
ಕೋಟ : ಇಲ್ಲಿನ ತ್ರಿಪುರವಾಸಿನಿ ಅರಮನೆ ಮೈದಾನದಲ್ಲಿ ನಡೆದ ಸಿರಿಧಾನ್ಯ ಮತ್ತು ಸಾವಯವ ಅಂತರಾಷ್ಟ್ರೀಯ ವಾಣಿಜ್ಯ ಮೇಳ-2024 ರ ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರ, ಜಲಾನಯನ ಅಭಿವೃದ್ಧಿ ಇಲಾಖೆ, ಮೀನುಗಾರಿಕೆ ಇಲಾಖೆ, ಹಾಗೂ ಸ್ಕೊಡವೇಸ ಸಂಸ್ಥೆಯ ಸಹಯೋಗದಲ್ಲಿ ರಚಿತವಾದ ಉಡುಪಿಕಿನಾರ ಮೀನುಗಾರರ ಉತ್ಪಾದಕ ಕಂಪನಿ ತನ್ನ ಕಂಪನಿಯಿಂದ ತಯಾರಿಸಿದ ವಿವಿಧ ಮೀನಿನ ಉತ್ಪನ್ನಗಳ ಜೊತೆಗೆ ಕಂಪನಿಯ ಮೀನುಗಾರ ಷೇರುದಾರರು ನಡೆಸುತ್ತಿರುವ ಪಚ್ಚಿಲೇ ಮತ್ತು ಕಲ್ಲ ಕೃಷಿಯ ಪಚ್ಚಿಲೇ, ಕಲ್ಲವನ್ನು ಪ್ರದರ್ಶಿಸಿ ಪ್ರದರ್ಶನದಲ್ಲಿ ಪಾಲ್ಗೊಂಡಿತು.
ಈ ಸಂದರ್ಭದಲ್ಲಿ ಕೃಷಿ ಸಚಿವ ಎನ್. ಚಲುವರಾಯ ಸ್ವಾಮಿ, ಕೇರಳ ಸರಕಾರದ ಕೃಷಿ ಸಚಿವ ಪಿ. ಪ್ರಸಾದ್ , ಶಾಸಕ ನರೇಂದ್ರ ಬಾಬು, ಕೇಂದ್ರ ಕೃಷಿ ಸಚಿವ ಸಚಿವ ಮಧು ವರ್ಮಾ, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಇಲಾಖೆಯ ಅಧಿಕಾರಿಗಳು ಉಡುಪಿ ಕಿನಾರ ಮೀನುಗಾರರ ಉತ್ಪಾದಕರ ಕಂಪನಿಯ ಮಳಿಗೆಯನ್ನು ವೀಕ್ಷಿಸಿದರು. ಈ ಸಂದರ್ಭದಲ್ಲಿ ಕಂಪನಿಯ ನಿರ್ದೇಶಕ ಸುದಿನ, ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಗಾಯತ್ರಿ ವಿಜಯ್ , ಡಿಇಒ ವಿದೀಕ್ಷಾ, ಎಲ್.ಆರ್.ಪಿ ಭೂಮಿಕಾ ಉಪಸ್ಥಿತರಿದ್ದರು. ಸುದಿನ ಅವರು ಕಂಪನಿಯ ಉತ್ಪನ್ನ, ಮೀನು ಕೃಷಿ ಬಗ್ಗೆ ಮಾಹಿತಿ ನೀಡುವುದರ ಜೊತೆಗೆ ಕಂಪನಿಯು ಮಹಿಳೆಯರಲ್ಲಿ ಸ್ವಾವಲಂಬಿ ಬದುಕಿಗೆ ಪ್ರೇರಣೆ ನೀಡಿರುವುದರ ಮಾಹಿತಿ ನೀಡಿದರು.
ಇಲ್ಲಿನ ತ್ರಿಪುರವಾಸಿನಿ ಅರಮನೆ ಮೈದಾನದಲ್ಲಿ ನಡೆದ ಸಿರಿಧಾನ್ಯ ಮತ್ತು ಸಾವಯವ ಅಂತಾರಾಷ್ಟಿçÃಯ ವಾಣಿಜ್ಯ ಮೇಳ-2024 ರ ಕಾರ್ಯಕ್ರಮದಲ್ಲಿ ಉಡುಪಿಕಿನಾರ ಮೀನುಗಾರರ ಉತ್ಪಾದಕ ಕಂಪನಿ ತನ್ನ ಕಂಪನಿಯಿಂದ ತಯಾರಿಸಿದ ವಿವಿಧ ಮೀನಿನ ಉತ್ಪನ್ನಗಳನ್ನು ರಾಜ್ಯದ ಕೃಷಿ ಸಚಿವ ಎನ್. ಚಲುವರಾಯ ಸ್ವಾಮಿ ವಿಕ್ಷೀಸಿದರು.
Leave a Reply