕ್ಷರಾದ ಡಾ| ಶ್ರೀನಿವಾಸ ಶೆಟ್ಟಿ, ಓ.ಎನ್.ಜಿ.ಸಿ ಮುಂಬೈ ಇದರ ನಿವೃತ್ತ ಮಹಾ ಪ್ರಬಂಧಕರಾದ ಬನ್ನಾಡಿ ನಾರಾಯಣ ಆಚಾರ್, ಹೆಬ್ಬಾರ್ ಕುಟುಂಬದ ಹಿರಿಯರಾದ ಐರೋಡಿ ನರಸಿಂಹ ಹೆಬ್ಬಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪತ್ರಕರ್ತ ಅಂಬರೀಷ ಭಟ್ಟರು ಸಂಸ್ಮರಣಾ ಮಾತುಗಳು ಹಾಗೂ ಪ್ರಶಸ್ತಿ ಪುರಸ್ಕೃತರ ಪರಿಚಯವನ್ನು ಮಾಡಿದರು. ಮಹಾಲಕ್ಷಿö್ಮ ಸೋಮಯಾಜಿ ಕಾರ್ಯಕ್ರಮ ನಿರ್ವಹಣೆ ಮಾಡಿ, ಸೀತಾರಾಮ ಸೋಮಯಾಜಿ ವಂದನಾರ್ಪಣೆ ಗೈದರು. ಸಭಾ ಕಾರ್ಯಕ್ರಮದ ನಂತರ ರಾವಣ ವಧೆ ಯಕ್ಷಗಾನ ಪ್ರದರ್ಶನ ನಡೆಯಿತು.
ಸಾಲಿಗ್ರಾಮ ಗುಂಡ್ಮಿಯ ಸದಾನಂದ ರಂಗ ಮಂಟಪದಲ್ಲಿ ನಡೆದ ಕೇಂದ್ರದ ಸಂಸ್ಥಾಪಕ ಐರೋಡಿ ಸದಾನಂದ ಹೆಬ್ಬಾರರ ಸಂಸ್ಮರಣಾ ಕಾರ್ಯಕ್ರಮದಲ್ಲಿ ನಿವೃತ್ತ ಮುಖ್ಯೋಪಾದ್ಯಾಯ ಗಿಳಿಯಾರು ಹರಿಕೃಷ್ಣ ಹೊಳ್ಳರಿಗೆ 2023 ರ ಸದಾನಂದ ಪ್ರಶಸ್ತಿಯನ್ನು ನೀಡಿ ಪುರಸ್ಕರಿಸಲಾಯಿತು. ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಸೊಸೈಟಿಯ ಅಧ್ಯಕ್ಷರಾದ ಡಾ| ಶ್ರೀನಿವಾಸ ಶೆಟ್ಟಿ, ಓ.ಎನ್.ಜಿ.ಸಿ ಮುಂಬೈ ಇದರ ನಿವೃತ್ತ ಮಹಾ ಪ್ರಬಂಧಕರಾದ ಬನ್ನಾಡಿ ನಾರಾಯಣ ಆಚಾರ್, ಹೆಬ್ಬಾರ್ ಕುಟುಂಬದ ಹಿರಿಯರಾದ ಐರೋಡಿ ನರಸಿಂಹ ಹೆಬ್ಬಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
Leave a Reply