Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕರಂಬಳ್ಳಿ ವಲಯ ಬ್ರಾಹ್ಮಣ ಸಮಿತಿ : ಆಟಿಯಲ್ಲಿ ಒಂದು ದಿನ ಕಾರ್ಯಕ್ರಮ

ಉಡುಪಿ :ಕರಂಬಳ್ಳಿ ವಲಯ ಬ್ರಾಹ್ಮಣ ಸಮಿತಿಯಿಂದ “ಆಟಿಯಲ್ಲಿ ಒಂದು ದಿನ ಕಾರ್ಯಕ್ರಮ ” ಅದ್ದೂರಿಯಾಗಿ ನಡೆಯಿತು .

ಬೆಳಿಗ್ಗೆ  ಕರಂಬಳ್ಳಿ ದೇವಸ್ಥಾನದ ಮುಂಭಾಗದಲ್ಲಿ ಗಿಡ ನೆಟ್ಟು ವನಮಹೋತ್ಸವ ಆಚರಿಸಲಾಯ್ತು . ನಂತರ ಉಡುಪಿ ಪುತ್ತಿಗೆ  ಮಠದ ದಿವಾನ ಶ್ರೀ ನಾಗರಾಜ ಆಚಾರ್ಯ ಅವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು .ಅರ್ಚಕ ಶ್ರೀ  ದಿವಾಕರ ಐತಾಳ ಅವರು ಶುಭಾಶಂಸನೆ ಗೈದರು . ಕರಂಬಳ್ಳಿ ವಲಯದ ಅಧ್ಯಕ್ಷ ಕೀಳಂಜೆ ಶ್ರೀಕೃಷ್ಣರಾಜ್ ಭಟ್ ಅವರು  ಮುಖ್ಯ ಅತಿಥಿ ಗಳನ್ನು ಸ್ವಾಗತಿಸಿ ಪ್ರಸ್ತಾವನೆಗೈದರು.

ನಂತರ ನಡೆದ ಸಮಾರೋಪ ಸಮಾರಂಭದಲ್ಲಿ  ಅಧ್ಯಕ್ಷತೆ  ವಹಿಸಿ  ಮಾತನಾಡಿದ ಉಡುಪಿಯ  ನಿಕಟ ಪೂರ್ವ ಶಾಸಕ ಶ್ರೀ ರಘುಪತಿ  ಭಟ್  ಅವರು “ಕರಂಬಳ್ಳಿ ಬ್ರಾಹ್ಮಣ  ಸಮಿತಿಯು  “ಸದಾ ಚಟುವಟಿಕೆಯಿಂದ  ಕೂಡಿದ್ದು, ಪ್ರತಿ  ವರುಷವು ಹೊಸ  ಹೊಸ  ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದ್ದು ಇದು ಸಂಘಟನೆಗೆ ಪೂರಕ  ಎಂದು ಹೆಮ್ಮೆ  ವ್ಯಕ್ತಪಡಿಸಿದರು .

ಇದಕ್ಕೂ ಮೊದಲು  ಶ್ರೀ ಲಕ್ಷ್ಮೀನಾರಾಯಣ  ಆಚಾರ್ ಇವರ ತಂಡವು , ಅವರ  ನೇತೃತ್ವದಲ್ಲಿ ಸಾಂಸ್ಕೃತಿಕ  ಕಾರ್ಯಕ್ರಮಗಳೊಂದಿಗೆ , ವಿವಿಧ ಸ್ಪರ್ಧೆಗಳನ್ನು ನಡೆಸಿದರು .

ಹಿರಿಯರಾದ ರಂಗಪ್ಪಯ್ಯ ಹೊಳ್ಳ ಅವರು ಆಟಿ ತಿಂಗಳಿನ ವಿಶೇಷತೆಯನ್ನು ವಿವರಿಸಿದರು .ಯುವ ಬ್ರಾಹ್ಮಣ ದ ಅಧ್ಯಕ್ಷ ಚಂದ್ರಕಾಂತ್ ಕೆ ಎನ್ , ರಾಮ್  ಭಟ್ , ವೆಂಕಟೇಶ್ , ಕೆವಿಬಿ ಸಮಿತಿಯ ಉಪಾಧ್ಯಕ್ಷ ರಂಗನಾಥ್  ಸಾಮಗ ,  ಶ್ರೀಪತಿ  ಭಟ್ , ಸುಧಾ  ಹರಿದಾಸ್  ಭಟ್ . ಕವಿತಾ ಆಚಾರ್ಯ , ವಸುಧಾ  ಭಟ್ , ರಾಧಿಕಾ ಚಂದ್ರಕಾಂತ್ ಸಹಕರಿಸಿದರು .

ರಾಜಶೇಖರ್  ಭಟ್ ಮತ್ತು ವಾಸುದೇವ ಭಟ್ ನಿರೂಪಿಸಿ ನಾಗರಾಜ್ ಭಟ್  ಧನ್ಯವಾದವಿತ್ತರು .

Leave a Reply

Your email address will not be published. Required fields are marked *