
ಕೋಟ: ಯಕ್ಷಗಾನ ಕ್ಷೇತ್ರಕ್ಕೆ ಹವ್ಯಾಸಿ ಯಕ್ಷ ಸಂಘಗಳ ಕೊಡುಗೆ ಅನನ್ಯ ಹಾಗೆ ಒಂದು ವಾರಗಳ ಕಾಲ ಸಪ್ತಾಹ ರಚಿಸುವ ಕಾರ್ಯ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆದಿದೆ ಎಂದು ಕೋಟ ಅಮೃತೇಶ್ವರಿ ದೇಗುಲದ ಪೂರ್ವಾಧ್ಯಕ್ಷ ಆನಂದ್ ಸಿ ಕುಂದರ್ ನುಡಿದರು.
ಸಾಲಿಗ್ರಾಮ ಶ್ರೀ ಗುರುನರಸಿಂಹ ದೇಗುಲದ ವಠಾರದಲ್ಲಿ ಯಕ್ಷಸೌರಭ ಶ್ರೀ ಹಿರೇಮಹಾಲಿಂಗೇಶ್ವರ ಕಲಾರಂಗ ಕೋಟ ಇದರ ಆಶ್ರಯದಲ್ಲಿ ಜಿಲ್ಲೆಯಲ್ಲೆ ಮೊಟ್ಟ ಮೊದಲಬಾರಿಗೆ ಹವ್ಯಾಸಿ ಯಕ್ಷ ಸಂಘವೊAದು ಒಂದು ವಾರಗಳ ಕಾಲ ನಡೆದ ಯಕ್ಷ ಸಪ್ತಾಹ ಸೌರಭ ಸಪ್ತಮಿಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿ ಪ್ರಸ್ತುತ ದಿನಗಳಲ್ಲಿ ಯಕ್ಷಗಾನದ ಸ್ಥಿತಿಗತಿ ಹಾಗೇ ಅದನ್ನು ಉಳಿಸಿ ಬೆಳೆಸುವ ಪರಿಗಳ ಬಗ್ಗೆ ವಿವರಿಸಿದರಲ್ಲದೆ ಕೋಟದಿಂದಲೇ ಹಲವಯ ಹಲವು ಯಕ್ಷಗಾನ ಕಲಾವಿದರು ಮೇಳಗಳು ಮೇಳೈಸಿದ ಇತಿಹಾಸವಿದೆ ಅಂತಯೇ ಯಕ್ಷಸೌರಭ ಕೂಡಾ ಕೋಟ ಹಿರೇಮಹಾಲಿಂಗೇಶ್ವರನ ಸನ್ನಿಧಾನದಿಂದಲೇ ದಶ ವರ್ಷಗಳನ್ನು ಕಾಣುತ್ತಿರುವುದು ಹವ್ಯಾಸಿ ಕ್ಷೇತ್ರ ಹೊಸ ಅದ್ಯಾಯವನ್ನು ಸೃಷ್ಠಿಸಿದೆ ಎಂದರು.
ಇದೇ ವೇಳೆ ಸಪ್ತಾಹದ ಪ್ರಾಯೋಜಕರಲ್ಲೊಬ್ಬರಾದ ಮತ್ಸೊö್ಯÃದ್ಯಮಿ ಶ್ರೀನಿವಾಸ ತಿಂಗಳಾಯರವನ್ನು ಸನ್ಮಾನಿಸಲಾಯಿತು.
ಸಪ್ತಾಹದ ಸೌರಭ ಸಂಮ್ಮಾನವನ್ನು ಸಾಲಿಗ್ರಾಮ ಶ್ರೀಗುರುನರಸಿಂಹ ದೇಗುಲದ ಅಧ್ಯಕ್ಷ ಡಾ.ಕೆ.ಎಸ್ ಕಾರಂತ್‌ರವರಿಗೆ ನೀಡಲಾಯಿತು.
ಯಕ್ಷಗುರು ಪ್ರಸಾದ್ ಕುಮಾರ್ ಮೊಗೆಬೆಟ್ಟು ಇವರಿಗೆ ಗುರುವಂದನೆ ಸಲ್ಲಿಸಲಾಯಿತು. ಯಕ್ಷ ಪೋಷಕರಾದ ಗೆಳೆಯರ ಬಳಗದ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ,ಸಾಲಿಗ್ರಾಮ ದೇಗುಲದ ಕಾರ್ಯದರ್ಶಿ ಲಕ್ಷಿö್ಮÃನಾರಾಯಣ ತುಂಗ ಗೌರವ ಸ್ಮರಣಿಕೆ ನೀಡಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಸಹಕಾರಿ ಧುರೀಣ ಮಂಜುನಾಥ್ ಎಸ್ ಕೆ, ಯಕ್ಷಸೌರಭದ ಗೌರವ ಸಲಹೆಗಾರ ಟಿ.ಮಂಜುನಾಥ್ ಗಿಳಿಯಾರು, ಪತ್ರಕರ್ತರಾದ ಲಕ್ಷ್ಮೀ ಮಚ್ಚಿನ, ರವೀಂದ್ರ ಕೋಟ, ಯಕ್ಷ ಚಿಂತಕ ಹಂದಕುAದ ಅಶೋಕ್ ಕುಮಾರ್ ಶೆಟ್ಟಿ, ಸಾಸ್ತಾನ ಗೋಳಿಗರಡಿ ದೈವಸ್ಥಾನದ ಮುಕ್ತೇಸರ ಜಿ.ವಿಠ್ಠಲ ಪೂಜಾರಿ,ಯಕ್ಷ ಸೌರಭದ ಸ್ಥಾಪಾಕಾಧ್ಯಕ್ಷ ಹರೀಷ್ ಭಂಡಾರಿ ಮತ್ತಿತರರು ಉಪಸ್ಥಿತರಿದ್ದರು. ಯಕ್ಷಸೌರಭದ ಅಧ್ಯಕ್ಷ ರಾಘವೇಂದ್ರ ಕರ್ಕೇರ ಕೋಡಿ ಸ್ವಾಗತಿಸಿ ಪ್ರಾಸ್ತಾವನೆ ಸಲ್ಲಿಸಿದರು.ಕಾರ್ಯಕ್ರಮವನ್ನು ಸೌರಭದ ಸದಸ್ಯ ರಾಜೇಶ್ ಕರ್ಕೇರ ಕೋಡಿ ನಿರೂಪಿಸಿ, ಕಾರ್ಯದರ್ಶಿ ಶ್ರೀನಾಥ್ ಉರಾಳ್ ವಂದಿಸಿದರು.ನAತರ ಪ್ರಸಾದ್ ಕುಮಾರ್ ಮೊಗೆಬೆಟ್ಟು ನಿರ್ದೇಶನದಲ್ಲಿ ಸಂಘದ ಸದಸ್ಯರಿಂದ ಕುಶ ಲವ ಯಕ್ಷಗಾನ ಪ್ರದರ್ಶಗೊಂಡಿತು.
ಸಾಲಿಗ್ರಾಮ ಶ್ರೀ ಗುರುನರಸಿಂಹ ದೇಗುಲದ ವಠಾರದಲ್ಲಿ ಯಕ್ಷಸೌರಭ ಶ್ರೀ ಹಿರೇಮಹಾಲಿಂಗೇಶ್ವರ ಕಲಾರಂಗ ಕೋಟ ಇದರ ಆಶ್ರಯದಲ್ಲಿ ಜಿಲ್ಲೆಯಲ್ಲೆ ಮೊಟ್ಟ ಮೊದಲಬಾರಿಗೆ ಹವ್ಯಾಸಿ ಯಕ್ಷ ಸಂಘವೊAದು ಒಂದು ವಾರಗಳ ಕಾಲ ನಡೆದ ಯಕ್ಷ ಸಪ್ತಾಹ ಸೌರಭ ಸಪ್ತಮಿಯ ಸಮಾರೋಪ ಸಮಾರಂಭದಲ್ಲಿ ಸಪ್ತಾಹದ ಪ್ರಾಯೋಜಕರಲ್ಲೊಬ್ಬರಾದ ಮತ್ಸ್ಯೋದ್ಯಮಿ ಶ್ರೀನಿವಾಸ ತಿಂಗಳಾಯರವನ್ನು ಸನ್ಮಾನಿಸಲಾಯಿತು. ಸಹಕಾರಿ ಧುರೀಣ ಮಂಜುನಾಥ್ ಎಸ್ ಕೆ, ಯಕ್ಷಸೌರಭದ ಗೌರವ ಸಲಹೆಗಾರ ಟಿ.ಮಂಜುನಾಥ್ ಗಿಳಿಯಾರು, ಪತ್ರಕರ್ತರಾದ ಲಕ್ಷ್ಮೀ ಮಚ್ಚಿನ, ರವೀಂದ್ರ ಕೋಟ ಮತ್ತಿತರರು ಇದ್ದರು.
Leave a Reply