Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕುಂದಾಪುರ ಸರಕಾರಿ ಆಸ್ಪತ್ರೆಯ  ಆಡಳಿತ ವೈದ್ಯಧಿಕಾರಿ  ಸಹೋದ್ಯೋಗಿಗೆ ಲೈಂಗಿಕ ಕಿರುಕುಳ ಆರೋಪ-ದೂರು ದಾಖಲು

ಬೈಂದೂರು : ವೈದ್ಯೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ  ಕುಂದಾಪುರ  ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳಾದ ಡಾ.ರಾಬರ್ಟ್ ರೆಬೆಲ್ಲೋ ನಾಪತ್ತೆಯಾಗಿದ್ದಾರೆ ಸಂತ್ರಸ್ಥ ವೈದ್ಯೆ ನಿನ್ನೆ ಡಾ.ರಾಬರ್ಟ್ ರೆಬೆಲ್ಲೋ ವಿರುದ್ಧ ದೂರು ನೀಡುತ್ತಿದ್ದಂತೆ ಡಾ.ರಾಬರ್ಟ್ ರೆಬೆಲ್ಲೋ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ
ಸಂತ್ರಸ್ಥ ವೈದ್ಯೆ ನೀಡಿದ ದೂರಿನಂತೆ ನಾನು ಕಳೆದ ಹಲವು ತಿಂಗಳಿನಿಂದ ಎನ್ ಆರ್ ಎಚ್ ಎಂ ಅಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಕರ್ತವ್ಯದ ಆರಂಭದ ದಿನದಿಂದಲೂ ಆಡಳಿತ ವೈದ್ಯಾಧಿಕಾರಿ ರಾಬರ್ಟ್ ರೆಬೆಲ್ಲೋರವರಿಂದ ಮಾನಸಿಕ ಮತ್ತು ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದೇನೆ ಎಂದು ತಿಳಿಸಿದ್ದಾರೆ.

ನೀನು ಜೀನ್ಸ್ ಪ್ಯಾಂಟ್ ಹಾಗೂ ಟಿ ಶರ್ಟ್ ಉಡುಪುಗಳನ್ನು ಧರಿಸು ಬೇಬಿ ಡಾರ್ಲಿಂಗ್ ನಿನ್ನ ಸುಂದರವಾದ ಚಿತ್ರಗಳನ್ನು ಕಳಿಸು ಎಂಬಿತ್ಯಾದಿ ವಾಟ್ಸ್ ಅಪ್ ಮೆಸೇಜ್ ಮತ್ತು ಡಿನ್ನರ್ ಪಾರ್ಟಿಗೆ ಬಾ ಎಂದು ಪೀಡಿಸಿದ್ದಾರೆಂದು ದೂರಿನಲ್ಲಿ ತಿಳಿಸಲಾಗಿದೆ ಇದಲ್ಲದೇ ಆಸ್ಪತ್ರೆ ಕರ್ತವ್ಯ ಮುಗಿದ ನಂತರವೂ ಕೂಡ ರಾತ್ರಿ 11.00- 12.00 ಗಂಟೆಯ ಅವಧಿಯಲ್ಲಿ ಮೋಬೈಲ್ ಮೆಸ್ಸೇಜ್ ಕರೆ ಮಾಡುವುದು ನಿನ್ನ ಗಂಡ ನಿನಗೆ ಸುಖ ಕೊಡುತ್ತಾನೆಯೇ ಎಂದು ವಿಚಾರಿಸಿ ನನ್ನ ವೈಯುಕ್ತಿಕ ಬದುಕಿನಲ್ಲೂ ಕೂಡ ಹಸ್ತಕ್ಷೇಪ ಮಾಡಿರುತ್ತಾರೆ.

ನನ್ನ ಕುಟುಂಬ ಮರ್ಯಾದೆ ಹಾಗೂ ನನ್ನ ಕಾಂಟ್ರಾಕ್ಟ್ ಉದ್ಯೋಗವನ್ನು ಕಾಯ್ದುಕೊಳ್ಳುವ ಸಲುವಾಗಿ ವಿಧಿಯಿಲ್ಲದೇ ಅಸಹಾಯಕಳಾಗಿ ಅವರ ಕೋರಿಕೆಗಳನ್ನು ತಿರಸ್ಕರಿಸಿ ಉತ್ತರಿಸುತ್ತಾ ಬಂದಿದ್ದೇನೆ.

ಡಾ.ರಾಬರ್ಟ್ ರೆಬೆಲ್ಲೋ ರವರು ನನಗೆ ಮಾನಸಿಕ ಹಾಗೂ ವೈಯುಕ್ತಿಕ ಕಿರುಕುಳ ಹಾಗೂ ನನ್ನ ಚಾರಿತ್ರ್ಯ ವಧೆ ಮಾಡುವ ಪ್ರಯತ್ನ ಮಾಡಿರುವುದು ನನ್ನ ಜೀವನಕ್ಕೆ ಅತ್ಯಂತ ತೊಂದರೆಯಾಗಿರುವುದರಿಂದ ನನಗೆ ಕಾನೂನು ಪ್ರಕಾರ ನ್ಯಾಯ ಕೊಡಿಸಬೇಕಾಗಿ ಸಂತ್ರಸ್ಥ ವೈದ್ಯೆ ದೂರು ನೀಡಿದ್ದಾರೆ.

Leave a Reply

Your email address will not be published. Required fields are marked *