Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಬಿಜೆಪಿ ಮುಖಂಡ ಅನಂತಮೂರ್ತಿ ಹೆಗಡೆ ತಮ್ಮ ಪ್ರಚಾರದ  ತೆವಲಿಗೆ ಬಾಯಿಗೆ ಬಂದಂತೆ ಮುಖ್ಯಮಂತ್ರಿ ಅವರ ವಿರುದ್ಧ ಮಾತನಾಡುತ್ತಿದ್ದಾರೆ -ಭಟ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ  ವೆಂಕಟೇಶ್ ನಾಯ್ಕ

ಭಟ್ಕಳ-ಕೇರಳದ ವಯನಾಡ್ ನಲ್ಲಿ ಆದ ದುರಂತಕ್ಕೆ  ಕರ್ನಾಟಕ ಮುಖ್ಯ ಮಂತ್ರಿ  ಸಿದ್ಧರಾಮಯ್ಯ ನವರರು ಅಲ್ಲಿ  100 ಮನೆಗಳನ್ನು ಕಟ್ಟಿಸಿ ಕೊಡ್ತೇನೆ ಅಂತ ಮಾನವೀಯತೆ ನೆಲೆಯಲ್ಲಿ ಹೇಳಿದ್ದಾರೆ. ಕೇರಳ ನಮ್ಮ ಭಾರತ ದೇಶದಲ್ಲೇ ಇದೆ. ಈ ವಿಷಯಕ್ಕೆ ಸಂಬಂಧಿಸಿದಂತೆ
ಸಿದ್ದರಾಮಯ್ಯ ನವರೇ?

ನೀವು ಕರ್ನಾಟಕಕ್ಕೆ ಮುಖ್ಯ ಮಂತ್ರಿಯೋ?  ಅಥವಾ ಕೇರಳಕ್ಕೆ ಮುಖ್ಯ ಮಂತ್ರಿಯೋ? ಎಂದು ಬಿಜೆಪಿ ಮುಖಂಡ ಅನಂತಮೂರ್ತಿ ಹೆಗಡೆ ತಮ್ಮ ಪ್ರಚಾರದ ತೆವಲಿಗೆ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಅವರು ತಮ್ಮ ಪ್ರಚಾರದ ತೆವಲಿಗೆ ಈ ರೀತಿ ಮಾಡುತ್ತಿದ್ದಾರೆ ಎಂದು ಭಟ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ್ ನಾಯ್ಕವವರು ಕನ್ನಡ ಟುಡೇ ನ್ಯೂಸ್ ಗೆ ಮಾಹಿತಿ ನೀಡಿದ್ದಾರೆ.

ಅನಂತಮೂರ್ತಿ ಹೆಗಡೆ ಮೊದಲು ದೇಶದ ಪ್ರಧಾನಿ ನರೇಂದ್ರ ಮೋದಿಯವರ ಅಘಾನಿಸ್ತಾನ ಕ್ಕೆ ಯಾಕೆ  ಸಹಾಯ ಮಾಡಿದ್ದಾರೆ  ಎಂದು ಜನತೆಗೆ ಸತ್ಯ ತಿಳಿಸಲಿ ಎಂದು ಹೇಳಿದರು.ಅನಂತ್ ಮೂರ್ತಿ ಹೆಗ್ಗಡೆ ಗೆ ಮಾನವಿಯತೆ ಇಲ್ಲ.ಚುನಾವಣೆ ಹತ್ತಿರ ಬಂದಾಗ ಈ ವ್ಯಕ್ತಿ  ತನ್ನ ಪ್ರಚಾರದ ತೇವಲಿ ಗೆ ಬಾಯಿಗೆ ಬಂದ ಹಾಗೆ ಮಾತನಾಡುತ್ತಾರೆ ಎಂದು ತಿಳಿಸಿದರು.ಈಗ ಜಿಲ್ಲಾ ಪಂಚಾಯತ ಮತ್ತು ತಾಲೂಕ ಪಂಚಾಯತ್ ಚುನಾವಣೆ  ಹತ್ತಿರ ಇರುವುದು ಗಮನಿಸಿ ಈ ವ್ಯಕ್ತಿ  ತನ್ನ ಪ್ರಚಾರದ ತೇವಲಿ ಗೆ ಮಾಧ್ಯಮದ ಮುಂದೆ ಬಂದು ಈ  ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದು ತಿಳಿಸಿದರು.

ಉತ್ತರಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ನಡೆದ ಗುಡ್ಡ ಕುಸಿದು ದುರ್ಘಟನೆ ನಡೆದ ಸ್ಥಳಕ್ಕೆ ಮಾನ್ಯ ಮುಖ್ಯ ಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ  ಅವರು ಈಗಾಗಲೇ ಭೇಟಿ ನೀಡಿ ಘಟನೆ ಬಗ್ಗೆ ಮಾಹಿತಿ ಪಡೆದು ಕಾರ್ಯಚರಣೆಯನ್ನು ಪರಿಶೀಲಿಸಿ,ಘಟನೆ ನಡೆದ ಸಂಧರ್ಭದಲ್ಲಿ ಸಂಪೂರ್ಣ ಮಾಹಿತಿಯನ್ನು  ಮಾನ್ಯ ಮುಖ್ಯಮಂತ್ರಿಗಳು ಪಡೆದು ತಕ್ಷಣವೇ ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರವನ್ನು ಘೋಷಣೆ ಮಾಡಿರುತ್ತಾರೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *