Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕೊಡವೂರು ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಮಹಾಸಭೆ

ಕೊಡವೂರು ಹಾಲು ಉತ್ಪಾದಕರ ಸಹಕಾರಿ ಸಂಘ ನಿ., ಕೊಡವೂರು ಇದರ ವಾರ್ಷಿಕ ಮಹಾಸಭೆ ಶನಿವಾರದಂದು ಸಂಘದ “ಕ್ಷೀರಧಾಮ” ಸಭಾಂಗಣದಲ್ಲಿ  ಸಂಘದ ಅಧ್ಯಕ್ಷ ಹಾಗೂ ಒಕ್ಕೂಟದ ನಿಕಟ ಪೂರ್ವ ಅಧ್ಯಕ್ಷರು, ಪ್ರಸ್ತುತ ನಿರ್ದೇಶಕ ರವಿರಾಜ ಹೆಗ್ಡೆಯವರ ಅಧ್ಯಕ್ಷತೆಯಲ್ಲಿ ಜರಗಿತು. ಒಕ್ಕೂಟ ಹಾಗೂ ಸಂಘದಲ್ಲಿ ಸಿಗುವ ಸವಲತ್ತಿನ ಬಗ್ಗೆ, ಸಂಘ ಬೆಳೆದು ಬಂದ ದಾರಿ,  ಸಂಘದ ಸದಸ್ಯರಿಗೆ ಹಲವಾರು ಕೊಡುಗೆಯ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು. 

ಸಂಘದ ಮಾಜಿ ಆಧ್ಯಕ್ಷ, ಪ್ರಸ್ತುತ ನಿರ್ದೇಶಕರ ಶ್ರೀ ಪ್ರಸಾದ್ ಕೆ.ಟಿ ಯವರು ಆಡಳಿತ ಮಂಡಳಿ ಸದಸ್ಯರನ್ನು, ಒಕ್ಕೂಟದ ವಿಸ್ತರಣಾಧಿಕಾರಿಯವರನ್ನು ಹಾಗೂ ಎಲ್ಲಾ ಸದಸ್ಯರನ್ನು ಸ್ವಾಗತಿಸಿದರು, ಸಂಘದ ಕಾರ್ಯದರ್ಶಿ ಸಂತೋಷರವರು ವಾರ್ಷಿಕ ವರದಿಯನ್ನು ಓದಿದರು.

ಸಂಘವು 2023-24ನೇ ಸಾಲಿನಲ್ಲಿ ನಿವ್ವಳ ಲಾಭ 4,25,664=05 ರೂಪಾಯಿ ಗಳಿಸಿದ್ದು ಉತ್ಪಾದಕರಿಗೆ ಬೋನಸ್ ರೂ. 2,13,263=00ನ್ನು ನೀಡಲಾಯಿತು. ಜತೆಗೆ ಪ್ರಥಮ, ದ್ವಿತೀಯಾ, ತೃತೀಯಾ ಬಹುಮಾನ ಹಾಗೂ 9 ಉತ್ಪಾದಕರಿಗೆ ಉತ್ತೇಜನ ಬಹುಮಾನದೊಂದಿಗೆ ಸಕ್ರಿಯ ಸದಸ್ಯರಿಗೆ ನಂದಿನಿ ಸಿಹಿ ತಿಂಡಿ ಹಾಗೂ ರಾಸುಗಳಿಗೆ ಖನಿಜ ಮಿಶ್ರಣ ನೀಡಲಾಯಿತು. ಸದಸ್ಯರಿಗೆ 15% ಡಿವಿಡೆಂಡ್ ನೀಡಲಾಯಿತು.

ಸದಸ್ಯರ  8 ಮಂದಿ ಮಕ್ಕಳಿಗೆ ವಿದ್ಯಾರ್ಥಿ ಉತ್ತೇಜನ ಕೊಡುಗೆಯನ್ನು ನೀಡಲಾಯಿತು. ಸಂಘದ ವತಿಯಿಂದ ಹಾಲು ಉತ್ಪಾದಕರಿಗೆ 3 ತಿಂಗಳು ಹೆಚ್ಚುವರಿಯಾಗಿ ಲೀಟರಿಗೆ 1ರೂ. ನಂತೆ ರೂ.55,278.70 ನೀಡಿರುತ್ತದೆ.

ಸಂಘದ ಮುಖಾಂತರ ಒಕ್ಕೂಟದ ರೈತರ ಕಲ್ಯಾಣ ಟ್ರಸ್ಟ್ ನ ವತಿಯಿಂದ ಸಕ್ರಿಯ ಸದಸ್ಯರಿಗೆ ಅನಾರೋಗ್ಯಕ್ಕೆ ತುತ್ತಾದಾಗ ಐವರಿಗೆ ಹಾಗೂ ರಾಸು ಸಾವನ್ನಪ್ಪಿದಾಗ ಒಬ್ಬರಿಗೆ ಒಟ್ಟು ರೂ.1,61,5000=00 ಹಾಗೂ ಸಂಘದ ಮುಖಾಂತರ ಸಂಘಕ್ಕೆ ಹಾಲು ನೀಡುವ ಸದಸ್ಯರಿಗೆ ಒಕ್ಕೂಟದ ಯೋಜನೆಯಾದ ಮಿನಿ ಡೇರಿ ಯೋಜನೆ-ಒಬ್ಬರಿಗೆ, ಹೆಣ್ಣುಕರು ಸಾಕಾಣಿಕೆ ಯೋಜನೆ-22 ಮಂದಿಗೆ, ರಬ್ಬರ್ ಮ್ಯಾಟ್-ಒಬ್ಬರಿಗೆ, ದಿನವಾಹಿ 100ಲೀಟರ್ ಕ್ಕಿಂತ ಜಾಸ್ತಿ ಹಾಲು ನೀಡಿದ ಒಬ್ಬರಿಗೆ ಹಾಗೂ 163ರಾಸುಗಳಿಗೆ ಜಾನುವಾರು ವಿಮೆಯ ಮೂಲಕ ಒಟ್ಟು ರೂ.2,13,619.18 ಒಕ್ಕೂಟವು ನೀಡಿರುತ್ತದೆ.

ಜಾನುವಾರು ವಿಮೆಯ ಮೂಲಕ ೫ ಮಂದಿ ಸಕ್ರಿಯ ಸದಸ್ಯರ ರಾಸು ಸಾವನ್ನಪ್ಪಿದಾಗ ಒಟ್ಟು ರೂ.1,65,000=00 ನೀಡುವಲ್ಲಿ ಸಂಘ ಹಾಗೂ ಒಕ್ಕೂಟ ಸಹಕರಿಸಿರುವ ಬಗ್ಗೆ ಮಾಹಿತಿ ಸದಸ್ಯರಿಗೆ ನೀಡಲಾಯಿತು. ಸಂಘದ ಮುಖಾಂತರ ಸಂಘಕ್ಕೆ ಹಾಲು ನೀಡುವ  13 ಮಂದಿ ಸದಸ್ಯರಿಗೆ ಕೊಡವೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಮೂಲಕ 3% ಬಡ್ಡಿಯ ಒಟ್ಟು 12,55, 000=00 ರೂಪಾಯಿಯ ಸಾಲ  ಹಾಗೂ ರಾಷ್ಟ್ರೀಕತ ಬ್ಯಾಂಕ್ ನ ಕೆಸಿಸಿ ಸಾಲ ಒಬ್ಬರಿಗೆ 70,000=00 ರೂಪಾಯಿ ಮಾಡಿಸುವಲ್ಲಿ ಸಂಘವು ಸಹಕರಿಸಿರುವ ಬಗ್ಗೆ ಮಾಹಿತಿ ನೀಡಲಾಯಿತು. 

ಒಕ್ಕೂಟದ ವಿಸ್ತರಣಾಧಿಕಾರಿಯಾದ ವಿನಯ್ ಕುಮಾರ್ ಬಿ.ಎಸ್ ರವರು ಒಕ್ಕೂಟದಿಂದ ಸದಸ್ಯರಿಗೆ ಸಿಗುವ ಅನುದಾನದ ಬಗ್ಗೆ ತಿಳಿಸಿದರು. ಸಂಘದ ನಿರ್ದೇಶಕರಾದ ಶ್ರೀ ಬಿ. ಗೋಪಾಲ ಶೆಟ್ಟಿ, ಶ್ರೀ ಅಣ್ಣಪ್ಪ ಶೆಟ್ಟಿ, ಶ್ರೀ ಕೃಷ್ಣ ಪ್ರಸಾದ್, ಶ್ರೀ ಗಣೇಶ ಪೂಜಾರಿ, ಶ್ರೀ ರಾಜ ಶೇರಿಗಾರ, ಶ್ರೀ ಸದಾನಂದ ಶೇರಿಗಾರ, ಶ್ರೀಮತಿ ಸುವರ್ಣ ಹೊಳ್ಳ, ಶ್ರೀಮತಿ ಸರಸ್ವತಿ, ಶ್ರೀಮತಿ ಲೀಲಾ ಎಂ., ಶ್ರೀಮತಿ ಹಿಲ್ಡಾ ಕುಂದರ್ ಸಿಬ್ಬಂದಿಗಳಾದ ಸುಮಿತ್ರ, ಸುಧಾ, ಸುಜಯ ಉಪಸ್ಥಿತರಿದ್ದರು. ಸಂಘದ ಅಂತರಿಕ ಲೆಕ್ಕ ಪರಿಶೋಧಕರಾದ ಶ್ರೀ ರಾಮ ಶೇರಿಗಾರ ನಿರೂಪಿಸಿದರು.

Leave a Reply

Your email address will not be published. Required fields are marked *