Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಬೆಂಗಳೂರು: ಜಂಟಿ ಕಾರ್ಮಿಕ ಆಯುಕ್ತರು, ಕಾರ್ಯದರ್ಶಿಗಳು ಮತ್ತು ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯ ಸಭೆ

ಕಾರ್ಮಿಕ ಇಲಾಖೆಯ ವತಿಯಿಂದ ಇಂದು ಕರೆದ ಅಸಂಘಟಿತ ವಲಯದಲ್ಲಿ ಬರುವಂತ ಎಲ್ಲಾ ಕಾರ್ಮಿಕ ಸಂಘಟನೆಗಳ ಸಭೆಯನ್ನು ಕರೆದು ಈ ಒಂದು ಸಭೆಯಲ್ಲಿ ಕರ್ನಾಟಕ ಸರ್ಕಾರದ ಕಾರ್ಮಿಕ ಇಲಾಖೆಯಿಂದ ಕಾರ್ಮಿಕ ಸಚಿವರು ಆದ ಶ್ರೀಯುತ ಸಂತೋಷ್ ಲಾಡ್ ರವರು ಅಸಂಘಟಿತ ವಲಯದ  20 ವರ್ಗದ ಕಾರ್ಮಿಕರಿಗೆ ಸರ್ಕಾರದ ದಿಂದ ಭರಪೂರ ಸೌಲಭ್ಯ ಮತ್ತು ಯೋಜನೆಗಳನ್ನು ಜಾರಿಗೊಳಿಸಿರುತ್ತಾರೆ.

ಈ ಒಂದು ಸರ್ಕಾರದ ಮಟ್ಟದ ಯೋಜನೆ ಮತ್ತು ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಲು 20 ವರ್ಗದ ಅಸಂಘಟಿತ ವಲಯದ ಕಾರ್ಮಿಕರ ಜೊತೆಗೆ ಹೋಟೆಲ್ ಕಾರ್ಮಿಕರನ್ನು ಪರಿಗಣನೆಗೆ ತೆಗೆದುಕೊಂಡು ಈ ಒಂದು ಸಭೆಗೆ ಕರ್ನಾಟಕ ಹೋಟೆಲ್ ಕಾರ್ಮಿಕರ ಸಂಘ(ರಿ) ವನ್ನು ಸಹ ಆಹ್ವಾನಿಸಿರುತ್ತಾರೆ.

ಮೊದಲನೆಯದಾಗಿ “ಹೋಟೆಲ್ ಕಾರ್ಮಿಕರನ್ನು ಈ ಒಂದು ಅಸಂಘಟಿತ ವಲಯದಲ್ಲಿ ಗುರುತಿಸಿ, ಹೋಟೆಲ್ ಕಾರ್ಮಿಕರ ಸಂಘ(ರಿ) ವನ್ನು ಮಾನ್ಯ ರಾಜ್ಯಾಧ್ಯಕ್ಷರಾದ ಶ್ರೀಯುತ ಸತೀಶ್ ಜೋಗಿ ಯವರ ನೇತೃತ್ವದಲ್ಲಿ ನಮ್ಮ ಸಂಘಟನೆಯನ್ನು ಈ ಒಂದು ಸಭೆಗೆ ಆಹ್ವಾನಿಸಿರುವುದು ನಮ್ಮ ಸಂಘಟನೆಗೆ ಹೆಮ್ಮೆಯ ವಿಷಯವಾಗಿದೆ. ಎಂದು ಹೇಳಿದರು

ಹಾಗೆಯೇ ಮಾನ್ಯ ರಾಜ್ಯಾಧ್ಯಕ್ಷರು ನಮ್ಮ ಹೋಟೆಲ್ ಕಾರ್ಮಿಕರ ಸಂಘದ ವತಿಯಿಂದ ನೀಡುವ “ಗುರುತಿನ ಚೀಟಿಗೆ” ಮಾನ್ಯತೆ ನೀಡಿ ಈ ನಮ್ಮ ಹೋಟೆಲ್ ಕಾರ್ಮಿಕರ ಸಂಘದ ವತಿಯಿಂದ ನೀಡಲಾದ ಗುರುತಿನ ಚೀಟಿಯನ್ನು ಪರಿಗಣಿಸಿ ಸರ್ಕಾರದ ಮಟ್ಟದ ಸೌಲಭ್ಯಗಳನ್ನು ನೀಡಬೇಕು ಎಂದೂ ಮಾನ್ಯ ರಾಜ್ಯಾಧ್ಯಕ್ಷರಾದ ಸತೀಶ್ ಜೋಗಿ ಸರ್ ವಿಷಯ ಪ್ರಸ್ತಾಪಿಸುತ್ತಾರೆ. ಈ ವಿಷಯಕ್ಕೆ ಮಾನ್ಯ ಜಂಟಿ ಕಾರ್ಮಿಕ ಆಯುಕ್ತರು ಕೂಡಲೇ ಕರ್ನಾಟಕ ರಾಜ್ಯದಂತ ಕೆಲಸ ಮಾಡುವ ಎಲ್ಲಾ ಹೋಟೆಲ್ ಕಾರ್ಮಿಕರ ಅಂಕಿ ಅಂಶಗಳನ್ನು ಶೇಖರಿಸಿ ಕರ್ನಾಟಕ ಕಾರ್ಮಿಕ ಇಲಾಖೆಗೆ ಹೋಟೆಲ್ ಕಾರ್ಮಿಕರ ಮಾಹಿತಿ ಒದಗಿಸಲು ಹೋಟೆಲ್ ಕಾರ್ಮಿಕರ ಸಂಘಟನೆಗೆ ಜವಾಬ್ದಾರಿ ವಹಿಸಿರುತ್ತಾರೆ. ಹಾಗೂ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಒಂದು ಮನವಿಯನ್ನು ಸಹ ಸಲ್ಲಿಸಲಾಯಿತು. ಕಾರ್ಮಿಕ ಇಲಾಖೆ ಹೋಟೆಲ್ ಕಾರ್ಮಿಕರನ್ನು ಮತ್ತು ನಮ್ಮ ಕರ್ನಾಟಕ ಹೋಟೆಲ್ ಕಾರ್ಮಿಕರ ಸಂಘವನ್ನು ಗುರುತಿಸಿದೆ ಅಂದರೆ ನಾವೊಂದು ಹೆಜ್ಜೆ ಮುಂದೆ ಹೋಗಿದ್ದೇವೆ ಅಂಥ ಅರ್ಥ. ಆದ್ದರಿಂದ ಕರ್ನಾಟಕ ರಾಜ್ಯಾದ್ಯಂತ ಇರುವಂಥ ಎಲ್ಲಾ ಹೋಟೆಲ್ ಕಾರ್ಮಿಕರು ನಮ್ಮ ಕರ್ನಾಟಕ ಹೋಟೆಲ್ ಕಾರ್ಮಿಕರ ಸಂಘಕ್ಕೆ ಸೇರ್ಪಡೆಗೊಂಡು ನಮ್ಮ ಸಂಘಟನೆಯ ಮುಖಾಂತರ ಹೋಟೆಲ್ ಕಾರ್ಮಿಕನ ಗುರುತಿನ ಚೀಟಿಯನ್ನು ಪಡೆದು ಸರ್ಕಾರದಿಂದ ಸಿಗುವಂತಹ ಎಲ್ಲಾ ಸೌಲಭ್ಯಗಳನ್ನು ಪಡೆಕೊಳ್ಳ ಬೇಕಾಗಿ ಈ ಮೂಲಕ ಕರ್ನಾಟಕ ಹೋಟೆಲ್ ಕಾರ್ಮಿಕರ ಸಂಘ ಹೇಳ ಬಯಸುತ್ತಿದೆ. ಎಂದರು..ಸರ್ಕಾರದಿಂದ ಬಹಳಷ್ಟು ಸೌಲಭ್ಯಗಳು ಇದೆ. ಆದರೆ ಸರ್ಕಾರಕ್ಕೆ ಹೋಟೆಲ್ ಕಾರ್ಮಿಕರನ್ನು ಗುರುತಿಸುವುದು ದೊಡ್ಡ ಸವಾಲಿನ ಕೆಲಸವಾಗಿದೆ.  ಈ ಒಂದು ಜವಾಬ್ದಾರಿಯನ್ನು ಕರ್ನಾಟಕ ಸರ್ಕಾರದ ಕಾರ್ಮಿಕ ಇಲಾಖೆಯು ಹೋಟೆಲ್ ಕಾರ್ಮಿಕರ ಸಂಘಕ್ಕೆ ವಹಿಸಿರುತ್ತಾರೆ. ಆದ್ದರಿಂದ ಹೋಟೆಲ್ ಕಾರ್ಮಿಕರೇ ಮುಂದೆ ಬಂದು ಸಂಘಟನೆಯ ಗುರುತಿನ ಚೀಟಿಯನ್ನು ಪಡೆದು ಸರ್ಕಾರದ ಸವಲತ್ತು ಪಡೆಯಬೇಕು ಎಂಬುದಾಗಿ ಕರ್ನಾಟಕ ಹೋಟೆಲ್ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷರಾದ ಶ್ರೀಯುತ ಸತೀಶ್ ಜೋಗಿಯವರು ಮನವಿ ಮಾಡಿರುತ್ತಾರೆ.

ಹಾಗೆಯೇ ಉದ್ಯೋಗದ ದೃಢೀಕರಣದ  ಬಗ್ಗೆ ಚರ್ಚೆ ಆಗಿದೆ. ನಾವು ಹೋಟೆಲ್ ಯಜಮಾನರು ಅದನ್ನ ಕೊಡುವುದಿಲ್ಲ. ಕಾರ್ಮಿಕ ಇಲಾಖಾ ವತಿಯಿಂದ  ಹೋಟೆಲ್ ಕಾರ್ಮಿಕರಿಗೆ ಒಂದು ದೃಢೀಕರಣ ಪತ್ರ ಕೊಡಲು ಮನವಿಯನ್ನ ಮಾಡಿರುತ್ತೇವೆ ಮುಂದಿನ ಹಂತದಲ್ಲಿ ಅದರ ಬಗ್ಗೆ ವಿಮರ್ಶೆ ಮಾಡುತ್ತೇವೆ ಅಂತ ಆಶ್ವಾಸನೆ ಕೊಟ್ಟಿರುತ್ತಾರೆ.

ಮುಂದೆ ಬರುವ ಸರಕಾರದ ಎಲ್ಲಾ ಯೋಜನೆಯನ್ನು ಈ ಕರ್ನಾಟಕ ಹೋಟೆಲ್ ಸಂಘದ ಮುಖಾಂತರ ಉದ್ಯೋಗದ ದೃಢೀಕರಣಕ್ಕಾಗಿ ಸಂಘದ ID ಕಾರ್ಡ್ ನಾವು ಮಾನ್ಯ ಮಾಡುತ್ತೇವೆ, ಅಂತ ಭರವಸೆ ಸಹ ಕೊಟ್ಟಿರುತ್ತಾರೆ .

ರಾಜ್ಯ ಸಮಿತಿ ವತಿಯಿಂದ ರಾಜ್ಯಾಧ್ಯಕ್ಷರು ಶ್ರೀ ಸತೀಶ್ ಜೋಗಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀ ವಿಶ್ವನಾಥ್ ವೀರ,  ಕಾರ್ಯಾಧ್ಯಕ್ಷರು ಶ್ರೀ ಸತ್ಯನಾರಾಯಣ, ಖಜಾಂಚಿ ಶ್ರೀಅಣ್ಣಪ್ಪ ಪೂಜಾರಿ, ಸಂಘಟನಾ ಕಾರ್ಯದರ್ಶಿಗಳಾದ ಶ್ರೀಮತಿ ಸಂಗೀತ ಕೋಟಬಾಗಿ, ಶ್ರೀ ಪ್ರಕಾಶ ಗೌಡ್ರು, ಬೆಂಗಳೂರು ಜಿಲ್ಲಾ ಪದಾಧಿಕಾರಿ ಶ್ರೀ ಜಿ.ಕೆ.ರವಿ ಅವರು ಈ ಒಂದು ಸಭೆಯಲ್ಲಿ ಭಾಗವಹಿಸಿದ್ದರು.

ವರದಿ : ಪುರುಷೋತ್ತಮ್ ಪೂಜಾರಿ

Leave a Reply

Your email address will not be published. Required fields are marked *