
ಕೋಟ; ಇಲ್ಲಿನ ಕೋಟದ ಮಣೂರು ಪಡುಕರೆ ಸರಕಾರಿ ಸಂಯುಕ್ತ ಫ್ರೌಢ ಶಾಲೆಯ ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳು ಶುಕ್ರವಾರ ನಲಿ ನಲಿದಾಡುತ್ತಾ ಶಾಲೆಯೊಳೆಗೆ ಪ್ರವೇಶಿಸಿದರು. ಮಕ್ಕಳಿಗೆ ಸಿಹಿ ಹಂಚಿ ನಗುಮೊಗದ ಸ್ವಾಗತಕೋರಿದ ಶಾಲಾ ಪ್ರೋತ್ಸಾಹ ಶಕ್ತಿ ಆನಂದ್.ಸಿ.ಕುAದರ್ ಮಕ್ಕಳಿಗೆ ಸಿಹಿ ಹಂಚಿ ಶುಭಹಾರೈಸಿದರು.
ಶಾಲೆಯ ಮುಖ್ಯದ್ವಾರದಲ್ಲಿ ಬಲೂನ್ಗಳನ್ನು ಶೃಂಗರಿಸಿದ್ದು ಬಾಲ ಪುಟಾಣಿ ಕುಣಿದಾಡುತ್ತಾ ಒಳಗಡೆ ಆಗಮಿಸುತ್ತಿದ್ದಂತೆ ಪುಟಾಣಿಗಳ ಕಲರವ ಕೇಳಿಬಂತು.ಮಕ್ಕಳಿಗೆ ಶಿಕ್ಷರಿಂದ ಪುಷ್ಭ ಸಿಂಚನಗರೆಯಲಾಯಿತು. ಎರಡು ಶಾಲಾ ಮುಖ್ಯ ಶಿಕ್ಷಕರಾದ ಮಂಜುನಾಥ್ ಕೆ.ಎಸ್,ಫ್ರೌಢ ವಿಭಾಗದ ಮುಖ್ಯ ಶಿಕ್ಷಕ ನಿರಂಜನ್ ನಾಯಕ್,ಶಾಲಾ ಎಸ್ಡಿಎಂಸಿ ಅಧ್ಯಕ್ಷ ಜಯರಾಮ್ ಶೆಟ್ಟಿ, ನಾಗರಾಜ್ ,ಗೀತಾನಂದ ಟ್ರಸ್ಟ್ನ ವೈಷ್ಣವಿ ರಕ್ಷಿತ್ ಕುಂದರ್,ಇದರ ಸಮಾಜಕಾರ್ಯವಿಭಾಗದ ರವಿಕಿರಣ್ ಕೋಟ,ಶಾಲಾ ಸಹ ಶಿಕ್ಷಕರಾದ ರಾಮದಾಸ ನಾಯಕ್,ಶ್ರೀಧರ ಶಾಸ್ತಿç ,ನಾಗರತ್ನ ,ವಿದ್ಯಾರ್ಥಿಗಳ ಪೋಷಕರು ಮತ್ತಿತರರು ಇದ್ದರು.
ಸಮವಸ್ತç, ಬುಕ್ ವಿತರಣೆ
ಸರಕಾರಿದಿಂದ ನೀಡಿದ ಟೆಸ್ಟ್ ಬುಕ್ ಹಾಗೂ ಸಮವಸ್ತçವನ್ನು ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್ ಮಕ್ಕಳಿಗೆ ವಿತರಿಸಿದರು.
ಪೋಷಕರಿಗೆಹಿತ ನುಡಿ
ಶಾಲಾ ಮಹಾಪೋಷಕ ಆನಂದ್ ಸಿ ಕುಂದರ್ ವಿದ್ಯಾರ್ಥಿಗಳ ಪೋಷಕರಿಗೆ ಹಿತನುಡಿಗಳನ್ನಾಡಿ ಶಾಲಾ ಜೀವನದಲ್ಲಿ ವಿದ್ಯಾರ್ಥಿಗಳ ಮೇಲೆಹೆಚ್ಚಿನ ಮುತುವರ್ಜಿ ವಹಿಸಿ ಶಾಲೆಗೆ ತೆರಳಿದ್ದಾರೆ ಎಂಬ ನಿರ್ಲಕ್ಷ÷್ಯ ಮಾಡದಿರಿ ಮಕ್ಕಳಿಗೆ ಅತಿಯಾಗಿ ಮೊಬೈಲ್ ನೀಡಬೇಡಿ ಅವರ ಚಲನವಲನ ವೀಕ್ಷಿಸಿ, ಅವರ ಬಗ್ಗೆ ಅತಿಯಾದ ವಾತ್ಸಲ್ಯದ ಜತೆಗೆ ಭೀತಿಯುಕ್ತ ವಾತಾವರಣ ನಿರ್ಮಿಸಿಕೊಳ್ಳಿ,ಸಂಸ್ಕಾರ ,ಸಂಪ್ರದಾಯಯುಕ್ತ ಜೀವದ ತಳಹದಿ ನೀಡಿ ಎಂದು ಪೋಷಕರಿಗೆ ಕಿವಿಮಾತು ಹೇಳಿದರು.ಶಾಲಾ ಎಸ್ ಡಿ ಎಂಸಿ ಸದಸ್ಯರು ಉಪಸ್ಥಿತರಿದ್ದರು.
ಕೋಟದ ಮಣೂರು ಪಡುಕರೆ ಸರಕಾರಿ ಸಂಯುಕ್ತ ಫ್ರೌಢ ಶಾಲೆಯ ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳು ಶುಕ್ರವಾರ ನಲಿ ನಲಿದಾಡುತ್ತಾ ಶಾಲೆಯೊಳೆಗೆ ಪ್ರವೇಶಿಸಿದರು. ಶಾಲಾ ಮುಖ್ಯ ಶಿಕ್ಷಕರಾದ ಮಂಜುನಾಥ್ ಕೆ.ಎಸ್,ಫ್ರೌಢ ವಿಭಾಗದ ಮುಖ್ಯ ಶಿಕ್ಷಕ ನಿರಂಜನ್ ನಾಯಕ್,ಶಾಲಾ ಎಸ್ ಡಿ ಎಂಸಿ ಅಧ್ಯಕ್ಷ ಜಯರಾಮ್ ಶೆಟ್ಟಿ, ನಾಗರಾಜ್ ,ಗೀತಾನಂದ ಟ್ರಸ್ಟ್ನ ವೈಷ್ಣವಿ ರಕ್ಷಿತ್ ಕುಂದರ್ ಮತ್ತಿತರರು ಇದ್ದರು.
ಕೋಟ.ಮೇ.31 ಪಡುಕರೆ ಶಾಲೆ
Leave a Reply