
ಸಿದ್ದಾಪುರ*: ಉಡುಪಿ ಜಿಲ್ಲೆಯ ಹೊಸಂಗಡಿಯಿಂದ 6 ಕಿ.ಮೀ ದೂರದಲ್ಲಿರುವ , ಸಮುದ್ರ ಮಟ್ಟದಿಂದ 2000 ಅಡಿಗೂ ಮೆಲ್ಪಟ್ಟು ಎತ್ತರದಲ್ಲಿರುವ ಮೆಟ್ಕಲ್ ಗುಡ್ಡೆಯ ಶ್ರೀ ಮಹಾಗಣಪತಿ ದೇವಸ್ಥಾನದ ವರ್ಧಂತ್ಯುತ್ಸವವು ಫೆ. 4 ರಂದು ರವಿವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿರುವುದು.

ಬೆಳಿಗ್ಗೆ 10 ರಿಂದ 108 ಕಾಯಿ ಗಣಹೋಮ, ಶ್ರೀ ನಾಗ ದೇವರಿಗೆ ಕಳಶಾಭಿಷೇಕ, ಸತ್ಯನಾರಾಯಣ ಪೂಜೆ, ಪಂಚ ರುದ್ರ ಹೋಮ, ಚೌಡಿಗೆ ನವಕ ಪ್ರದಾನ, ಗಣಪತಿ ದೇವರಿಗೆ ಪ್ರದಾನ ಕಲಾಶಾಬಿಷೇಕ ಹಾಗೂ ಮಧ್ಯಾಹ್ನ 1ಗಂಟೆಗೆ ಮಹಾ ಪೂಜೆ, ಮಂಗಳಾರತಿ, ತೀರ್ಥ ಪ್ರಸಾದ ವಿತರಣೆ, ಬಳಿಕ “ಅನ್ನಸಂತರ್ಪಣೆ” ಕಾರ್ಯಕ್ರಮ ನಡೆಯಲಿರುವುದು. ಹಾಗೂ ಸಂಜೆ ಸ್ಥಳೀಯ ಭಜನಾ ಮಂಡಳಿ ಅವರಿಂದ ಕಾರ್ಯಕ್ರಮ ಜರುಗಲಿರುವುದೆಂದು ದೇವಳದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.














Leave a Reply