
ಬ್ರಹ್ಮಾವರ : ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್ (ರಿ ) ಮತ್ತು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಉಡುಪಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಡುಪಿ ಜಂಟಿಯಾಗಿ ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್ಬಿನಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಕ್ರೀಡಾ ದಿನಾಚರಣೆ 29-8- 2024ರ ಕಾರ್ಯಕ್ರಮದಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀಯುತ ಯಶ್ ಪಾಲ್ ಸುವರ್ಣ ಭಾಗವಹಿಸಿ, ಅಧ್ಯಕ್ಷತೆಯನ್ನು ವಹಿಸಿ, ಹಾಕಿ ಮಾಂತ್ರಿಕ ಮೇಜರ್ ಧ್ಯಾನ್ ಚಂದ್ ರವರ ಭಾವಚಿತ್ರಕ್ಕೆ ಗೌರವವನ್ನು ಸಲ್ಲಿಸಿ ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿ ಪದಕವನ್ನು ಗಳಿಸಿದ ಕ್ರೀಡಾಳುಗಳಿಗೆ ಪ್ರಶಸ್ತಿ ಪತ್ರ ಮತ್ತು ನಗುದು ಬಹುಮಾನವನ್ನು ವಿತರಿಸಿ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ಕ್ರೀಡಾ ಚಟುವಟಿಕೆಗಳಿಗೆ ವಿಶೇಷ ಪ್ರೋತ್ಸಾಹ ನೀಡುವ ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್ಬಿನ ಕಾರ್ಯವೈಖರಿಗೆ ಅಭಿನಂದನೆ ಸಲ್ಲಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀಯುತ ಚೇತನ್ ಕುಮಾರ್ ಶೆಟ್ಟಿ, ಮಾಲಕರು, ನ್ಯೂ ಕರ್ನಾಟಕ ಬಿಲ್ಡರ್ಸ್ ಅಂಡ್ ಡೆವಲಪರ್ಸ್, ಬ್ರಹ್ಮಾವರ ಮತ್ತು ಶ್ರೀಯುತ ಹರಿಪ್ರಸಾದ್ ರೈ, ಅಧ್ಯಕ್ಷರು, ಉಡುಪಿ ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಷನ್, ಉಡುಪಿ ಜಿಲ್ಲೆಯ ಪ್ರತಿಭಾವಂತ ಕ್ರೀಡಾಳುಗಳಿಗೆ ಪ್ರಶಸ್ತಿ ಪತ್ರ ಮತ್ತು ನಗದು ಬಹುಮಾನ ವನ್ನು ವಿತರಿಸುತ್ತ ಸರಕಾರ ಮತ್ತು ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್ಬಿನಂತಹ ಸಂಸ್ಥೆಗಳು ನೀಡುವಂತಹ ಪ್ರೋತ್ಸಾಹವನ್ನು ಉಪಯೋಗಿಸಿಕೊಂಡು ಅಂತರಾಷ್ಟ್ರೀಯ ಮಟ್ಟದಲ್ಲಿ ಪದಕವನ್ನು ಗೆಲ್ಲುವಂತೆ ಕಠಿಣ ಪ್ರಯತ್ನ ಮಾಡಬೇಕೆಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ 45ಕ್ಕೂ ಹೆಚ್ಚು ಬಾರಿ ರಕ್ತದಾನ ಮಾಡಿ ಮತ್ತು ಸಾವಿರಾರು ಕೊಳೆತ, ಅಪಘಾತ ಹೊಂದಿದ, ಹಾಗೂ ಅನಾಥ ಶವಗಳನ್ನ ತನ್ನ ಜೀವನ್ ಮಿತ್ರ ವಾಹನದಲ್ಲಿ ಸಾಗಿಸಿ ಸಹಕರಿಸುವ ಸಮಾಜ ಸೇವಕರಾದ ಶ್ರೀಯುತ ನಾಗರಾಜ್ ಪುತ್ರನ್, ಕೋಟ ಇವರನ್ನು ಹಾಗೆ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿ, ಹಲವಾರು ಗಿಡ ಚಟುವಟಿಕೆಗಳನ್ನು ಸಂಘಟಿಸಿ, ಸಂಪನ್ಮೂಲ ವ್ಯಕ್ತಿಯಾಗಿ ಎಸ್.ವಿ. ಪಿ.ಯು. ಕಾಲೇಜ್, ಗಂಗೊಳ್ಳಿ ಇಂದ ನಿವೃತ್ತರಾದ ದೈಹಿಕ ಶಿಕ್ಷಣ ಉಪನ್ಯಾಸಕರಾದ ಶ್ರೀಯುತ ನಾಗರಾಜ ಶೆಟ್ಟಿ ಯವರನ್ನು ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು.
ಅಂತರಾಷ್ಟ್ರೀಯ ಕುಸ್ತಿಪಟು ಶ್ರೀಯುತ ಸುರೇಶ್ ಪಾಂಡೇಶ್ವರ, ಗ್ರೀಸ್ ನಲ್ಲಿ ನಡೆಯಲಿಕ್ಕಿರುವ ಅಂತರಾಷ್ಟ್ರೀಯ ಕುಸ್ತಿ ಪಂದ್ಯಾಟದಲ್ಲಿ ಭಾಗವಹಿಸಲು ಹೋಗಲಿರುವ ಅಂತರಾಷ್ಟ್ರೀಯ ಕುಸ್ತಿಪಟು ಶ್ರೀಯುತ ಸುರೇಶ್ ಪಾಂಡೇಶ್ವರ ಇವರಿಗೆ ನಮ್ಮ ಕ್ಲಬ್ಬಿನ ಸಂಘಟನಾ ಕಾರ್ಯದರ್ಶಿಗಳು ಹಾಗೂ ಮಾಲಕರು, ಗೋವನ್ ಫ್ರೆಶ್ ಮೆರೆನ್ ಪ್ರೈವೇಟ್ ಲಿಮಿಟೆಡ್, ಕೋಟ ಇವರು ಪ್ರೋತ್ಸಾಹಧನ ನೀಡಿ ಸನ್ಮಾನಿಸಿದರು. ಇನ್ನೋರ್ವ ಮುಖ್ಯ ಅತಿಥಿಗಳಾಗಿ ಡಾಕ್ಟರ್ ರೋಷನ್ ಕುಮಾರ್ ಶೆಟ್ಟಿ, ಸಹಾಯಕ ನಿರ್ದೇಶಕರು, ಮತ್ತು ಕ್ರೀಡಾ ಇಲಾಖೆ,ಉಡುಪಿ ಇವರು ಭಾಗವಹಿಸಿ ಪ್ರತಿಭಾವಂತ ಕೀಡಾಳುಗಳಿಗೆ ಪ್ರಶಸ್ತಿ ಮತ್ತು ಪ್ರೋತ್ಸಾಹ ಧನವನ್ನ ವಿತರಿಸಿ ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್ಬಿನ ಕ್ರೀಡಾ ಪ್ರೋತ್ಸಾಹವನ್ನು ಪ್ರಶಂಸಿದ್ದರು.
ನಮ್ಮಿಂದ ಸನ್ಮಾನಗೊಂಡ ಸಮಾಜಸೇವಕ ಶ್ರೀಯುತ ನಾಗರಾಜ್ ಪುತ್ರನ್ ರವರ ಸನ್ಮಾನ ಪತ್ರವನ್ನು ಕ್ರೀಡಾ ಕಾರ್ಯದರ್ಶಿಗಳಾದ ಶ್ರೀಯುತ ವಿಕ್ರಂ ಪ್ರಭುಗಳು ಮತ್ತು ನಿವೃತ್ತ ದೈಹಿಕ ಶಿಕ್ಷಣ ಉಪನ್ಯಾಸಕರ ಸನ್ಮಾನ ಪತ್ರವನ್ನು ಶ್ರೀಯುತ ಲಿಂಗಪ್ಪನವರು ವಾಚಿಸಿದರು. ಹಾಗೆಯೇ ಪ್ರತಿಭಾವಂತ ಕ್ರೀಡಾಳುಗಳ ಪ್ರಶಸ್ತಿ ಪತ್ರ ಮತ್ತು ಪ್ರೋತ್ಸಾಹ ಧನದ ಪಟ್ಟಿಯನ್ನು ನಮ್ಮ ಕಬ್ಬಿನ ಕ್ರೀಡಾ ಕಾರ್ಯದರ್ಶಿಗಳಾದ ಶ್ರೀಯುತ ಪ್ರಸನ್ನ ಶೆಟ್ಟಿಯವರು ವಾಚಿಸಿದರು. ಪ್ರತಿಭಾವಂತ ಕ್ರೀಡಾಳುಗಳಿಗೆ ಪ್ರೋತ್ಸಾಹಧನ ನೀಡಲು ಸಹಕರಿಸಿದ N. Rack Systems, ಬೆಂಗಳೂರು ಇದರ ಮಾಲಕರಾದ ಶ್ರೀಯುತ ಬಿ. ಶಾಂತರಾಮ್ ಶೆಟ್ಟಿ ಯವರಿಗೆ ಮತ್ತು ಸಹಕರಿಸಿದ ಗೌರವಾನ್ವಿತ ಸದಸ್ಯರಿಗೆ ಕ್ಲಬ್ಬಿನ ಪರವಾಗಿ ಧನ್ಯವಾದಗಳು ಅರ್ಪಿಸಲಾಯಿತು.
ನಮ್ಮ ಕ್ಲಬ್ಬಿನ ಅಧ್ಯಕ್ಷರಾದ ಶ್ರೀಯುತ ಮಹೇಶ್ ಎ. ಶೆಟ್ಟಿ ಯವರು ಸ್ವಾಗತಿಸಿ, ಮೇಜರ್ ಜಿ. ಬಾಲಕೃಷ್ಣ ಶೆಟ್ಟಿ ಅವರು ಸಹಕರಿಸಿದ ಎಲ್ಲರಿಗೂ ವಂದಿಸಿದರು. ಶ್ರೀಯುತ ಲಿಂಗಪ್ಪನವರು ವಾಚಿಸಿದರು. ಹಾಗೆಯೇ ಶ್ರೀಯುತ ಬಿ. ಶಾಂತರಾಮ್ ಶೆಟ್ಟಿ ಯವರಿಗೆ ಮತ್ತು ಸಹಕರಿಸಿದ ಗೌರವಾನ್ವಿತ ಸದಸ್ಯರಿಗೆ ಕ್ಲಬ್ಬಿನ ಪರವಾಗಿ ಧನ್ಯವಾದಗಳು ಅರ್ಪಿಸಲಾಯಿತು. ನಮ್ಮ ಕ್ಲಬ್ಬಿನ ಅಧ್ಯಕ್ಷರಾದ ಶ್ರೀಯುತ ಮಹೇಶ್ ಎ. ಶೆಟ್ಟಿ ಯವರು ಸ್ವಾಗತಿಸಿ, ಮೇಜರ್ ಜಿ. ಬಾಲಕೃಷ್ಣ ಶೆಟ್ಟಿ ಅವರು ಸಹಕರಿಸಿದ ಎಲ್ಲರಿಗೂ ವಂದಿಸಿದರು. ಶ್ರೀಯುತ ಸುರೇಶ ಶೆಟ್ಟಿ ಅವರು ಕಾರ್ಯಕ್ರಮವನ್ನು ನಿರ್ವಹಿಸಿದರು. ಶೆಟ್ಟಿ ಅವರು ಕಾರ್ಯಕ್ರಮವನ್ನು ನಿರ್ವಹಿಸಿದರು.
Leave a Reply