
ಉಡುಪಿಯ ನಿಕಟಪೂರ್ವ ಶಾಸಕರಾದ ಶ್ರೀ ಕೆ ರಘುಪತಿ ಭಟ್ ಅವರು ಅಯೋಧ್ಯೆಯ ಶ್ರೀರಾಮನ ತೊಟ್ಟಿಲು ಸೇವೆಗೆ ಕೊಡುಗೆಯಾಗಿ ನೀಡಿದ ಕಾಷ್ಠ ಶಿಲ್ಪದಲ್ಲಿ ನಿರ್ಮಿಸಲಾದ ತೊಟ್ಟಿಲು ಇಂದು ದಿನಾಂಕ 07-02-2024 ರಂದು ಸಂಜೆ ನಡೆದ ಉತ್ಸವದಲ್ಲಿ ಶ್ರೀಗಳ ಮೂಲಕ ಅರ್ಪಣೆಯಾಯಿತು. ನೂತನ ತೊಟ್ಟಿಲಿನಲ್ಲಿ ಶ್ರೀ ಬಾಲರಾಮ ದೇವರಿಗೆ ತೊಟ್ಟಿಲು ಸೇವೆ ನೆರವೇರಿಸಿ ಶ್ರೀ ರಾಮ ದೇವರ ಮೂರ್ತಿಯನ್ನು ತೊಟ್ಟಿಲಲ್ಲಿ ತೂಗಿ ಅಷ್ಠಾವದಾನ ಸೇವೆ ಸಲ್ಲಿಸಲಾಯಿತು.
ಶ್ರೀ ಪೇಜಾವರ ಶ್ರೀಗಳ ಮಾರ್ಗದರ್ಶನದಲ್ಲಿ ದೈವಿಕ ವಿಧಿ ವಿಧಾನಗಳು ನೆರವೇರಿತು. ಶ್ರೀ ಕಾಶೀ ಮಠಾಧೀಶರ ಕೊಡುಗೆಯಾಗಿ ಅಯೋಧ್ಯಾ ಬಾಲರಾಮನಿಗೆ ರಜತಪಲ್ಲಕ್ಕಿ ಅರ್ಪಿಸಲಾಯಿತು. ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಅವರು ಕಲಶ ಸೇವೆ ನೀಡಿದರು. ಮೂರು ಲಕ್ಷಕ್ಕೂ ಅಧಿಕ ಭಕ್ತರು ಬಾಲರಾಮನ ದರ್ಶನ ಪಡೆದು ಈ ವೈಭವಕ್ಕೆ ಸಾಕ್ಷಿಯಾದರು.













Leave a Reply