Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕೋಡಿ- ಇಂರ‍್ಯಾಕ್ಟ್ ಪದ ಪ್ರಧಾನ ಸಮಾರಂಭ

ಕೋಟ; ರೋಟರಿ ಕ್ಲಬ್ ಕೋಟ ಸಿಟಿ ಪ್ರಾಯೋಜಕತ್ವದ ಸೋಮ ಬಂಗೇರ ಸರಕಾರಿ ಪ್ರೌಢಶಾಲೆ ಕೋಡಿ ಕನ್ಯಾಣ ಇಂರ‍್ಯಾಕ್ಟ್ ಕ್ಲಬ್ಬಿನ ಪದಪ್ರಧಾನ ಸಮಾರಂಭವು ಇತ್ತೀಚೆಗೆ ನಡೆಯಿತು.

ಮುಖ್ಯ ಅತಿಥಿಗಳಾಗಿ  ಇಂರ‍್ಯಾಕ್ಟ್ ವಲಯ ಕೋರ್ಡಿನೇಟರ್ ಜಗದೀಶ್ ಹೆಚ್ ಅವರು ಮಾತನಾಡಿ, ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣವನ್ನು ಬೆಳೆಸುವ ಕಾರಣದಿಂದಾಗಿಯೇ ಅಂತರಾಷ್ಟಿçÃಯ ರೋಟರಿ ಸಂಸ್ಥೆಯು ಶಾಲಾ ಕಾಲೇಜುಗಳಲ್ಲಿ ಇಂರ‍್ಯಾಕ್ಟ್ ಕ್ಲಬ್‌ಗಳನ್ನು ಸ್ಥಾಪನೆ ಮಾಡಿತ್ತು. ಇಂರ‍್ಯಾಕ್ಟ್ ಸಂಸ್ಥೆಯಲ್ಲಿ  ಸಕ್ರೀಯವಾಗಿ ತೊಡಗಿ, ಕೆಲಸ ಮಾಡಿದಾಗ ನಾಯಕತ್ವ ಗುಣ ಬೆಳೆಯುವುದರೊಂದಿಗೆ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಮುಂದೆ ಸಮಾಜ ಸೇವೆ ಮಾಡಲು ದಾರಿ ದೀಪವಾಗುತ್ತದೆ ಎಂದರು.

ಇ0ರ‍್ಯಾಕ್ಟ್ ಅಧ್ಯಕ್ಷೆಯಾಗಿ ಅಧಿತಿ, ಕಾರ್ಯದರ್ಶಿಯಾಗಿ ಅರ್ಜುನ್ ಅಧಿಕಾರ ಸ್ವೀಕರಿಸಿದರು. ರೋಟರಿ ಅಧ್ಯಕ್ಷ ಅನಿಲ್ ಸುವರ್ಣ ಪದಪ್ರಧಾನ ನೆರವೇರಿಸಿ ಶುಭ ಹಾರೈಸಿದರು. ಶಾಲಾ ಇಂರ‍್ಯಾಕ್ಟ್ ಚೇರಮೆನ್ ಶಿವಾನಂದ ನಾÊರಿ, ಶಾಲಾ ಮುಖ್ಯಸ್ಥೆ ರಾಧಿಕಾ ಶುಭಾಶಂಸನೆಗೈದರು. ಕ್ಲಬ್‌ನ ಮಾಜಿ ಅಧ್ಯಕ್ಷರಾದ ಡಾ.ಗಣೇಶ್, ಸುರೇಶ್ ಆಚಾರ್ ಉಪಸ್ಥಿತರಿದ್ದರು. ರೋಟರಿ ಕಾರ್ಯದರ್ಶಿ ಪ್ರಕಾಶ್ ಪೂಜಾರಿ ವಂದಿಸಿದರು, ಶಾಲಾ ಇಂರ‍್ಯಾಕ್ಟ್ ಸಂಯೋಜಕಿ ಜ್ಯೋತಿ ಕಾರ್ಯಕ್ರಮ ನಿರೂಪಿಸಿದರು.

ರೋಟರಿ ಕ್ಲಬ್ ಕೋಟ ಸಿಟಿ ಪ್ರಾಯೋಜಕತ್ವದ ಸೋಮ ಬಂಗೇರ ಸರಕಾರಿ ಪ್ರೌಢಶಾಲೆ ಕೋಡಿ ಕನ್ಯಾಣ ಇಂರ‍್ಯಾಕ್ಟ್ ಕ್ಲಬ್‌ನ ಇಂರ‍್ಯಾಕ್ಟ್ ಅಧ್ಯಕ್ಷೆಯಾಗಿ ಅಧಿತಿ, ಕಾರ್ಯದರ್ಶಿಯಾಗಿ ಅರ್ಜುನ್ ಅಧಿಕಾರ ಸ್ವೀಕರಿಸಿದರು.

Leave a Reply

Your email address will not be published. Required fields are marked *