
ಕೋಟ: ಕಳೆದ 28 ವಷ9ಗಳಿಂದ ಯಕ್ಷಗಾನದ ಪ್ರಕಾರಗಳಲ್ಲೊಂದಾದ ಕ್ಷೀಣಿಸುತ್ತಿರುವ ಹೂವಿನಕೋಲು ಕಲೆಯನ್ನು ಉಳಿಸಿ, ಬೆಳಸಲು ಶ್ರಮಿಸುತ್ತಿರುವ ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ, ಐರೋಡಿ ಸಂಸ್ಥೆಯ 2024ರ ಹೂವಿನಕೋಲು ಅಭಿಯಾನ ಕಾರ್ಯಕ್ರಮವನ್ನು ಜಿಲ್ಲೆಯಾದ್ಯಂತ ವಿವಿಧ ಭಾಗಗಳಲ್ಲಿ ಹಮ್ಮಿಕೊಂಡಿದೆ
ಈ ಹಿನ್ನಲ್ಲೆಯಲ್ಲಿ ಇದರ ಉದ್ಷಾಟನಾ ಕಾಯ9ಕ್ರಮವು ಕಲಾಕೇಂದ್ರದ ಅಧ್ಯಕ್ಷ ಆನಂದ ಸಿ ಕುಂದರ್ ಜ್ಯೋತಿ ಬೆಳಗಿಸುವುದರ ಮೂಲಕ ಚಾಲನೆ ನೀಡಿದರು. ಆನಂದ್ ಕುಂದರವರ ಮನೆಯಲ್ಲಿ ನಡೆದ ಕಾಯ9ಕ್ರಮದ ಅಧ್ಯಕ್ಷತೆಯನ್ನು ಸಾಲಿಗ್ರಾಮದ ಗುರುನರಸಿಂಹ ದೇವಸ್ಥಾನದ ನಿಕಟಪೂವ9 ಅಧ್ಯಕ್ಷ ಅನಂತಪದ್ಮನಾಭ ಐತಾಳ ವಹಿಸಿದ್ದರು.
ಗೀತಾನಂದ ಫೌಂಡೇಶನ್ ನಿರ್ದೇಶಕ ರಕ್ಷಿತ್ ಕುಂದರ್, ಕನ್ನಡ ಸಾಹಿತ್ಯ ಪರಿಷತ್ ಬ್ರಹ್ಮಾವರ ತಾಲೂಕು ಅಧ್ಯಕ್ಷ ರಾಮಚಂದ್ರ ಐತಾಳ,ಯಕ್ಷಗಾನದ ಹಿರಿಯ ಕಲಾವಿದ ಕೋಟ ಸುರೇಶ, ರಾಘವೇಂದ್ರ ಮಯ್ಯ,ಕೋಟ ಶಿವಾನಂದ, ಸೀತಾರಾಮ ಸೋಮಯಾಜಿ, ಗುರು ಗಣೇಶ ಚೇಕಾ9ಡಿ, ವೈಕುಂಠ ಹೇಳೆ9 ಉಪಸ್ಥಿತರಿದ್ದರು.
ಕಾಯ9ದಶಿ9 ರಾಜಶೇಖರ ಹೆಬ್ಬಾರ್ ಸ್ಟಾಗತಿಸಿ, ವಂದಿಸಿದರು. ಕಾಯ9ಕ್ರಮದ ಪೂವ9ದಲ್ಲಿ ಶ್ರೀ ಅಮೃತೇಶ್ವರಿ ದೇವಳದಲ್ಲಿ ಸೇವೆ ಸಲ್ಲಿಸಲಾಯಿತು.
ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ, ಐರೋಡಿ ಸಂಸ್ಥೆಯ 2024ರ ಹೂವಿನಕೋಲು ಅಭಿಯಾನವನ್ನು ಕಲಾಕೇಂದ್ರದ ಅಧ್ಯಕ್ಷ ಆನಂದ ಸಿ ಕುಂದರ್ ಜ್ಯೋತಿ ಬೆಳಗಿಸುವುದರ ಮೂಲಕ ಚಾಲನೆ ನೀಡಿದರು. ಸಾಲಿಗ್ರಾಮದ ಗುರುನರಸಿಂಹ ದೇವಸ್ಥಾನದ ನಿಕಟಪೂವ9 ಅಧ್ಯಕ್ಷ ಅನಂತಪದ್ಮನಾಭ ಐತಾಳ, ಗೀತಾನಂದ ಫೌಂಡೇಶನ್ ನಿರ್ದೇಶಕ ರಕ್ಷಿತ್ ಕುಂದರ್, ಕನ್ನಡ ಸಾಹಿತ್ಯ ಪರಿಷತ್ ಬ್ರಹ್ಮಾವರ ತಾಲೂಕು ಅಧ್ಯಕ್ಷ ರಾಮಚಂದ್ರ ಐತಾಳ ಮತ್ತಿತರರು ಇದ್ದರು.
Leave a Reply