Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಗಾಂಧಿ ಆಸ್ಪತ್ರೆಯಲ್ಲಿ 78ನೇ  ಸ್ವಾತಂತ್ರ್ಯೋತ್ಸವ ಆಚರಣೆ

ಗಾಂಧಿ ಆಸ್ಪತ್ರೆಯಲ್ಲಿ 78ನೇ  ಸ್ವಾತಂತ್ರ್ಯೋತ್ಸವದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಉಡುಪಿ ಜಿಲ್ಲೆಯ ಮುಖ್ಯ ಆಯುಕ್ತರಾದ ಜಯಕರ ಶೆಟ್ಟಿ ಇಂದ್ರಾಳಿಯವರು  ಧ್ವಜಾರೋಹಣ ಗೈದು  ಸ್ವಾತಂತ್ರ್ಯೋತ್ಸವದ ಮಹತ್ವ, ದೇಶದ ಸಂಸ್ಕೃತಿಯ ಬಗ್ಗೆ ಮತ್ತು ಗಾಂಧಿ ಆಸ್ಪತ್ರೆಯ ಸಾಮಾಜಿಕ ಕಳಕಳಿಯ ಕಾರ್ಯಕ್ರಮವು ಎಲ್ಲರಿಗೂ ಮಾದರಿಯಾಗಿದೆ ಎಂದು ಶ್ಲಾಘಿಸಿದರು.


ಸ್ವಾತಂತ್ರ್ಯೋತ್ಸವದ ೭೮ನೇ ಆಚರಣೆಯ ಅಂಗವಾಗಿ ಉಡುಪಿ ನಗರ ಸಭೆಯ ಪೌರ ಕಾರ್ಮಿಕರಾದ ವಿಶಾಲಕ್ಷಿ, ಚಿದಾನಂದ,  ಸುನೀಲ್, ನಿತೇಶ್, ಮತ್ತು ತಿಪ್ಪೇಶ್ ಹಾಗೂ ತ್ಯಾಜ್ಯ ವಿಲೇವಾರಿ ಮಾಡುವ ಸಿಬ್ಬಂದಿಗಳಾದ ದಯಾನಂದ, ಚಂದ್ರು ಮತ್ತು ಮುರಳಿಧರ್‌ರವರನ್ನು ಸನ್ಮಾನಿಸಲಾಯಿತು.


ಶೈಕ್ಷಣಿಕ ಮತ್ತು ಕ್ರೀಡಾ ಕ್ಷೇತ್ರಕ್ಕೆ ಸಂಬ೦ದಪಟ್ಟ೦ತೆ ಮಲ್ಪೆಯ ನಾರಾಯಣ ಗುರು ಇಂಗ್ಲೀಷ್ ಮೀಡಿಯಂ ಶಾಲೆ ಪ್ರತಿಭಾವಂತ ಪ್ರತಿಭೆಯಾದ ಶೇಜಲ್ ಯು. ಸಾಲ್ಯಾನ್, ಆರೂರು ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಉಮಾ ರಮೇಶ್ ಮತ್ತು ಉಡುಪಿ ವಿದ್ಯೋದಯ ಕಾಲೇಜಿನ ಸಂಹಿತಾರವರನ್ನು ಸನ್ಮಾನಿಸಲಾಯಿತು. 


 ಆಸ್ಪತ್ರೆಯ ಸಿಬ್ಬಂದಿಗಳ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು ನೀಡಲಾಯಿತು. ವಿಶೇಷ ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸುವ ಉಡುಪಿಯ ಉಪ್ಪೂರು ಸಾಲ್ಮರದ ಸ್ಪಂದನ ಶಾಲೆಯ ಪ್ರಮುಖರಾದ ಜನಾರ್ದನ ಅವರಿಗೆ ಸಹಾಯಧನ ಹಸ್ತಾಂತರಿಸ ಲಾಯಿತು. ಆದಿಉಡುಪಿಯ ಅಂಗನವಾಡಿಯ ಮಕ್ಕಳಿಗೆ ಬ್ಯಾಗ್ ಮತ್ತು ಇತರ ಪರಿಕರಗಳನ್ನು ನೀಡಲಾಯಿತು. 


ಡಾ. ಮಧುಸೂದನ ನಾಯಕ್, ಡಾ. ಟಿ. ಶ್ರೀಧರ ಬಾಯರಿ, ಡಾ. ಹರ್ಷ ಶೆಟ್ಟಿ, ಡಾ. ವಿದ್ಯಾ ವಿ. ತಂತ್ರಿ, ಡಾ. ಪಂಚಮಿ, ಹಯವದನ ಭಟ್, ದಾಮೋದರ್ ಎಂ. ಭಟ್, ಹಾಗೂ ಪಂಚಮಿ ಟ್ರಸ್ಟ್ನ ಶ್ರೀಮತಿ ಲಕ್ಷ್ಮೀ ಹರಿಶ್ಚಂದ್ರರವರು ಉಪಸ್ಥಿತರಿದ್ದರು. ಆಸ್ಪತ್ರೆಯ ಆಡಳಿತ ನಿರ್ದೇಶಕ ಎಂ. ಹರಿಶ್ಚಂದ್ರರವರು  ಸ್ವಾತಂತ್ರ್ಯೋತ್ಸವ ಯುವ ಜನಾಂಗದ ಸಾಮಾಜಿಕ ಜವಾಬ್ದಾರಿ ಮತ್ತು ಕರ್ತವ್ಯ ನಿಷ್ಠೆಯ ಬಗ್ಗೆ ಪ್ರಸ್ತಾವಿಸಿದರು. 


ವೈದ್ಯಕೀಯ ನಿರ್ದೇಶಕ ಡಾ. ವ್ಯಾಸರಾಜ ತಂತ್ರಿ ಸ್ವಾಗತಿಸಿದರು. ಶ್ವೇತಾರವರು ಕಾರ್ಯಕ್ರಮ ನಿರೂಪಿಸಿದರು. ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು.

Leave a Reply

Your email address will not be published. Required fields are marked *