ಕೋಟ: ಪಂಚವರ್ಣ ಯುವಕ ಮಂಡಲ ಕೋಟ, ಪಂಚವರ್ಣ ಮಹಿಳಾ ಮಂಡಲ ಕೋಟ ಆಶ್ರಯದಲ್ಲಿ ರೋಟರಿ ಕ್ಲಬ್ ಕೋಟ ಸಾಲಿಗ್ರಾಮ,ರೈತಧ್ವನಿ ಸಂಘ ಕೋಟ,ಗೆಳೆಯರ ಬಳಗ ಕಾರ್ಕಡ,ಗೀತಾನಂದ ಫೌಂಡೇಶನ್ ಮಣೂರು,ವಿಪ್ರ ಮಹಿಳಾ ಬಳಗ ಸಾಲಿಗ್ರಾಮ ಇವರುಗಳ ಸಹಯೋಗದೊಂದಿಗೆ ರೈತರೆಡೆಗೆ ನಮ್ಮ ನಡಿಗೆ ಕಾರ್ಯಕ್ರಮದ 32ನೇ ಸಂಚಿಕೆಯಲ್ಲಿ ಸಾಧಕ ರೈತರಿಗೆ ಪಂಚವರ್ಣ ರೈತ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಕೋಡಿ ಕನ್ಯಾಣದಲ್ಲಿ ಇತ್ತಿಚಿಗೆ ಜರಗಿತು.
ಈ ಸಂದರ್ಭ ಕೋಡಿ ಕನ್ಯಾಣದ ಸಿಗಡಿ ಸೇರಿದಂತೆ ವಿವಿಧ ಬಗೆಯ ಕೃಷಿ ಕಾಯಕ ನಡೆಸುವ ಸದಾಶಿವ ಐತಾಳ ಇವರಿಗೆ ಸಾಧಕ ರೈತ ಪುರಸ್ಕಾರ ನೀಡಿ ಅವರ ಪತ್ನಿ ಸುಗುಣಾ ಐತಾಳರ ಜತೆ ಗೌರವಿಸಲಾಯಿತು. ಉಡುಪಿ ಎಪಿಎಂಸಿ ಮಾಜಿ ಉಪಾಧ್ಯಕ್ಷ ಕೋಡಿ ಕೃಷ್ಣ ಪೂಜಾರಿ ಮಾತನಾಡಿ, ಸದಾಶಿವ ಐತಾಳರು ಅಪರೂಪದ ಸಿಗಡಿ ಕೃಷಿ ಕೈಗೊಳ್ಳುವ ಮೂಲಕ ಈ ಭಾಗದಲ್ಲಿ ಯಶಸ್ವಿಯಾದವರು. ಕೃಷಿ ಜ್ಞಾನ ಅಪಾರ ವಾಗಿದ್ದು ಓರ್ವ ಕೃಷಿ ವಿಜ್ಞಾನಿಗೆ ಇರಬೇಕಾದ ಪಾಂಡಿತ್ಯ ಇವರಲ್ಲಿದೆ ಎಂದರು.
ಸದಾಶಿವ ಐತಾಳರು ಮಾತನಾಡಿ, ರೈತನಿಗೆ ತಾಳ್ಮೆ ಆವಿಷ್ಕಾರಿ ಮನೋಭಾವ, ಸವಾಲುಗಳನ್ನು ಸ್ವೀಕರಿಸುವ ಗುಣ ಅಗತ್ಯ. ಇವೆಲ್ಲವೂ ಇದ್ದರೆ ಹೊಸತನ ಅಳವಡಿಸಿ ಯಶಸ್ವಿಯಾಗಬಹುದು ಎಂದರು. ಕೋಟ ಪಂಚವರ್ಣ ಯುವಕ ಮಂಡಲ ಅಧ್ಯಕ್ಷ ಅಜಿತ್ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು.
ಕೋಡಿ ಗ್ರಾ.ಪಂ. ಅಧ್ಯಕ್ಷೆ ಗೀತಾ ಖಾರ್ವಿ, ರೋಟರಿ ಕ್ಲಬ್ ಕೋಟ ಸಾಲಿಗ್ರಾಮ ಕಾರ್ಯದರ್ಶಿ ಜಿ. ತಿಮ್ಮ ಪೂಜಾರಿ, ಕರ್ಣಾಟಕ ಬ್ಯಾಂಕ್ ನಿವೃತ್ತ ಉದ್ಯೋಗಿ ಕೋಡಿ ಚಂದ್ರಶೇಖರ ನಾವಡ, ಕೋಡಿ ಗ್ರಾ.ಪಂ. ಸದಸ್ಯ ಪ್ರಭಾಕರ ಮೆಂಡನ್, ಅಂಥೋನಿ ಡಿ’ಸೋಜಾ, ಹಂದಾಡಿ ಗ್ರಾ.ಪಂ. ಕಾರ್ಯದರ್ಶಿ ಪೂರ್ಣಿಮಾ ಅಧಿಕಾರಿ, ರೈತಧ್ವನಿ ಅಧ್ಯಕ್ಷ ಜಯರಾಮ್ ಶೆಟ್ಟಿ ಕಾರ್ಕಡ ಗೆಳೆಯರ ಬಳಗದ ಜಗದೀಶ್ ಆಚಾರ್ಯ,ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ,ಸ್ಥಾಪಾಕಾಧ್ಯಕ್ಷ ಸುರೇಶ್ ಗಾಣಿಗ ಉಪಸ್ಥಿತರಿದ್ದರು.
ಮಹಿಳಾ ಮಂಡಲದ ಸ್ಥಾಪಕಾಧ್ಯಕ್ಷೆ ಕಲಾವತಿ ಅಶೋಕ್ ಸ್ವಾಗತಿಸಿ, ಕಾರ್ಯಾಧ್ಯಕ್ಷ ರವೀಂದ್ರ ಕೋಟ ಪ್ರಾಸ್ತಾವಿಸಿ, ಸದಸ್ಯ ಕಾರ್ತಿಕ ಎನ್.ಗಾಣಿಗ ಸಮ್ಮಾನಿತರನ್ನು ಪರಿಚಯಿಸಿ,ಮಹಿಳಾ ಮಂಡಲದ ಸಂಚಾಲಕಿ ಸುಜಾತಾ ಎಂ ಬಾಯರಿ ನಿರೂಪಿಸಿದರು.ಮಹಿಳಾ ಮಂಡಲದ ಕಾರ್ಯದರ್ಶಿ ವಸಂತಿ ಹಂದಟ್ಟು ವಂದಿಸಿದರು.
ಕೋಟ ಪಂಚವರ್ಣದ ರೈತರೆಡೆಗೆ ನಮ್ಮ ನಡಿಗೆ 32ನೇ ಮಾಲಿಕೆಯಲ್ಲಿ ಕೋಡಿ ಕನ್ಯಾಣದ ಸಿಗಡಿ ಸೇರಿದಂತೆ ವಿವಿಧ ಬಗೆಯ ಕೃಷಿ ಕಾಯಕ ನಡೆಸುವ ಸದಾಶಿವ ಐತಾಳ ಇವರಿಗೆ ಸಾಧಕ ರೈತ ಪುರಸ್ಕಾರ ನೀಡಿ ಅವರ ಪತ್ನಿ ಸುಗುಣಾ ಐತಾಳರ ಜತೆ ಗೌರವಿಸಲಾಯಿತು. ಕೋಟ ಪಂಚವರ್ಣ ಯುವಕ ಮಂಡಲ ಅಧ್ಯಕ್ಷ ಅಜಿತ್ ಆಚಾರ್ಯ, ಕೋಡಿ ಗ್ರಾ.ಪಂ. ಅಧ್ಯಕ್ಷೆ ಗೀತಾ ಖಾರ್ವಿ, ರೋಟರಿ ಕ್ಲಬ್ ಕೋಟ ಸಾಲಿಗ್ರಾಮ ಕಾರ್ಯದರ್ಶಿ ಜಿ. ತಿಮ್ಮ ಪೂಜಾರಿ, ಕರ್ಣಾಟಕ ಬ್ಯಾಂಕ್ ನಿವೃತ್ತ ಉದ್ಯೋಗಿ ಕೋಡಿ ಚಂದ್ರಶೇಖರ ನಾವಡ, ಕೋಡಿ ಗ್ರಾ.ಪಂ. ಸದಸ್ಯ ಪ್ರಭಾಕರ ಮೆಂಡನ್, ಅಂಥೋನಿ ಡಿ’ಸೋಜಾ ಮತ್ತಿತರರು ಇದ್ದರು.
















Leave a Reply