
ಕೋಟ: ಶಿಬಿರಗಳು ಅರ್ಥಪೂರ್ಣವಾಗಬೇಕು ಅದು ಕೇವಲ ದೈಹಿಕವಲ್ಲದೆ ಮನೋವಿಕಾಸಕ್ಕೆ ನಾಂದಿಯಾಗಬೇಕು ಎಂದು ಶ್ರೀ ರಾಮಾಮೃತ ಭಜನಾ ಸಂಘ ಕೋಟ ಇದರ ಮುಖ್ಯಸ್ಥ ಪ್ರವೀಣ್ ಕುಂದರ್ ಹೇಳಿದರು
ಕೋಟದ ಸೇವಾಸಂಗಮ ಶಿಶು ಮಂದಿರಲ್ಲಿ ಮೂರು ದಿನಗಳ ಕಾಲ ನಡೆದ ರಜಾ ಸಂಸ್ಕಾರ ಶಿಬಿರದಲ್ಲಿ ಮಾತನಾಡಿ ಪ್ರಸ್ತುತ ದಿನಗಳಲ್ಲಿ ಸಂಸ್ಕಾರಭರಿತ ಶಿಬಿರಗಳು ನೀಡಬೇಕುಆ ಮೂಲಕ ಮಕ್ಕಳನ್ನು ಸುಸಂಸ್ಕöÈತರನ್ನಾಗಿಸುವ ಹೊಣೆಗಾರಿಕೆ ಪ್ರಜ್ಞಾವಂತ ನಾಗರಿಕರಾದ ನಮ್ಮ ಮೇಲಿದೆ.
ಶಿಕ್ಷಣದ ಮೂಲಕ ಮಕ್ಕಳಲ್ಲಿ ನೈಜ ಸಂಸ್ಕಾರ ನೀಡಿದರೆ ಮುಂದಿನ ಜನಾಂಗಕ್ಕೆ ಅದರ ಫಲ ದೊರಕುತ್ತದೆ.ಪ್ರಸ್ತುತ ಶಿಬಿರಗಳಲ್ಲಿ ಭಜನಾ ಸಂಸ್ಕಾರ ನೀಡಲು ಕರೆನೀಡಿ ಮಕ್ಕಳಲ್ಲಿ ಸಾಹಿತ್ಯಿಕ,ಸಾಂಸ್ಕöÈತಿಕ ಚಿಂತನೆ ಬಲಗೊಳ್ಳಲಿ ಎಂದು ಹಾರೈಸಿದರು. ಮೂರು ದಿನಗಳಲ್ಲಿ ನವನವೀನ ವಿಚಾರಧಾರೆ ಇಲ್ಲಿ ನಡೆದ ಶಿಬಿರದಲ್ಲಿ ಧಾರ್ಮಿಕ, ಸಾಂಸ್ಕöÈತಿಕ, ಮನೋವಿಕಾಸಕ್ಕೆ ಬೇಕಾದ ಕೆಲ ಮಾಹಿತಿಗಳನ್ನು ಮಕ್ಕಳಿಗೆ ನೀಡಲಾಯಿತು.
ಸುಮಾರು 60ಕ್ಕೂ ಅಧಿಕ ಮಕ್ಕಳು ಈ ಶಿಬಿರದಲ್ಲಿ ಭಾಗಿಯಾಗಿ ಆಟೋಟ,ಜ್ಞಾನಭಂಢಾರ ಹೆಚ್ಚಿಸುವ ಮಾಹಿತಿ,ಕಲೆ ಇನ್ನಿತರ ವಿಚಾರಗಳು ಸಂಪನ್ಮೂಲ ವ್ಯಕ್ತಿಗಳಾದ ಶಿಕ್ಷಣ ತಜ್ಞ ಸಂಜೀವ ಗುಂಡ್ಮಿ,ಅAಗನವಾಡಿ ಶಿಕ್ಷಕಿಯರಾದ ಯಮುನಾ ಕುಂದರ್ , ಜಯಲಕ್ಷಿ÷್ಮÃ, ಪ್ರಜ್ಞಾ ಶಿಕ್ಷಣ ಸಂಸ್ಥೆ ಮುಖ್ಯ ಸ್ಥರಾದ ಪೂಜಾ ಭಟ್,ಪ್ರಕಾಶ್ ಭಟ್ ,ಪ್ರವೀಣ್ ಕುಂದರ್ ಭಾಗಿಯಾಗಿದರು.
ಸಮಾರೋಪದಲ್ಲಿ ಕೋಟ ಸೇವಾಸಂಗಮ ಶಿಶುಮಂದಿರದ ಅಧ್ಯಕ್ಷೆ ನಾಗಲಕ್ಷಿ÷್ಮÃ ಹೆಗ್ಡೆ,ಉಪಾಧ್ಯಕ್ಷೆ ಗೀತಾ ಎ ಕುಂದರ್,ಸಮಿತಿಯ ಸದಸ್ಯರಾದ ಸಂತೋಷ್ ಪ್ರಭು,ಪ್ರಮೀಳಾ,ರವೀಂದ್ರ ಕೋಟ ,ಮಾತಾಜಿ ಸಂಗೀತ, ಹಿAದಿನ ಮಾತಾಜಿ ದೀಪಾ.ಎಸ್ ಆಚಾರ್,ಸಹಾಯಕಿ ಜ್ಯೋತಿ ,ಶಿಶು ಮಂದಿರದ ಕಾರ್ಯದರ್ಶಿ ಸುಷ್ಮಾ ದಯಾನಂದ್ ವಂದಿಸಿದರು.ವ್ಯವಸ್ಥಾಪಕಿ ಭಾಗ್ಯವಾದಿರಾಜ್ ಶಿಬಿರ ಸಂಯೋಜಿಸಿ ನಿರೂಪಿಸಿದರು. ಇದೇ ವೇಳೆ ಶಿಬಿರಾರ್ಥಿ ವಿದ್ಯಾರ್ಥಿಗಳಿಗೆ ಪ್ರಶಂಸನಾ ಪತ್ರ ನೀಡಲಾಯಿತು.
ಶಿಬಿರಗಳಲ್ಲಿ ಸಾಕಷ್ಟು ಭಾರಿ ಭಾಗವಹಿಸಿದ್ದೆ ಆದರೆ ಇಲ್ಲಿನ ಈ ಶಿಬಿರ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆದಿದೆ ಸಂಪನ್ಮೂಲ ವ್ಯಕ್ತಿಗಳು ಬೇರೆ ಬೇರೆ ವಿಚಾರಗಳನ್ನು ತಿಳಿಸಿ ನಮ್ಮ ಜ್ಞಾನ ಹೆಚ್ಚಿಸುವಲ್ಲಿ ಸಾಕ್ಷಿಯಾದರು. ಚಿನ್ಮಯಿ ಹೊಳ್ಳ ಶಿಬಿರಾರ್ಥಿ ಕೋಟದ ಸೇವಾಸಂಗಮ ಶಿಶು ಮಂದಿರಲ್ಲಿ ಮೂರು ದಿನಗಳ ಕಾಲ ನಡೆದ ರಜಾ ಸಂಸ್ಕಾರ ಶಿಬಿರದಲ್ಲಿ ರಾಮಾಮೃತ ಭಜನಾ ಸಂಘ ಕೋಟ ಇದರ ಮುಖ್ಯಸ್ಥ ಪ್ರವೀಣ್ ಕುಂದರ್ ಮಾತನಾಡಿದರು. ಕೋಟ ಸೇವಾಸಂಗಮ ಶಿಶುಮಂದಿರದ ಅಧ್ಯಕ್ಷೆ ನಾಗಲಕ್ಷಿ÷್ಮÃ ಹೆಗ್ಡೆ,ಉಪಾಧ್ಯಕ್ಷೆ ಗೀತಾ ಎ ಕುಂದರ್, ವ್ಯವಸ್ಥಾಪಕಿ ಭಾಗ್ಯವಾದಿರಾಜ್ ಮತ್ತಿತರರು ಇದ್ದರು.
Leave a Reply