
ಬೈಂದೂರು: ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಗಂಗೊಳ್ಳಿ, ಸುವರ್ಣ ಮಹೋತ್ಸವ ಪ್ರಯುಕ್ತ ಹಾಗೂ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ ಗಂಗೊಳ್ಳಿ ಘಟಕ, ಶ್ರೀ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ ಕುತ್ವಾಡಿ ಉದ್ಯಾವರ ಇವರ ಸಹಯೋಗದೊಂದಿಗೆ ಗಂಗೊಳ್ಳಿ ಶಾರದಾ ಮಂಟಪದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.
ಬೈಂದೂರು ತಾಲೂಕಿನ ಕಲ್ತೋಡು ಸರಕಾರಿ ಚಿಕಿತ್ಸಾಲಯದ ಆಯುಷ್ ಅಧಿಕಾರಿ ಡಾಕ್ಟರ್ ವೀಣಾ ಕಾರಂತ್ ನೇತೃತ್ವದಲ್ಲಿ ಉಚಿತ ಆರೋಗ್ಯ ಶಿಬಿರ ಉದ್ಘಾಟನೆ ನೆರವೇರಿಸಿ ಮಾತನಾಡಿ ನಾವು ಬದಲಾದ ಜೀವನಶೈಲಿ ಹಾಗೂ ಆಧುನಿಕ ಶೈಲಿಯ ಆಹಾರ ಪದಾರ್ಥಗಳಿಂದ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದೇವೆ, ಮನೆಯಲ್ಲಿ ಗಿಡ ಮರಗಳನ್ನು ನೆಟ್ಟು ಸಣ್ಣ ಪುಟ್ಟ ಆರೋಗ್ಯ ಸಮಸ್ಯೆ ಬಂದರೆ ಮನೆಯ ಮುದ್ದು ಬಳಸಿ, ಉತ್ತಮ ಆರೋಗ್ಯ ಪಡೆದುಕೊಳ್ಳಿ ಎಂದು ಹೇಳಿದರು.

ಮಂಜುನಾಥೇಶ್ವರ ಆಯುರ್ವೇದ ಆಸ್ಪತ್ರೆ ವೈದ್ಯಧಿಕಾರಿ ಡಾ. ನಾಗರಾಜ್ ಅವರು ಈ ಹಿಂದೆಯೂ ಬಹಳಷ್ಟು ಉಚಿತ ಆರೋಗ್ಯ ತಪಾಸಣೆ ಮಾಡಿದ್ದೇವೆ, ಆದರೆ ಉಚಿತ ತಪಾಸಣೆ ಎಂದ ತಕ್ಷಣ ಜನರ ಮನಸ್ಥಿತಿ ಬದಲಾಗುತ್ತದೆ, ಆದರೆ ನಾವು ಮಾತ್ರ ಆರೋಗ್ಯ ಶಿಬಿರ ಆ ಯೋಜನೆ ಮಾಡುವಾಗ ಹಿರಿಯ ವೈದ್ಯಧಿಕಾರಿಗಳು, ತಜ್ಞರನ್ನು ಕೂಡಿಕೊಂಡು ಆರೋಗ್ಯ ತಪಾಸಣೆ ಕಾರ್ಯಕ್ರಮ ನಡೆಸುತ್ತೇವೆ, ಜನರು ಮಾತ್ರ ಬದಲಾಗಬೇಕು ಎಂದು ಹೇಳಿದರು.
ಸಾರ್ವಜನಿಕ ಶ್ರೀ ಶಾರದೋತ್ಸವ ಸುವರ್ಣ ಸಮಿತಿಯ ಅಧ್ಯಕ್ಷ ಸತೀಶ್ ಮಾತನಾಡಿ ನಮ್ಮ ಸಮಿತಿಯಿಂದ ಕಳೆದ ಹಲವು ವರ್ಷಗಳಿಂದ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ, ಚಟುವಟಿಕೆಗಳು, ಮತ್ತು ಆರೋಗ್ಯ ತಪಾಸಣಾ ಶಿಬಿರಗಳು ಮಾಡುತ್ತಾ ಬಂದಿದ್ದೇವೆ, ನಮ್ಮ ಸಂಘದಿಂದ ಊರಿನವರಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲ ಆಗುವ ರೀತಿಯಲ್ಲಿ ಸಹಕರಿಸಿದ್ದೇವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನೂರಕ್ಕೂ ಹೆಚ್ಚು ಆರೋಗ್ಯ ಶಿಬಿರ ಶಿಬಿರಾರ್ಥಿಗಳು ಭಾಗವಹಿಸಿದ್ದರು,
ಡಾ, ನಾಗರಾಜ್ ಹಾಗೂ ತಂಡದವರು ಡಾ. ವೀಣಾ ಕಾರಂತ್ ನೇತೃತ್ವದಲ್ಲಿ ಗಂಗೊಳ್ಳಿಯಲ್ಲಿ ಉಚಿತ ಆಯುರ್ವೇದ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿಯಾಗಿತ್ತು
ಗಂಗೊಳ್ಳಿ ಭಾಗದ ಸ್ಥಳೀಯರು, ಕಟ್ಟಡ ಕಾರ್ಮಿಕರು, ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ , ಶ್ರೀ ಸಂಗಮೇಶ್ವರ ಹಾಗೂ ಶ್ರೀ ಚನ್ನಬಸವೇಶ್ವರ ಯುವಕ ಮಂಡಲ ನಾಯಕವಾಡಿ ಸದಸ್ಯರು ಉಪಸ್ಥಿತರಿದ್ದು, ಕಾರ್ಯಕ್ರಮ ಯಶಸ್ವಿಗೊಳಿಸಿದರು.













Leave a Reply