Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಆಯುರ್ವೇದ ಔಷಧಿಯಲ್ಲ ಜೀವನ ಪದ್ಧತಿ – ವಿಜಯ್ ಕೊಡವೂರು

ಕೊಡವೂರು ವಾರ್ಡ್ ಅಭಿವೃದ್ಧಿ ಸಮಿತಿ, ಪುಣ್ಯಕೋಟಿ ಗೋ ಸೇವಾ ಟ್ರಸ್ಟ್ (ರಿ.) ಬೆಳ್ಮಾರು ಬ್ರಹ್ಮಾವರ.
ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ (ರಿ.) ಮಂಗಳೂರು ಬ್ರಾಹ್ಮಣ ಮಹಾಸಭಾ ಕೊಡವೂರು ಇವರ ಜಂಟಿ ಆಶ್ರಯದಲ್ಲಿ ಆಯುರ್ವೇದ ಪಂಚಗವ್ಯ ಚಿಕಿತ್ಸಾ  ಶಿಬಿರವು ದಿನಾಂಕ 12.7.2024ರಂದು ವಿಪ್ರ ಶ್ರೀ ಸಭಾಭವನದಲ್ಲಿ ನಡೆಯಿತು.

ಕಾರ್ಯಕ್ರಮದ ಸಂಯೋಜಕರಾದ ಶ್ರೀ ಕೆ ವಿಜಯ್ ಕೊಡವೂರು ಮಾತನಾಡಿ ಕೆಮಿಕಲ್ ನಿಂದ ತುಂಬಿರುವಂತಹ ಆರೋಗ್ಯವನ್ನು ದೂರ ಮಾಡಬೇಕು ನಮ್ಮ ಮುಂದಿನ ಪೀಳಿಗೆಯನ್ನು ಸಾವಯವ ಗ್ರಾಮ ಆರೋಗ್ಯವಂತ ಜನಾಂಗ ಮಾಡುವ ಉದ್ದೇಶ ನಮ್ಮದಾಗಿದ್ದುಕೊಂಡು ಈ ನಿಮಿತ್ತ ಸಾವಯವ ಕೃಷಿಗೆ ಮೊದಲ ಆದ್ಯತೆ ನೀಡಿ ಗೋವಿನ ಉತ್ಪನ್ನಗಳ ಮಾರಾಟ ಮತ್ತು ಪ್ರದರ್ಶನದ ಮೂಲಕ ಸಾವಯವ ಗ್ರಾಮ ಮಾಡುವ ಉದ್ದೇಶ ನಮ್ಮದು. ಕೊಡವೂರು ವಾರ್ಡ್ ಅಭಿವೃದ್ಧಿ ಸಮಿತಿ ಮತ್ತು  ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಬೃಹತ್ ಆಯುರ್ವೇದ ಚಿಕಿತ್ಸಾ ಶಿಬಿರ  ಹಮ್ಮಿಕೊಳ್ಳಲಾಗಿದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.

ಈ ಸಂದರ್ಭದಲ್ಲಿ ಅಲ್ಸರ್ ಫಾರ್ ಕ್ಯಾನ್ಸರ್ ಡಾಕ್ಟರ್ ರಮೇಶ್ ಡಿ.ಪಿ ವಿಶ್ವನಾಥ್ ಎಸ್ ಪಿ ಮುಖ್ಯ ಕಾರ್ಯನಿರ್ವಾಣ ಅಧಿಕಾರಿ ವಿಜಯ ಗ್ರಾಮೀಣ ಅಭಿವೃದ್ಧಿ  ಮಂಗಳೂರು. ಮಂಜುನಾಥ್ ಭಟ್ ಪುಣ್ಯಕೋಟಿ ಗೋ ಸೇವಾ ಟ್ರಸ್ಟ್ ಇದರ ಆಡಳಿತ ಮಂಡಳಿ ಸದಸ್ಯರು. ಅಶೋಕ್ ಶೆಟ್ಟಿಗಾರ್ ಅಧ್ಯಕ್ಷರು ವಾರ್ಡ್ ಅಭಿವೃದ್ಧಿ ಸಮಿತಿ, ಸಂದೇಶ ಕೊಡವೂರು ಅಧ್ಯಕ್ಷರು ಗೋ ರಕ್ಷಣಾ ಸಮಿತಿ, ಕೊಡವೂರು.
ಶ್ರೀ ಕೆ ವಿಜಯ್ ಕೊಡವೂರು ಜಿಲ್ಲಾಧ್ಯಕ್ಷರು ಹಿಂದುಳಿದ ವರ್ಗಗಳ ಮೋರ್ಚಾ ಉಡುಪಿ ಜಿಲ್ಲೆ ಮತ್ತು ನಗರಸಭಾ ಸದಸ್ಯರುಗಳು ಕೊಡವೂರು.ಶುಭ ಶಿಕ್ಷಕಿ. ಪ್ರಸಾದ್ ಹಾವಂಜೆ, ಪುಣ್ಯಕೋಟಿ ಗೋ ಸೇವಾ ಟ್ರಸ್ಟ್ (ರಿ.)  ಬ್ರಹ್ಮಾವರ ಟ್ರಸ್ಟಿ. ಶ್ರೀನಿವಾಸ್ ಉಪಾಧ್ಯಾಯ ಕಾರ್ಯಧ್ಯಕ್ಷರು ಬ್ರಾಹ್ಮಣ ಮಹಾಸಭಾ ಕೊಡವೂರು, ಮೈತ್ರಿ ಸಮುದಾಯ ಆರೋಗ್ಯ ಅಧಿಕಾರಿ, ಮಂಜುನಾಥ್ ಭಟ್ ಶೋಭಾ ವಿಕ್ರಂ,ಪ್ರಭಾತ್,ಕೃಷ್ಣ ಜಿ ಕೊಟ್ಯನ್, ಮತ್ತಿತರರು ಹಾಜರಿದ್ದರು.

ಕಿಶನ್ ಕಾರ್ಯಕ್ರಮವನ್ನು ಸ್ವಾಗತಿಸಿ, ಪ್ರಭಾತ್ ಧನ್ಯವಾದ ಸಲ್ಲಿಸಿದರು. ಅಖಿಲೇಶ್ ಕಾರ್ಯಕ್ರಮವನ್ನು ನಿರೂಪಿಸಿದರು.

Leave a Reply

Your email address will not be published. Required fields are marked *