Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ನಾರಾಯಣಗುರು ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್, ಉಡುಪಿ : ವಾರ್ಷಿಕ ಮಹಾಸಭೆ

ನಾರಾಯಣಗುರು ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್, ಉಡುಪಿ : ವಾರ್ಷಿಕ ಮಹಾಸಭೆ

ಉಡುಪಿ : ನಾರಾಯಣಗುರು ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಲಿ, ಉಡುಪಿ, ಇದರ 2023 – 2024 ನೇ ಸಾಲಿನ 22 ನೇ ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆಯು ಆಗಸ್ಟ್ 3ನೇ ಶನಿವಾರ ಬಿಲ್ಲವರ ಸೇವಾ ಸಂಘ (ರಿ), ಬನ್ನಂಜೆ ಉಡುಪಿ ಇದರ ಶಿವಗಿರಿ ಸಭಾಂಗಣದಲ್ಲಿ ಅಧ್ಯಕ್ಷರಾದ ಹರಿಶ್ಚಂದ್ರ ಅಮೀನ್ ಇವರ ಅಧ್ಯಕ್ಷತೆಯಲ್ಲಿ ಜರುಗಿತು.

ವಾರ್ಷಿಕ ಸಾಮಾನ್ಯ ಸಭೆಯನ್ನು ಬ್ಯಾಂಕಿನ ಮಾರ್ಗದರ್ಶಕರಾದ ರಾಮಚಂದ್ರ ಕಿದಿಯೂರು ಮತ್ತು ರಾಷ್ಟ್ರ ಪ್ರಶಸ್ತಿ ವಿಜೇತ ನಿವೃತ್ತ ಶಿಕ್ಷಕ ಮಲ್ಪೆ ರಾಘವೇಂದ್ರ ಜಂಟಿಯಾಗಿ ಉದ್ಘಾಟಿಸಿ ಶುಭ ಹಾರೈಸಿದರು. 

ಮಹಾಸಭೆಯ ಅಧ್ಯಕ್ಷತೆಯನ್ನು ವಹಿಸಿದ ಹರಿಶ್ಚಂದ್ರ ಅಮೀನ್ ಅವರು ಸರ್ವಸದಸ್ಯರುಗಳನ್ನು ಸ್ವಾಗತಿಸಿ ನಮ್ಮ ಬ್ಯಾಂಕ್ ಭಾರತೀಯ ರಿಸರ್ವ್ ಬ್ಯಾಂಕಿನ ಮಾನ್ಯತೆಯೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದು, ನಮ್ಮ ಬ್ಯಾಂಕ್ ಅಧುನಿಕ ಸೌಲಭ್ಯಗಳಾದ ಕೋರ್ ಬ್ಯಾಂಕಿಂಗ್ ,ಆರ್ ಟಿ ಜಿ ಎಸ್ / ನೆಪ್ಟ್ , ಸಿ ಟಿ ಎಸ್ ಚೆಕ್ ಕ್ಲಿಯರಿಂಗ್, ಸೇಫ್ ಲಾಕರ್ ಸೌಲಭ್ಯಗಳನ್ನು ಒಳಗೊಂಡಿದೆ . ಗ್ರಾಹಕರ ಐದು ಲಕ್ಷದವರೆಗಿನ ಠೇವಣಿಗಳಿಗೆ ಡಿ ಐ ಸಿ ಜಿ ಸಿ. ವಿಮಾ ಸೌಲಭ್ಯವನ್ನು ಹೊಂದಿದೆ . ಸ್ವಸಹಾಯ ಗುಂಪಿನ ಸದಸ್ಯರಿಗೆ ಅತ್ಯಂತ ಕಡಿಮೆ ಬಡ್ಡಿಯ ಸಾಲವನ್ನು ನೀಡುತ್ತಿದ್ದು ಚಿನ್ನಾಭರಣ ಈಡಿನ ಸಾಲ, ಗೃಹ ನಿರ್ಮಾಣ ಸಾಲ, ಅಡಮಾನ ಸಾಲ , ಭದ್ರತಾ ಸಾಲ , ವೈಯಕ್ತಿಕ ಸಾಲ , ವಾಹನ ಸಾಲ ವೇತನಾಧಾರಿತ ಸಾಲ ಹಾಗೂ ವ್ಯಾಪಾರ ಅಭಿವೃದ್ಧಿ ಸಾಲಗಳನ್ನು  ವಾಣಿಜ್ಯ ಬ್ಯಾಂಕಿನ ಬಡ್ಡಿ ದರಕ್ಕೆ ಸ್ಪರ್ಧಾತ್ಮಕವಾಗಿ ನೀಡಲಾಗುತ್ತದೆ .ಗ್ರಾಹಕರ ಠೇವಣಿಗೆ ಅತ್ಯಧಿಕ ಬಡ್ಡಿಯನ್ನು ನೀಡುತ್ತಿದ್ದು ಹಿರಿಯ ನಾಗರಿಕರಿಗೆ 0.5% ಹೆಚ್ಚುವರಿಯಾಗಿ ನೀಡಲಾಗುತ್ತಿದೆ. ಗ್ರಾಹಕರ ಹಾಗೂ ಆಡಳಿತ ಮಂಡಳಿಯ ಸಹಕಾರ ಸಿಬ್ಬಂದಿಗಳ ನಗುಮೊಗದ ಸೇವೆ ಸದಸ್ಯರ ಪ್ರೋತ್ಸಾಹದಿಂದ ನಮ್ಮ ಬ್ಯಾಂಕ್ ಉತ್ತಮ ಲಾಭವನ್ನು ಕಾಣುವಂತಾಗಿದೆ ಎಂದರು. 

ನಿರ್ದೇಶಕರಾದ ಶಿವಾಜಿ ಸುವರ್ಣ ಪ್ರಾಸ್ತಾವಿಕದ ಮೂಲಕ ವೇದಿಕೆಗೆ ಬರಮಾಡಿಕೊಂಡರು. ನಿರ್ದೇಶಕರಾದ ಕೆ. ಜಯಕುಮಾರ್‌, ಪ್ರಭಾಕರ ಬಂಗೇರ ಬಿ.ಬಿ. ಪೂಜಾರಿ,  ಜಯಕುಮಾರ್ ಪರ್ಕಳ, ಆನಂದ ಜತ್ತನ್ನ, ಶೇಕರ ಬಿ ಪೂಜಾರಿ,  ರಮೇಶ್ ಕೆ ಕೋಟ್ಯಾನ್ ,ಅಶೋಕ್ ಕುಮಾರ್ ,ಸತೀಶ್ ಅರಳೀ ಕೊಪ್ಪ ,ಅರಣ್ ಜತ್ತನ್ನ ,  ವೃತ್ತಿಪರ ನಿರ್ದೇಶಕರಾದ ಬಾಸ್ಕರ ಪೂಜಾರಿ ಹಾಗೂ ಕೃಷ್ಣ ಬಿಲ್ಲವ ಸಭೆಯಲ್ಲಿ ಉಪಸ್ಥಿತರಿದ್ದರು.

     ಸದಸ್ಯರಾದ ಗುರದತ್ ಅಮೀನ್ , ನಾರಾಯಣ ಬಿ ಎಸ್, ರಮೇಶ್  ಬಂಗೇರ, ಶೇಖರ್ ಕೋಟ್ಯಾನ್ ಮತ್ತು ದಿವಾಕರ್ ಸನಿಲ್ ಬ್ಯಾಂಕಿನ ಅಭಿವೃದ್ಧಿಯ ಬಗ್ಗೆ ಸಲಹೆ ಸೂಚನೆಗಳನ್ನು ನೀಡಿ ಬ್ಯಾಂಕನ್ನು ಲಾಭದತ್ತ ಮುನ್ನಡೆಸಿದ ಆಡಳಿತ ಮಂಡಳಿ ಹಾಗೂ ಸಿಬ್ಬಂದಿಗಳನ್ನು ಅಭಿನಂದಿಸಿದರು.

ಬ್ಯಾಂಕಿನ ನಿರ್ದೇಶಕರಾದ ಶಕುಂತಲ ಶ್ರೀನಿವಾಸ್ ಪ್ರಾರ್ಥಿಸಿ, ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರೋಶನ್ ಫೌಸ್ಟಿನ್ ಆಲ್ವರವರು ಬ್ಯಾಂಕಿನ 21ನೇ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ವರದಿಯನ್ನು ವಾಚಿಸಿದರು. ಉಪಾಧ್ಯಕ್ಷರಾದ ವಿಜಯ ಗೋಪಾಲ ಬಂಗೇರ ಅವರು ಧನ್ಯವಾದವಿತ್ತರು.

Leave a Reply

Your email address will not be published. Required fields are marked *